ಬೆಂಗಳೂರು: ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿದ್ದ ಮಸೀದಿ ತೆರವು
ಇದೀಗ ಮಸೀದಿ ತೆರವುಗೊಳಿಸಿ ನೌಕರರ ವಿಶ್ರಾಂತಿಗೃಹಕ್ಕೆ ಮೀಸಲು ಇಡಲಾಗಿದೆ. ಹಿಂದೂಪರ ಸಂಘಟನೆಗಳಿಂದ ದೂರು ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. ವಿಶ್ರಾಂತಿ ಗೃಹದಲ್ಲಿದ್ದ ಉರ್ದು ಭಾಷೆಯ ನಾಮಫಲಕ ತೆರವು ಮಾಡಿದ್ದು ಗಣಪತಿ, ಅಲ್ಲಾ, ಯೇಸು ಫೋಟೋ ಅಳವಡಿಸಲಾಗಿದೆ.
ಬೆಂಗಳೂರು: ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಿವಾದಾತ್ಮಕವಾಗಿದ್ದ ಮಸೀದಿ ತೆರವು ಮಾಡಲಾಗಿದೆ. ಪ್ಲಾಟ್‌ಫಾರಂ 5ರಲ್ಲಿ ನಿರ್ಮಿಸಲಾಗಿದ್ದ ಪ್ರಾರ್ಥನಾ ಮಂದಿರ ತೆರವುಗೊಳಿಸಲಾಗಿದೆ. ಇಲ್ಲಿನ ರೆಸ್ಟ್ ರೂಮ್‌ನ್ನು ಮಸೀದಿಯಾಗಿ ಪರಿವರ್ತಿಸಲಾಗಿತ್ತು. ಮಸೀದಿಯಾಗಿ ಪರಿವರ್ತಿಸಿ ಪ್ರಾರ್ಥನೆ ಮಾಡುತ್ತಿದ್ದರು. ಇದೀಗ ಮಸೀದಿ ತೆರವುಗೊಳಿಸಿ ನೌಕರರ ವಿಶ್ರಾಂತಿಗೃಹಕ್ಕೆ ಮೀಸಲು ಇಡಲಾಗಿದೆ. ಹಿಂದೂಪರ ಸಂಘಟನೆಗಳಿಂದ ದೂರು ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. ವಿಶ್ರಾಂತಿ ಗೃಹದಲ್ಲಿದ್ದ ಉರ್ದು ಭಾಷೆಯ ನಾಮಫಲಕ ತೆರವು ಮಾಡಿದ್ದು ಗಣಪತಿ, ಅಲ್ಲಾ, ಯೇಸು ಫೋಟೋ ಅಳವಡಿಸಲಾಗಿದೆ.
ಬೆಂಗಳೂರು: ಬಿಡಿಎಗೆ 4.21 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ JDS ಮುಖಂಡನ ವಿರುದ್ಧ ಎಫ್ಐಆರ್
ಬಿಡಿಎಗೆ 4.21 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ JDS ಮುಖಂಡ ಹನುಮಂತೇಗೌಡ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಹನುಮಂತೇಗೌಡ ಸೇರಿ 7 ಜನರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ FIR ದಾಖಲಾಗಿದೆ. ನಕಲಿ ಹಿಂಬರಹ ಸೃಷ್ಟಿಸಿ ಬಿಡಿಎಗೆ 4.21 ಕೋಟಿ ವಂಚನೆ ಮಾಡಿರುವ ಬಗ್ಗೆ ಹೇಳಲಾಗಿದೆ. ಬ್ರೋಕರ್, ಮಾಜಿ ಕಾರ್ಪೊರೇಟರ್, ಹನುಮಂತೇಗೌಡ ಸೇರಿ 7 ಜನರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಬೆಂಗಳೂರಿನ ಯಲಹಂಕ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ
ಬೆಂಗಳೂರಿನ ಯಲಹಂಕ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿಟ್ಟೇ ಮೀನಾಕ್ಷಿ ಕಾಲೇಜು ಬಳಿ ಇರುವ ನೀಲಗಿರಿ ತೋಪಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೋಲಾರ: ಕೊಲೆ ಅಪರಾಧಿ ನಾಗೇಶ್ ಎಂಬಾತನಿಗೆ ಜೀವಾವಧಿ ಶಿಕ್ಷೆ
ಕೊಲೆ ಅಪರಾಧಿ ನಾಗೇಶ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. 2019ರ ಮೇ 3ರಂದು ಎಂ. ಮಲ್ಲಾಂಡಹಳ್ಳಿಯಲ್ಲಿ ಗೋಪಾಲಕೃಷ್ಣ ಎಂಬುವವರನ್ನ ಕೊಲೆ ಮಾಡಿದ್ದ ನಾಗೇಶ್ ಎಂಬಾತನಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧಾರವಾಡ: ಜಗಳ ಬಿಡಿಸಲು ಬಂದವನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ
ಜಗಳ ಬಿಡಿಸಲು ಬಂದವನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲ್ ತೋರಿಸಿ ಬಿಜೆಪಿ ಮುಖಂಡ ನಾಗಪ್ಪ ಬೆದರಿಕೆ ಹಾಕಿದ್ದಾರೆ. ಅಂಗಡಿ ವಿಚಾರಕ್ಕೆ ನಾಗಪ್ಪ ಗಾಣಿಗೇರ, ಮಲಿಕ್ ಮಧ್ಯೆ ಜಗಳ ಉಂಟಾಗಿದೆ ಎಂದು ತಿಳಿದುಬಂದಿದೆ. ಜಗಳ ಬಗೆಹರಿಸಲು ಮಧ್ಯೆ ಬಂದಿದ್ದ ಮಡಿವಾಳಪ್ಪಗೆ ಬೆದರಿಕೆ ಹಾಕಲಾಗಿದೆ. ಹಳೇ ದ್ವೇಷ ಹಿನ್ನೆಲೆ ಪಿಸ್ತೂಲ್ ತೋರಿಸಿ ನಾಗಪ್ಪ ಬೆದರಿಕೆ ಹಾಕಿದ್ದಾರೆ. ಗರಗ ಪೊಲೀಸ್ ಠಾಣೆಗೆ ಮಡಿವಾಳಪ್ಪ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ: ವ್ಯಕ್ತಿ ಮೇಲೆ ಹಲ್ಲೆ; ಕೊಲೆ ಯತ್ನ ಪ್ರಕರಣ ದಾಖಲು
ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಬಾಡಿಗೆ ಮನೆ ಖಾಲಿ ಮಾಡಿಸಲು ಮಧ್ಯಸ್ಥಿಕೆ ಹಿನ್ನೆಲೆ ಮೊಹಮ್ಮದ್ ಅನಾಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಐವರ ಗುಂಪು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ