ವಿಜಯಪುರ, ಡಿ.22: ಅಯೋಧ್ಯೆಯಲ್ಲಿ ರಾಮ ಮಂದಿರ(Ram Mandir) ಉದ್ಘಾಟನೆಗೆ ಕಾಂಗ್ರೆಸ್ಸಿಗರಿಗೆ ಆಹ್ವಾನದ ವಿಚಾರ ‘ದೇಶದ ಬಗ್ಗೆ ಕಳಕಳಿ ಇದ್ದರೆ, ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದರು. ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಸೋನಿಯಾ ಗಾಂಧಿ ರಾಮ ಮಂದಿರಕ್ಕೆ ಬರುವುದು ಓಟಿಗಾಗಿ, ಸಾಬರ ಓಟ್ ಬೇಕಿದ್ದರೆ ಮೆಕ್ಕಾ ಮದೀನಾಕೆ ಹೋಗಲಿ ಎಂದರು.
25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಅದರಲ್ಲಿ ಕಪೀಲ್ ಸಿಬಲ್ ರಾಮ ಕಲ್ಪನೆ, ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯುವುದು ನಮ್ಮ ಧರ್ಮ. ನಮ್ಮವರು ಹೋಗಿ ಕರೆದಿದ್ದಾರೆ, ಬರೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.
ಇದನ್ನೂ ಓದಿ:ರಾಮಮಂದಿರ ವಿನ್ಯಾಸದಲ್ಲಿ 5,000 ವಜ್ರಖಚಿತ ಹಾರ; ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ಡೈಮಂಡ್ ನೆಕ್ಲೇಸ್ ಸಮರ್ಪಣೆ
ರಾಮಮಂದಿರ ನಿರ್ಮಾಣ ಕುರಿತು ಹಿಂದೂಗಳ ಮನಸ್ಸಿನಲ್ಲಿ ಸಂಕಲ್ಪವಿತ್ತು. 370ನೇ ವಿಧಿ ರದ್ದಾಗಬೇಕೆಂಬುದು ವಾಜಪೇಯಿ ಮತ್ತು ಅಡ್ವಾಣಿ ಕನಸಾಗಿತ್ತು. ಅದಕ್ಕಾಗಿ ಎಲ್.ಕೆ.ಅಡ್ವಾಣಿ ದೇಶದಲ್ಲಿ ರಥಯಾತ್ರೆ ಮಾಡಿದರು. 370ನೇ ವಿಧಿ ತೆಗೆದು ಹಾಕುವ ಮೂಲಕ ಮೋದಿ ಮನಸ್ಸು ಮಾಡಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಆರ್ಎಸ್ಎಸ್ ಕಂಡಿದ್ದ ಕನಸುಗಳು ಎಲ್ಲಾ ಈಡೇರಿವೆ. ಮೊದಲನೇಯದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಕಾಶಿ ಮತ್ತು ಮಥುರಾದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಅಲ್ಲಿ ಹಿಂದೂ ದೇವಸ್ಥಾನಗಳು ಇದ್ದವು ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಅವೆರಡೂ ದೇವಸ್ಥಾನಗಳು ಸಹ ನಮ್ಮ ಪಾಲಾಗುತ್ತವೆ ಎಂದರು.
ಇನ್ನು ಜಮ್ಮು-ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದ್ದೇವೆ. ಭಾರತವನ್ನು ಜಗತ್ತಿನ 5ನೇ ಆರ್ಥಿಕ ಶಕ್ತಿಯನ್ನಾಗಿ ಮೋದಿ ಮಾಡಿದ್ದಾರೆ. ಇನ್ನೊಂದು ಅವಧಿಗೆ ಮೋದಿ ಪ್ರಧಾನಿ ಆದರೆ ವಿಶ್ವನಾಥ ದೇಗುಲ ನಿರ್ಮಾಣವಾಗುತ್ತದೆ. ಅಲ್ಲಿರುವ ಮಸೀದಿ ತೆರವು ಮಾಡಿ ಭವ್ಯವಾದ ವಿಶ್ವನಾಥ ದೇಗುಲ ನಿರ್ಮಾಣ ಮಾಡಲಾಗುವುದು. ಗುಲಾಮಿ ಸಂಕೇತವಿರುವ ಮೂರುವರೆ ಲಕ್ಷ ದೇವಸ್ಥಾನಗಳು ಮುಕ್ತ ಮಾಡುವುದು ವಿಹೆಚ್ಪಿ ಹಾಗೂ ಆರ್ಎಸ್ಎಸ್ ಸಂಕಲ್ಪ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Fri, 22 December 23