Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ: ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ

ಬಿಜೆಪಿಯಲ್ಲೂ ಯಡಿಯೂರಪ್ಪ ಬಣ, ಆರ್​ಎಸ್​ಎಸ್​ ಬಣ ಎಂದು ಇದೆ. ಎಲ್ಲ ಪಕ್ಷದಲ್ಲೂ ಗುಂಪುಗಳಿವೆ. ನಮ್ಮ ಪಕ್ಷದಲ್ಲೂ ಗುಂಪುಗಳಿವೆ. ಹಾಗಂತ ನಾವು ಮುಳುಗಿ ಹೋಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಸಿ.ಎಮ್ ರೇಸ್ ನಲ್ಲಿ‌ ಇಲ್ಲ. ಪಕ್ಷ ಕಟ್ಟೋ ರೇಸ್ ನಲ್ಲಿ ಇದ್ದೇನೆ ಎಂದು ಸತೀಶ್ ತಿಳಿಸಿದ್ದಾರೆ.

ನಮ್ಮ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ: ಹೊಸ ಬಾಂಬ್ ಸಿಡಿಸಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us
TV9 Web
| Updated By: ganapathi bhat

Updated on: Feb 02, 2022 | 4:40 PM

ಕೊಪ್ಪಳ: ನಮ್ಮ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ ಆಗಿದ್ದಾರೆ. ಸಿಎಂ ಬೊಮ್ಮಾಯಿಗೆ 6 ತಿಂಗಳ ಅವಕಾಶ ಕೊಟ್ಟಿದ್ದಾರೆ. ಸಿಎಂ ಮಾಡುವಾಗಲೇ 6 ತಿಂಗಳು ಎಂದು ಹೇಳಿದ್ದಾರೆ. ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈ ಬಾರಿಯೂ ಮೂವರು ಸಿಎಂಗಳು ಆಗಲಿದ್ದಾರೆ ಎಂದು ಕೊಪ್ಪಳದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ. ಸಿಎಂ ಆಗುವ ಸಾಮರ್ಥ್ಯ ನಾಲ್ಕೈದು ನಾಯಕರಿಗಿದೆ. ನನ್ನನ್ನು ಬಿಟ್ಟು ನಮ್ಮಲ್ಲಿ 4-5 ನಾಯಕರಿಗೆ ಸಾಮರ್ಥ್ಯವಿದೆ ಎಂದು ಕಾಂಗ್ರೆಸ್ ಅಧಿಕಾರ, ಮುಖ್ಯಮಂತ್ರಿ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶ್ರೀರಾಮುಲು ಡಿ.ಸಿ.ಎಮ್ ಬೇಡಿಕೆ ವಿಚಾರವಾಗಿ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಡಿ.ಸಿ.ಎಮ್ ಆದ್ರೂ ಕೆಲಸ ಮಾಡಬಹುದು. ಡಿ.ಸಿ.ಎಮ್ ಇರದೆ ಹೋದ್ರೂ ಕೆಲಸ ಮಾಡಬಹುದು. ನಮ್ಮ ಸಮುದಾಯಕ್ಕೆ 7.5 ಮೀಸಲಾತಿ ಕೊಡ್ತೀವಿ ಎಂದು ವಾಗ್ದಾನ ಮಾಡಿದ್ರು. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಕೊಡ್ತೀನಿ ಎಂದಿದ್ರು. ಇದೀಗ 24 ತಿಂಗಳು ಕಳೆದಿದೆ, ಸಮಾಜ‌ ಮುಂದಿಟ್ಟು ಅಧಿಕಾರ ಪಡೆಯೋ ಗಿಮಿಕ್ ಇದು ಎಂದು ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.

ಮೀಸಲಾತಿ ಕೊಡ್ತೀನಿ ಅಂದಿದ್ದಕ್ಕೆ ಸಮಾಜ ಬಿಜೆಪಿ ಪರ ವೋಟ್ ಹಾಕಿದ್ರು. ಬಿಜೆಪಿಯಲ್ಲೂ ಯಡಿಯೂರಪ್ಪ ಬಣ, ಆರ್​ಎಸ್​ಎಸ್​ ಬಣ ಎಂದು ಇದೆ. ಎಲ್ಲ ಪಕ್ಷದಲ್ಲೂ ಗುಂಪುಗಳಿವೆ. ನಮ್ಮ ಪಕ್ಷದಲ್ಲೂ ಗುಂಪುಗಳಿವೆ. ಹಾಗಂತ ನಾವು ಮುಳುಗಿ ಹೋಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಸಿ.ಎಮ್ ರೇಸ್ ನಲ್ಲಿ‌ ಇಲ್ಲ. ಪಕ್ಷ ಕಟ್ಟೋ ರೇಸ್ ನಲ್ಲಿ ಇದ್ದೇನೆ ಎಂದು ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯ, ಅನಿವಾರ್ಯ; ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು: ಬಸನಗೌಡ ಪಾಟೀಲ್ ಯತ್ನಾಳ್

ಇದನ್ನೂ ಓದಿ: ಸಚಿವರ ವಿರುದ್ಧ ವರಿಷ್ಠರಿಗೆ, ಸಿಎಂಗೆ ದೂರು ಕೊಟ್ಟಿರುವುದು ನಿಜ: ರೇಣುಕಾಚಾರ್ಯ