AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಕರ್ನಾಟಕದ ಯುವ ಕಾಂಗ್ರೆಸ್‌ ಕಚೇರಿ ಇಸ್ಲಾಂ ಧರ್ಮದ ರೀತಿಯಲ್ಲಿ ಉದ್ಘಾಟನೆ ಎಂಬ ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

ಕಾಂಗ್ರೆಸ್ ಭವನದಲ್ಲಿ ವಿವಿಧ ಧರ್ಮಗಳ ವಿಧಿ ವಿಧಾನಗಳ ಮೂಲಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೆಪಿವೈಸಿಸಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುತ್ತಿರುವ ಚಿತ್ರವನ್ನು ಇಸ್ಲಾಮಿಕ್ ವಿಧಿ ವಿಧಾನಗಳ ಪ್ರಕಾರ ಹೊಸ ಯೂತ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗಿದೆ

Fact Check ಕರ್ನಾಟಕದ ಯುವ ಕಾಂಗ್ರೆಸ್‌ ಕಚೇರಿ ಇಸ್ಲಾಂ ಧರ್ಮದ ರೀತಿಯಲ್ಲಿ ಉದ್ಘಾಟನೆ ಎಂಬ ವೈರಲ್ ಚಿತ್ರದ ಸತ್ಯಾಸತ್ಯತೆ ಏನು?
ವೈರಲ್ ಚಿತ್ರದ ಫ್ಯಾಕ್ಟ್​​ಚೆಕ್
TV9 Web
| Edited By: |

Updated on: Feb 02, 2022 | 6:06 PM

Share

ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಕಚೇರಿಯ (Youth Congress office)ಉದ್ಘಾಟನಾ ಸಮಾರಂಭದಲ್ಲಿನ ಚಿತ್ರ ಎಂದು ಪುರುಷರ ಗುಂಪೊಂದು ಕೋಣೆಯೊಳಗೆ ದುವಾ (ಪ್ರಾರ್ಥನೆ ) ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇವರಿರುವ ಕೋಣೆಯ ಗೋಡೆಯ ಮೇಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಭಾವಚಿತ್ರಗಳನ್ನೂ ಕಾಣಬಹುದು. ಇದು ಮದರಸದ ಉದ್ಘಾಟನೆಯಲ್ಲ, ಕಾಂಗ್ರೆಸ್ ಕಚೇರಿಯ ಉದ್ಘಾಟನೆ ಎಂದು ಪ್ರತೀಶ್ ವಿಶ್ವನಾಥ್ ಎಂಬವರು ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಹಲವರು ಇದೇ ಚಿತ್ರವನ್ನು ಟ್ವೀಟ್ ಮಾಡಿದ್ದು ಫೇಸ್​​ಬುಕ್ ನಲ್ಲಿ ಕಪಿಲ್ ಮಿಶ್ರಾ ಫ್ಯಾನ್ ಪೇಜ್ ನಲ್ಲಿಯೂ ಈ ಫೋಟೊ ಶೇರ್ ಆಗಿದೆ.  ಮುಸ್ಲಿಂ ಧರ್ಮದ ರೀತಿಯಲ್ಲಿ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತೇ? ವೈರಲ್ ಫೋಟೊದ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿಯಲು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ. ಈ ಬಗ್ಗೆ Karnataka youth congress inauguration ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಡೆಕ್ಕನ್ ಹೆರಾಲ್ಡ್​​​ನಲ್ಲಿರುವ ಸುದ್ದಿ ಸಿಕ್ಕಿದೆ. ಈ ಸುದ್ದಿ ಪ್ರಕಾರ ಜನವರಿ 31 ರಂದು ಮೊಹಮ್ಮದ್  ಹ್ಯಾರಿಸ್ ನಲಪಾಡ್  (Mohammed Haris Nalapad)ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (ಕೆಪಿವೈಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹ್ಯಾರಿಸ್ ತಮ್ಮ ಕಚೇರಿಯನ್ನು ಉದ್ಘಾಟಿಸಿದರು ಎಂದು ವರದಿಯಲ್ಲಿ ಹೇಳಿದೆ.

ಫೇಸ್‌ಬುಕ್‌ನಲ್ಲಿ ಇದೇ ಕೀವರ್ಡ್ ಹುಡುಕಾಡಿದಾಗ ನಲಪಾಡ್ ಅವರ ತಂದೆ ಮತ್ತು ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಅವರು ಹಂಚಿಕೊಂಡ ಫೇಸ್‌ಬುಕ್ ಲೈವ್ ವಿಡಿಯೊ ಸಿಕ್ಕಿದೆ, ಅಲ್ಲಿ ಮೊಹಮ್ಮದ್ ಹವನ ಸಮಾರಂಭದಲ್ಲಿ ಭಾಗವಹಿಸುವುದನ್ನು ಕಾಣಬಹುದು. ಹ್ಯಾರಿಸ್‌ಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಇತರ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ವೈರಲ್ ಚಿತ್ರದಲ್ಲಿ ಹೇಳಿರುವಂತೆ “ಹೊಸ ಕಚೇರಿ” ಉದ್ಘಾಟನೆ ಎಂಬ ಹೇಳಿಕೆಯು ನಿಜವಲ್ಲ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಹಾಲಿ ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಸ್ಥಾನಕ್ಕೆ ಹ್ಯಾರಿಸ್ ಬಂದಿದ್ದಾರೆ. ಜನವರಿ 31 ರಂದು ರಕ್ಷಾ ಅವಧಿಯು ಕೊನೆಗೊಂಡಿತ್ತು.ಅವರು ಕಾಂಗ್ರೆಸ್ ಭವನದಲ್ಲಿ ಕೆಲವು ವಿಧಿ ವಿಧಾನಗಳನ್ನು ಮಾಡುವ ಮೂಲಕ ಅಧಿಕಾರ ವಹಿಸಿಕೊಂಡರು. ಯಾವುದೇ ಸುದ್ದಿ ವರದಿಗಳಲ್ಲಿ ಹೊಸ ಕಚೇರಿಯ ಪ್ರಸ್ತಾಪವಿಲ್ಲ. ಹ್ಯಾರಿಸ್ ಅವರು ಟ್ವೀಟ್ ನಲ್ಲಿ “ಕಾಂಗ್ರೆಸ್ ಭವನದಲ್ಲಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಚೇರಿ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಭವನದಲ್ಲಿ ವಿವಿಧ ಧರ್ಮಗಳ ವಿಧಿ ವಿಧಾನಗಳ ಮೂಲಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೆಪಿವೈಸಿಸಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುತ್ತಿರುವ ಚಿತ್ರವನ್ನು ಇಸ್ಲಾಮಿಕ್ ವಿಧಿ ವಿಧಾನಗಳ ಪ್ರಕಾರ ಹೊಸ ಯೂತ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಲಾಗಿದೆ ಎಂಬ ತಪ್ಪಾದ ಶೀರ್ಷಿಕೆಯೊಂದಿಗೆ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಚುನಾವಣೆಗಾಗಿ ಉಡುಗೆ ತೊಡುತ್ತಾರೆ, ಈ ಗಿಮಿಕ್​​ಗಳಿಂದ ದೇಶಕ್ಕೆ ಏನು ಸಿಗುತ್ತದೆ?: ತೆಲಂಗಾಣ ಸಿಎಂ ಕೆಸಿಆರ್

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ