ಮತ್ತೆ ಮುನ್ನೆಲೆಗೆ ಬಂದ 12 ವರ್ಷಗಳ ಹಿಂದೆ ನಡೆದ ಬಳ್ಳಾರಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ

2010ರಲ್ಲಿ ಬಳ್ಳಾರಿಯಲ್ಲಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆಯಾಗಿತ್ತು. ಆದರೆ ಸಿಐಡಿ ತನಿಖೆ ಬಗ್ಗೆ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಪದ್ಮಾವತಿ ಸಹೋದರ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ 12 ವರ್ಷಗಳ ಹಿಂದೆ ನಡೆದ ಬಳ್ಳಾರಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ
ಸಾಂದರ್ಭಿಕ ಚಿತ್ರ
Follow us
| Updated By: sandhya thejappa

Updated on:Jan 30, 2022 | 11:42 AM

ಬಳ್ಳಾರಿ: ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕೊಲೆ (Murder) ನಡೆದು 12 ವರ್ಷಗಳ ಬಳಿಕ ಕೊಲೆ ಕೇಸ್ ಮತ್ತೆ ಸುದ್ದಿಯಾಗಿದ್ದು, ಜನಾರ್ದನ ರೆಡ್ಡಿ (Janardhan Reddy) A1 ಎಂದು ಪದ್ಮಾವತಿ ಸಹೋದರ ಸುಬ್ಬರಾಯಡು ಆರೋಪ ಮಾಡುತ್ತಿದ್ದಾರೆ. ಸಿಐಡಿ ಸೂಕ್ತ ತನಿಖೆ ನಡೆಸದ ಆರೋಪ ಕೇಳಿಬಂದಿದ್ದು, ಸುಬ್ಬರಾಯಡು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಆದರೆ ಸಮಾಧಾನವಾಗುತ್ತದೆ ಎಂದು ಸುಬ್ಬರಾಯಡು ಅಭಿಪ್ರಾಯಪಟ್ಟಿದ್ದಾರೆ.

2010ರಲ್ಲಿ ಬಳ್ಳಾರಿಯಲ್ಲಿ ಮಾಜಿ ಕಾರ್ಪೊರೇಟರ್ ಪದ್ಮಾವತಿ ಕೊಲೆಯಾಗಿತ್ತು. ಆದರೆ ಸಿಐಡಿ ತನಿಖೆ ಬಗ್ಗೆ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಪದ್ಮಾವತಿ ಸಹೋದರ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಎಎಸ್​ಪಿ ಕುರಾದೆ A2 ಆರೋಪಿ ಎಂದ ಪದ್ಮಾವತಿ ಸಹೋದರ, ನನ್ನ ಹೇಳಿಕೆಯನ್ನೇ ಪೊಲೀಸರು ಸರಿಯಾಗಿ ದಾಖಲಿಸಿಲ್ಲ ಅಂತ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಒಳಾಡಳಿತ ಇಲಾಖೆಯಿಂದ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಪತ್ರದ ಬಳಿಕ ಪದ್ಮಾವತಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಬಳ್ಳಾರಿಯಲ್ಲಿ ಫೆಬ್ರವರಿ 4, 2010ಕ್ಕೆ ಮಾಜಿ ಕಾರ್ಪೊರೇಟರ್ ಪದ್ಮಾವತಿ ಅವರು ಕೊಲೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಆದರೆ ತನಿಖೆ ವಿಳಂಬವಾಗಿತ್ತು. ಅಲ್ಲದೆ ತನಿಖೆ ಮೇಲೆ ರಾಜಕೀಯ ಪ್ರಭಾವ ಬೀರಿದೆ ಅಂರ ಆರೋಪಿಸಿದ ಪದ್ಮಾವತಿ ಸಹೋದರ ಸುಬ್ಬರಾಯುಡು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಬಳ್ಳಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. 2017ರಲ್ಲಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ

Coronavirus Cases in India: ಭಾರತದಲ್ಲಿ 2.34 ಲಕ್ಷ ಹೊಸ ಕೊವಿಡ್-19 ಪ್ರಕರಣಗಳು, 893 ಸಾವು ದಾಖಲು

ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್

Published On - 11:41 am, Sun, 30 January 22