ಬಾಗಲಕೋಟೆ: ಶೇಕಡಾ 40 ರಷ್ಟು ಕಮಿಷನ್ ಆರೋಪ ಪ್ರಕರಣ ಬಳಿಕ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪ್ರಕರಣದ ಸಮಗ್ರ ತನಿಖೆ ಆಗಬೇಕು. ಇಷ್ಟೆಲ್ಲಾ ಆದರೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡಿಕೆ ಅವರ ರಾಜಕೀಯ ವಿವೇಚನೆಗೆ ಬಿಟ್ಟದ್ದು. ಇವರಿಗೆಲ್ಲ ಜನ ತಕ್ಕ ಪಾಠ ಕಲಿಸ್ತಾರೆ, ಸರಿಯಾಗಿ ಉತ್ತರ ಕೊಡುತ್ತಾರೆ. ಎರಡು ಪಕ್ಷದವರಿಗೂ ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಐಷಾರಾಮಿ ಮನೆಗಳು, ಐಷಾರಾಮಿ ವಾಹನಗಳು ಎಲ್ಲಿಂದ ಬರುತ್ತವೆ. ಇದೆಲ್ಲಾ ಶೇಕಡಾ 40ರಷ್ಟು ಕಮಿಷನ್ ದಂಧೆಯಿಂದಲೇ ಬರುತ್ತವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಬಗ್ಗೆ ಬಾಗಲಕೋಟೆಯಲ್ಲಿ ಎಎಪಿ ಮುಖಂಡ ಭಾಸ್ಕರ ರಾವ್ ಹೇಳಿಕೆ ನೀಡಿದ್ದಾರೆ.
ಪಂಜಾಬ್, ದೆಹಲಿ ರೀತಿ ಕರ್ನಾಟಕದಲ್ಲಿ ಬದಲಾವಣೆಯಾಗಬೇಕು. ಕರ್ನಾಟಕದಲ್ಲೂ ಅದೇ ರೀತಿ ಯಾಕೆ ಬದಲಾವಣೆಯಾಗೋದಿಲ್ಲ. ಆಪ್ಗೆ ಡಾಕ್ಟರ್ಸ್, ಇಂಜಿನಿಯರ್ಸ್, ಯುವಕರು ಬರುತ್ತಿದ್ದಾರೆ. ಆಪ್ ಸೇರಲು ಬೇರೆ ಬೇರೆ ಪಕ್ಷದ ಮುಖಂಡರಿಂದ ಸಂಪರ್ಕ ಮಾಡಿದ್ದಾರೆ. ಹಲವು ಮುಖಂಡರು ಪಕ್ಷ ಬಿಟ್ಟು ಎಎಪಿ ಸೇರ್ಪಡೆಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ ರಾವ್ ಹೇಳಿದ್ದಾರೆ.
ಎಲ್ಲೋ ಒಂದು ಕಡೆ ಅಪಘಾತವಾದಾಗ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಜೀನಾಮೆ ಕೊಟ್ಟಿದ್ದರು. ಅಂತಹ ಮಹಾನ್ ವ್ತಕ್ತಿಗಳು ನಮ್ಮಲ್ಲಿದ್ದಾರೆ. ಆದರೆ, ಇಷ್ಟೆಲ್ಲ ಆದ ಮೇಲೂ ಈಶ್ವರಪ್ಪ ರಾಜೀನಾಮೆ ಕೊಡಲಿಲ್ಲ ಅಂದ್ರೆ, ಅದು ಅವರ ರಾಜಕೀಯ ವಿವೇಚನೆಗೆ ಬಿಟ್ಟಿದ್ದು. ಇವರಿಗೆಲ್ಲ ಜನ ತಕ್ಕ ಪಾಠ ಕಲಿಸ್ತಾರೆ, ಸರಿಯಾಗಿ ಉತ್ತರ ಕೊಡುತ್ತಾರೆ. ಎರಡು ಪಕ್ಷದವರಿಗೂ ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಬಸ್ಸಲ್ಲಿ ನಿಂತು ಶಾಲೆಗೆ ಹೋದವನು. ರಾಜಕಾರಣಿಗಳ ಮಕ್ಕಳು ಪುಕ್ಸಟ್ಟೆ ಹಣದಿಂದ ಮಜಾ ಮಾಡೋದು. ಇದಕ್ಕೆಲ್ಲ ಹಣ ಕಮಿಷನ್ ದಂಧೆಯೇ ಕಾರಣ. ನನಗೆ ಇನ್ನೂ ಮೂರು ವರ್ಷ ಸೇವೆ ಇತ್ತು. ಇನ್ನು ಉನ್ನತ ಹುದ್ದೆ ಪಡೆಯಬಹುದಿತ್ತು. ಆಮ್ ಆದ್ಮಿ ಪಕ್ಷ ಸೇರಿದ್ದು ಸಾಮಾನ್ಯ ಜನರ ಮೇಲೆತ್ತೋದಕ್ಕೆ. ರಾಜಕೀಯ, ಆರ್ಥಿಕತೆ ಎಲ್ಲವೂ ಹಂಚಿಕೆಯಾಗಬೇಕು. ಆಮ್ ಆದ್ಮಿ ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಯುವಕರನ್ನು, ಮಹಿಳೆಯರನ್ನು, ಪ್ರಾಮಾಣಿಕರನ್ನು ಸಂಘಟಿಸುತ್ತಿದ್ದೇನೆ. ಯುವಕರು ಎಮ್ಎಲ್ಎ, ಎಮ್ಪಿಗಳಾಗಬೇಕು. ಅಧಿಕಾರದ ಕೇಂದ್ರಿಕರಣ ಹೋಗಬೇಕು ಎಂದು ತಿಳಿಸಿದ್ದಾರೆ.
ನಾನಜ ಬಿಜೆಪಿ ಕಾಂಗ್ರೆಸ್ ಸೇರಬಹುದಿತ್ತು. ಆದರೆ ನಾನು ಒಂದು ಮಿಷನ್ನಿಂದ ಹೊರಟಿದ್ದೇನೆ. ಪಂಜಾಬ್, ದೆಹಲಿ ರೀತಿ ಕರ್ನಾಟಕದಲ್ಲಿ ಬದಲಾವಣೆಯಾಗಬೇಕು. ದೆಹಲಿ, ಪಂಜಾಬ್ನಲ್ಲಿಯೇ ಸಾಧ್ಯ ಆದರೆ ಕರ್ನಾಟಕದಲ್ಲಿ ಯಾಕೆ ಬದಲಾವಣೆಯಾಗೋದಿಲ್ಲ. ಕರ್ನಾಟಕದ ಜನ ಪ್ರಜ್ಞಾವಂತರು. ನಮ್ಮ ಪಕ್ಷಕ್ಕೆ ಡಾಕ್ಟರ್ಸ್, ಇಂಜಿನಿಯರ್ಸ್ ಸೇರುತ್ತಿದ್ದಾರೆ. ಯುವಕರು ಬರುತ್ತಿದ್ದಾರೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು: ಕೆಎಸ್ ಈಶ್ವರಪ್ಪ