ಪ್ರಧಾನಿ ಮೋದಿ ಬಜೆಟ್ ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ ಮಾಜಿ ಸಚಿವ ಸುರೇಶ್ ಕುಮಾರ್

ನಡೆದಾಡುತ್ತಲೇ ಮೊಬೈಲ್ ಮೂಲಕ ಪ್ರಧಾನಿ ಮೋದಿ ಅವರ ಭಾಷಣವನ್ನು ಮಾಜಿ ಸಚಿವ ಸುರೇಶ್ ಕುಮಾರ್(Ex Minister suresh kumar) ಕೇಳಿದ್ದಾರೆ. ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ್ದಾರೆ.

ಪ್ರಧಾನಿ ಮೋದಿ ಬಜೆಟ್ ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ ಮಾಜಿ ಸಚಿವ ಸುರೇಶ್ ಕುಮಾರ್
ಪ್ರಧಾನಿ ಮೋದಿ ಬಜೆಟ್ ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ ಮಾಜಿ ಸಚಿವ ಸುರೇಶ್ ಕುಮಾರ್
TV9kannada Web Team

| Edited By: Ayesha Banu

Feb 02, 2022 | 2:02 PM


ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಫೆಬ್ರವರಿ 01ರಂದು 2022-23ನೇ ಸಾಲಿನ ಬಜೆಟ್(Budget 2022) ಮಂಡನೆ ಮಾಡಿದ ಬೆನ್ನಲ್ಲೆ ಇಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಡೆದಾಡುತ್ತಲೇ ಮೊಬೈಲ್ ಮೂಲಕ ಪ್ರಧಾನಿ ಮೋದಿ ಅವರ ಭಾಷಣವನ್ನು ಮಾಜಿ ಸಚಿವ ಸುರೇಶ್ ಕುಮಾರ್(Ex Minister suresh kumar) ಕೇಳಿದ್ದಾರೆ. ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ್ದಾರೆ. ಹೆಜ್ಜೆ ಹಾಕಿದ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಒಟ್ಟು ಭಾಷಣವನ್ನು ಕೇಳುತ್ತಲೇ ನಾನು ಸುಮಾರು 8000 ಹೆಜ್ಜೆಗಳನ್ನು ಹಾಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಸುರೇಶ್ ಕುಮಾರ್ ಫೇಸ್​ಬುಕ್ ಫೋಸ್ಟ್ ಹೀಗಿದೆ:
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಿಜೆಪಿಯ ಕಾರ್ಯಕರ್ತರನ್ನು ಉದ್ದೇಶಿಸಿ ಆತ್ಮ ನಿರ್ಭರ ಅರ್ಥವ್ಯವಸ್ಥೆಯ ಬಗ್ಗೆ ಇಂದು ಮಾತನಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿ ಜನಜೀವನ ಮಿಷನ್, ಗ್ರಾಮೀಣ ಮನೆಗಳ ನಿರ್ಮಾಣ, ದೇಶದ Aspirational Districts ಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಕುರಿತು, ಭಾರತದ ಗಡಿಭಾಗಗಳಲ್ಲಿ ಯೋಜಿಸಿರುವ Vibrant Village Development, ಗಡಿಭಾಗದ ಶಾಲೆಗಳಲ್ಲಿ NCC ಪ್ರಾರಂಭಿಸುವುದು, ಪರ್ವತ ಮಾಲಾ ಕಾರ್ಯಕ್ರಮ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚಿಸುವುದು, ಕಿಸಾನ್ ಡ್ರೋನ್ Facility, ರಾಸಾಯನಿಕ ಮುಕ್ತ ಕೃಷಿಗೆ ಒತ್ತು, Natural Farming Corridor, ಕೃಷಿ ಚಟುವಟಿಕೆಗಳಿಗೆ ಸೋಲಾರ್ ಶಕ್ತಿಯ ಉಪಯೋಗ ಪಡೆಯುವುದು, yuva innovation, ಯುವ ಆಕಾಂಕ್ಷೆಗಳ ಪೂರೈಸಲು ಕಾರ್ಯಕ್ರಮ….ಇತ್ಯಾದಿಗಳ ಕುರಿತು ಈ ಬಾರಿಯ ಬಜೆಟ್ ನಲ್ಲಿ ನೀಡಿರುವ ಮಹತ್ವ ವಿವರಿಸಿದರು. ಈ ಒಟ್ಟು ಭಾಷಣವನ್ನು ಕೇಳುತ್ತಲೇ ನಾನು ಸುಮಾರು 8000 ಹೆಜ್ಜೆಗಳನ್ನು ಹಾಕಿದೆ.

ನರೇಂದ್ರ ಮೋದಿ ಅವರ ಭಾಷಣ

ಇದನ್ನೂ ಓದಿ:PM Narendra Modi Speech ಬಡವರು, ಮಧ್ಯಮ ವರ್ಗ ಮತ್ತು ಯುವಕರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಬಜೆಟ್ ಗಮನಹರಿಸಿದೆ: ಮೋದಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada