AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಕೈ ತಪ್ಪುತ್ತೆಂದು ಸ್ನೇಹಿತರ ಜೊತೆ ಸೇರಿ ಭಾವಮೈದುನ ನನ್ನೇ ಕೊಲೆ ಮಾಡಿದ ಭಾವ; ಸ್ನೇಹಿತರು ಅರೆಸ್ಟ್, ಮುಖ್ಯ ಆರೋಪಿ ಎಸ್ಕೇಪ್

ಶಿವರಾಜ್ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆಲ್ಟ್ ಬಿಗಿದು ಕೊಲೆ ಮಾಡಿದ್ದಾರೆ. ಆರೋಪಿಗಳ ಅರೆಸ್ಟ್ ಬಳಿಕ‌ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಆರೋಪದ ಮೇಲೆ ಸಿದ್ದು, ಶಿವು, ಭೀಮಣ್ಣ ವಶಕ್ಕೆ ಪಡೆಯಲಾಗಿತ್ತು.

ಆಸ್ತಿ ಕೈ ತಪ್ಪುತ್ತೆಂದು ಸ್ನೇಹಿತರ ಜೊತೆ ಸೇರಿ ಭಾವಮೈದುನ ನನ್ನೇ ಕೊಲೆ ಮಾಡಿದ ಭಾವ; ಸ್ನೇಹಿತರು ಅರೆಸ್ಟ್, ಮುಖ್ಯ ಆರೋಪಿ ಎಸ್ಕೇಪ್
ಆಸ್ತಿ ಕೈ ತಪ್ಪುತ್ತೆಂದು ಭಾವಮೈದುನ ನನ್ನೇ ಕೊಲೆ ಮಾಡಿದ ಭಾವ, ಆರೋಪಿ ಅರೆಸ್ಟ್
TV9 Web
| Edited By: ಆಯೇಷಾ ಬಾನು|

Updated on:Feb 01, 2022 | 3:51 PM

Share

ಆನೇಕಲ್: ಭಾವನಿಂದಲೇ ಭಾವಮೈದುನನ ಕೊಲೆಯಾಗಿರುವ ಘಟನೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದೆ. ಶಿವರಾಜ್(22) ಕೊಲೆಯಾದ ಯುವಕ. ಬೆಲ್ಟ್ ಬಿಗಿದು ಯುವಕನ ಕೊಲೆ ಮಾಡಲಾಗಿದೆ. ಸದ್ಯ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಆಸ್ತಿ ತನಗೆ ಬರದೇ ಭಾವಮೈದುನಿಗೆ ಬರುತ್ತೆ ಎಂದು ಕೊಲೆಗೆ ಸಂಚು ರೂಪಿಸಿದ್ದು ಭಾವ ಶಿವಕುಮಾರ್ ಹಾಗೂ ಸ್ನೇಹಿತರು ಸೇರಿ ಭಾವಮೈದುನನ ಕೊಲೆ ಮಾಡಿದ್ದಾರೆ. ಇದೇ ತಿಂಗಳ 19 ರಂದು ಕೊಲೆ ನಡೆದಿತ್ತು. 23ನೇ ತಾರೀಖು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಯುವಕನ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಮಿಸ್ಸಿಂಗ್ ಕೇಸ್ ದಾಖಲಾಗುವ ಮುನ್ನವೇ ಸೂರ್ಯಸಿಟಿ ಪೊಲೀಸರಿಗೆ ಡೆಡ್ ಬಾಡಿ ಸಿಕ್ಕಿತ್ತು. ಸದ್ಯ ಈಗ ಆರೋಪಿಗಳು ಅರೆಸ್ಟ್ ಆಗಿದ್ದು ಕೊಲೆಯ ಮುಖ್ಯ ಆರೋಪಿ ಎಸ್ಕೇಪ್ ಆಗಿದ್ದಾನೆ.

ಶಿವರಾಜ್ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆಲ್ಟ್ ಬಿಗಿದು ಕೊಲೆ ಮಾಡಿದ್ದಾರೆ. ಆರೋಪಿಗಳ ಅರೆಸ್ಟ್ ಬಳಿಕ‌ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಆರೋಪದ ಮೇಲೆ ಸಿದ್ದು, ಶಿವು, ಭೀಮಣ್ಣ ವಶಕ್ಕೆ ಪಡೆಯಲಾಗಿತ್ತು. A1 ಆರೋಪಿ ಶಿವಕುಮಾರ್ ಕೊಲೆಯ ಪ್ಲ್ಯಾನ್ ಮಾಡಿದ್ದು ಆರೋಪಿ ಪರಾರಿಯಾಗಿದ್ದಾನೆ. ಮೊದಲಿಗೆ ಫೋನ್ ಮಾಡುದ್ರೆ ತಮ್ಮ ಮಗ ಸಂಪರ್ಕಕ್ಕೆ ಸಿಗುತ್ತಿಲ್ಲ ಅಂತ ಶಿವರಾಜ್ ಪೋಷಕರು ಮತ್ತು ಆರೋಪಿ ಶಿವಕುಮಾರ್ ದೂರು ದಾಖಲಿಸಿದ್ದರು.

ಜನವರಿ 22 ನೇ ತಾರಿಖು ಪರಪ್ಪನ ಅಗ್ರಹಾರದಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ದೂರು ದಾಖಲಾಗುವ 3 ದಿನ ಮುಂಚೆಯೇ ಶಿವರಾಜ್ ಹತ್ಯೆ ಮಾಡಲಾಗಿತ್ತು ಎಂಬುವುದು ತಿಳಿದು ಬಂದಿದೆ. 20 ನೇ ತಾರಿಖಿಗೆ ಸೂರ್ಯನಗರ ಪೊಲೀಸರಿಗೆ ಶಿವರಾಜ್ ಮೃತದೇಹ ಸಿಕ್ಕಿತ್ತು. ಪೋಷಕರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು ಕೇಸ್ ಇನ್ವೆಸ್ಟಿಗೇಟ್ಸ್ ಮಾಡಿದ್ದರು. ಶಿವಕುಮಾರ್ ಸ್ನೇಹಿತರನ್ನು ಕರೆದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತರನ್ನು ಪೊಲೀಸ್ ವಶಕ್ಕೆ ಪಡೆಯುತ್ತಲೇ ಆರೋಪಿ ಬಾವ ಶಿವಕುಮಾರ್ ಪರಾರಿಯಾಗಿದ್ದಾನೆ. ಹೆಬ್ಬಗೋಡಿ ಪೊಲೀಸರಿಗೆ ಕೇಸ್ ಹಸ್ತಾಂತರಿಸಲಾಗಿದ್ದು ಶಿವಕುಮಾರ್ ಅರೆಸ್ಟ್ ಮಾಡಲು ಹೆಬ್ಬಗೋಡಿ ಪೊಲೀಸರು ತಂಡ ರಚಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ 12 ವರ್ಷಗಳ ಹಿಂದೆ ನಡೆದ ಬಳ್ಳಾರಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ

Published On - 3:48 pm, Tue, 1 February 22

Follow Us
TV9 Web
TV9 Web

TV9 Kannada

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ