Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ

ಸಮಯಕ್ಕೆ ಸರಿಯಾಗಿ ಅಕ್ಕಪಕ್ಕದವರು ಅಲ್ಲಿಗೆ ಬಂದಿದ್ದರಿಂದ ತಾಯಿ-ಮಗಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಬಿಸಿ ಎಣ್ಣೆ ಎರಚಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 02, 2022 | 3:06 PM

ಬೆಂಗಳೂರು: ತನ್ನ ಹೆಂಡತಿಯ ಮೈ ಮೇಲೆ ಗಂಡನೋರ್ವ ಕುದಿಯುವ ಎಣ್ಣೆಯನ್ನು ಸೋಕಿದ ಘಟನೆ ಬೆಂಗಳೂರಿನ (Bangalore) ಆಡುಗೋಡಿ ಸಮೀಪದ ಎಲ್​ಆರ್​ ನಗರದಲ್ಲಿ ನಡೆದಿದೆ. ಈ ವೇಳೆ ತನ್ನ ತಾಯಿಯನ್ನು ಅಪ್ಪನಿಂದ ಕಾಪಾಡಲು ಬಂದ ಮಗಳ ಮೇಲೂ ಆ ವ್ಯಕ್ತಿ ಬಿಸಿ ಎಣ್ಣೆ (Hot Oil) ಎರಚಿದ್ದಾನೆ. ಬೆಂಗಳೂರಿನ 38 ವರ್ಷದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆಕೆಯ ಗಂಡ ಬಳಿಕ ಬಿಸಿ ಎಣ್ಣೆ ಸುರಿದು ಚಿತ್ರಹಿಂಸೆ ನೀಡಿದ್ದಾನೆ. ಆ ವೇಳೆ ಆತನ 13 ವರ್ಷದ ಮಗಳು ಅಲ್ಲಿಗೆ ಬಂದಿದ್ದು, ತನ್ನ ತಾಯಿಯನ್ನು ಕಾಪಾಡಲು ಪ್ರಯತ್ನಿಸಿದ್ದಾಳೆ. ಆಗ ಮಗಳ ಮೇಲೂ ಆತ ಎಣ್ಣೆಯನ್ನು ಸುರಿದಿದ್ದಾನೆ.

ಈ ವೇಳೆ ತಾಯಿ-ಮಗಳಿಬ್ಬರೂ ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ್ದು, ಅಕ್ಕಪಕ್ಕದ ಮನೆಯವರು ಬಂದು ಅವರಿಬ್ಬರನ್ನೂ ಕಾಪಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಿಸಿ ಎಣ್ಣೆ ಎರಚಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಸಮಯಕ್ಕೆ ಸರಿಯಾಗಿ ಅಕ್ಕಪಕ್ಕದವರು ಅಲ್ಲಿಗೆ ಬಂದಿದ್ದರಿಂದ ತಾಯಿ-ಮಗಳಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜ. 31ರ ಮುಂಜಾನೆ ಈ ಘಟನೆ ನಡೆದಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಹೆಂಡತಿ ಮತ್ತು ಮಗಳಿಬ್ಬರಿಗೂ ಎಣ್ಣೆ ಎರಚಿದ ವ್ಯಕ್ತಿಯನ್ನು ಥಾಮಸ್ ಎಂದು ಗುರುತಿಸಲಾಗಿದೆ. ಅಡುಗೆಮನೆಯಲ್ಲಿ ನೀರು ಬಿಸಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಒಳಗೆ ಹೋದ ಥಾಮಸ್ ನೀರಿನ ಬದಲು ಎಣ್ಣೆಯನ್ನು ಬಿಸಿ ಮಾಡಿದ್ದಾನೆ. ಬಳಿಕ ಹೊರಗೆ ಕುಳಿತಿದ್ದ ತನ್ನ ಹೆಂಡತಿಯ ತಲೆಗೆ ಕೋಲಿನಿಂದ ಹೊಡೆದಿದ್ದಾನೆ. ಇದರಿಂದ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ನಂತರ ಮತ್ತೆ ಅಡುಗೆಮನೆಗೆ ಹೋದ ಆತ ಆಕೆಯ ಮೈಮೇಲೆ ಬಿಸಿ ಎಣ್ಣೆಯನ್ನು ಹಾಕಿದ್ದಾನೆ. ಹೆಂಡತಿಯನ್ನು ಕೊಲೆ ಮಾಡಲೆಂದೇ ಆತ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆದರೆ, ಅಪ್ಪ-ಅಮ್ಮನ ಗಲಾಟೆಯ ವೇಳೆ ರೂಮಿನಲ್ಲಿ ಮಲಗಿದ್ದ 13 ವರ್ಷದ ಮಗಳಿಗೆ ಎಚ್ಚರವಾಗಿ ಹೊರಗೆ ಬಂದಿದ್ದಾಳೆ. ಅಮ್ಮನಿಗೆ ಅಪ್ಪ ಹೊಡೆಯುತ್ತಿರುವುದನ್ನು ನೋಡಿ ಆಕೆ ಅಡ್ಡ ಬಂದಿದ್ದಾಳೆ. ಆಗ ಥಾಮಸ್ ತನ್ನ ಮಗಳ ಕೈಮೇಲೂ ಬಿಸಿ ಎಣ್ಣೆ ಸುರಿದು ಸುಟ್ಟಿದ್ದಾನೆ. ಇದೀಗ ಪೊಲೀಸರು ಥಾಮಸ್​ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣದಿಂದ ಆತ ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದ ಎಂಬುದು ಇನ್ನೂ ತಿಳಿದಿಲ್ಲ.

ಇದನ್ನೂ ಓದಿ: Crime News: ಬ್ಲಾಕ್ ಮ್ಯಾಜಿಕ್ ಶಂಕೆ; ವೃದ್ಧ ದಂಪತಿಯನ್ನು ಕೊಂದು, ಗುಡಿಸಲಲ್ಲಿ ಸುಟ್ಟು ಹಾಕಿದ ಯುವಕ

Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ