ಬೆಳಗಾವಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಇನ್ನೂ 3-4 ಜನರಿದ್ದಾರೆ ಅವರದ್ದೂ ಮುಗಿಯಲು ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ರೀತಿ ಬದಲಾವಣೆ ಅಗತ್ಯವಾಗಿದೆ ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ.
ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಅಂತಾ ನಾನು ಹೇಳಿಲ್ಲ. ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳುತ್ತಿದ್ದೇನೆ. ಇದಕ್ಕಾಗಿ ಪಕ್ಷದ ವರಿಷ್ಠರು ಹೊಸ ಪ್ರಕ್ರಿಯೆ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಮುಂದಿನ ಚುನಾವಣೆಗೆ ಒಳ್ಳೆ ಟೀಮ್ ರಚಿಸಿ ಮತ್ತೆ ಅಧಿಕಾರಕ್ಕೆ ಬರುವ ಪ್ಲ್ಯಾನ್ ಇಟ್ಟಿಕೊಂಡು ಬದಲಾವಣೆ ಮಾಡಬೇಕು ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಡುವುದಿದ್ರೇ ಈಗ ಸಂಪುಟ ವಿಸ್ತರಣೆ ಮಾಡಿ. ಇಲ್ಲವಾದ್ರೇ ಈಗ ಇದ್ದವರನ್ನ ತೆಗೆದುಕೊಂಡು ಚುನಾವಣೆಗೆ ಹೋಗ್ತೀವಿ. ಚುನಾವಣೆ ಆರು ತಿಂಗಳಿದ್ದಾಗ ಸಚಿವರನ್ನಾಗಿ ಮಾಡಿದ್ರೇ ನಾವೇನೂ ಮಾಡುವ ಹಾಗಿಲ್ಲ. ನಮ್ಮ ಮತ ಕ್ಷೇತ್ರವನ್ನೂ ನಾವು ಕಾಯ್ದುಕೊಳ್ಳಬೇಕಾಗುತ್ತದೆ. ಮಂತ್ರಿಯಾಗಿ ಬೆಂಗಳೂರಿನಲ್ಲಿ ಕುಳಿತರೆ ನಮ್ಮ ಕ್ಷೇತ್ರ ಕೈತಪ್ಪುತ್ತೆ. ಈಗ ಸಂಪುಟ ವಿಸ್ತರಣೆ ಆದ್ರೆ ನಾವು ಸಮಯ ಕೊಡಲು ಆಗುತ್ತೆ. ಇಲ್ಲವಾದರೆ ಮೂರು ತಿಂಗಳು ಸನ್ಮಾನ, ಮೂರು ತಿಂಗಳು ಚುನಾವಣೆ ಮಾಡುದಾಗುತ್ತೆ. ಸನ್ಮಾನದ ಹೂವು ಬಾಡಿರುವುದಿಲ್ಲ ನಾವು ಠೇವಣಿ ಕಳೆದುಕೊಳ್ತೇವೆ. ಈಗ ಇದ್ದ ಸಚಿವರಲ್ಲೂ ಕೆಲವರು ಸಂಘಟನಾತ್ಮಕ ಚತುರರಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಹಳ್ಳಿ ಮಟ್ಟದಲ್ಲಿ ಹೊಳೆಯುತ್ತೆ. ಹೊಸದಾಗಿ ಮಂತ್ರಿಯಾದವರಿಗೆ ಅವಕಾಶ ಸಿಕ್ರೇ ಹುರುಪಿನಿಂದ ಕೆಲಸ ಮಾಡ್ತಾರೆ ಎಂದು ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಚಿವರ ವಿರುದ್ಧ ಶಾಸಕಾರದ ಎಸ್.ಟಿ. ಸೋಮಶೇಖರ್, ಎಂ.ಪಿ. ರೇಣುಕಾಚಾರ್ಯ ಆರೋಪ ವಿಚಾರವಾಗಿ ಬೆಳಗಾವಿಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ. ಸಚಿವರು ಬಿಜಿ ಇರಬೇಕು, ಕೆಲಸದಲ್ಲಿರಬೇಕು. ಕಾರ್ಯದ ಒತ್ತಡದಲ್ಲಿರಬೇಕು ಅಂತಾ ಸಚಿವರ ಪರ ಯತ್ನಾಳ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮ ಮಂತ್ರಿಗಳು ಆ ರೀತಿ ಮಾಡಿಲ್ಲ, ನಾನು ಯಾವ ಸಚಿವರಿಗೂ ಪೋನ್ ಮಾಡಲ್ಲ. ನಾನು ನೇರವಾಗಿ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತೇನೆ. ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ಯಾವ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ನನಗೆ ಮಹತ್ವಪೂರ್ಣ ಜವಾಬ್ದಾರಿ ಕೊಡುತ್ತೆ. ಯುಗಾದಿ ಹಬ್ಬಕ್ಕೆ ಹೊಸ ಹೊಸ ಜನರಿಗೆ ಜವಾಬ್ದಾರಿ ಕೊಡ್ತಾರೆ. ಹೊಸ ಮಂತ್ರಿಗಳಾಗ್ತಾರೆ, ರಾಜ್ಯದಲ್ಲಿ ಹೊಸ ಪದಾಧಿಕಾರಿಗಳು ಬರಬಹುದು ಎಂದು ತಿಳಿಸಿದ್ದಾರೆ. ಸಿಎಂ ದೆಹಲಿಗೆ ಹೋಗುತ್ತಿರುವ ವಿಚಾರವಾಗಿಯೂ ಈ ವೇಳೆ ಬೆಳಗಾವಿಯಲ್ಲಿ ಶಾಸಕ ಬಸವನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಅವರು ದೆಹಲಿಯಲ್ಲಿ ಸಂಸದರ ಸಭೆ ಮಾಡಬೇಕು. ಅಧಿವೇಶನ ಹಿನ್ನೆಲೆ ರಾಜ್ಯದ ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರಲು ಸಹಜವಾಗಿ ಇದೊಂದು ಪದ್ಧತಿ ಇದೆ. ಸಂಸದರ ಸಭೆ ಹಿನ್ನೆಲೆ ದೆಹಲಿಗೆ ಹೋಗುತ್ತಿರಬಹುದು ಎಂದು ಹೇಳಿದ್ದಾರೆ.
ಕೂಡಲಸಂಗಮ ಪೀಠಕ್ಕೆ ಪರ್ಯಾಯ ಪೀಠ ಆರಂಭಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಇಂತಹ ನೂರಾಗಲಿ, ಸಾವಿರು ಪೀಠ ಆದ್ರೂ ಎನೂ ಆಗುವುದಿಲ್ಲ. ಪೀಠಗಳು ಆಗುತ್ತವೆ, ಕುರ್ಚಿ ಇಟ್ಟುಕೊಂಡು ಕೂಡುತ್ತಾರೆ. ಪೀಠಗಳಿಂದ ಯಾವುದು ಲಾಭವಿಲ್ಲ ಎಂದು ಹೇಳಿದ್ದಾರೆ. ಜನರನ್ನ ಸೇರಿಸುವುದರಿಂದ ಪೀಠಕ್ಕೆ ಗೌರವ ಬರುವುದಿಲ್ಲ ಎಂದು ಮತ್ತೆ ಸಚಿವ ನಿರಾಣಿ ವಿರುದ್ಧ ಪರೋಕ್ಷವಾಗಿ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಸೋಮಾರಿ ಮಂತ್ರಿಗಳಿದ್ದಾರೆ: ಎಂಎಲ್ಸಿ ಹೆಚ್ ವಿಶ್ವನಾಥ್
ರಾಜ್ಯ ಸಚಿವ ಸಂಪುಟದಲ್ಲಿ ಸೋಮಾರಿ ಮಂತ್ರಿಗಳಿದ್ದಾರೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಬೇಕು. ತಮ್ಮ ಕ್ಷೇತ್ರವೇ ವಿಧಾಸೌಧವೆಂದು ತಿಳಿದು ಮಲಗಿಬಿಟ್ಟಿದ್ದಾರೆ. ಹಿರಿಯರ ಬದಲಿಗೆ ಯುವಕರಿಗೆ ಆದ್ಯತೆಯನ್ನು ನೀಡಲಿ ಎಂದು ಬೆಂಗಳೂರಿನಲ್ಲಿ ಬಿಜೆಪಿ MLC ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ: ಡಿಕೆಶಿ ವಿರುದ್ಧ ಹರಿಹಾಯ್ದ ಯತ್ನಾಳ್
ಇದನ್ನೂ ಓದಿ: ನನ್ನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗುವ ಯೋಗ ಇದ್ದರೆ ಆಗೇ ಆಗ್ತೀನಿ: ಬಸನಗೌಡ ಪಾಟೀಲ ಯತ್ನಾಳ್
Published On - 3:47 pm, Wed, 2 February 22