ಮೀಸಲಾತಿಗೆ ಬಿಜೆಪಿ ಬದ್ಧವಾಗಿದೆ: ಸರ್ವಪಕ್ಷ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಘೋಷಣೆ -ಕಾರ್ಯಕಾರಿಣಿಯಲ್ಲಿ ಕಟೀಲು ಅಭಿನಂದನೆ

ಎಸ್ ಸಿ, ಎಸ್ ಟಿ ಮೀಸಲಾತಿ ಕೊಡಬೇಕು ಅಂತಾ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬೊಮ್ಮಾಯಿಗೆ ಒತ್ತಾಯ ಮಾಡಿದ್ವಿ. ಅದನ್ನ ಅನುಷ್ಠಾನಕ್ಕೆ ತರುವುದಾಗಿ ಸಿಎಂ ಹೇಳಿದ್ದಾರೆ. ಅವರಿಗೆ ಪಕ್ಷದ ಪರವಾಗಿ ಚಪ್ಪಾಳೆ ತಟ್ಟಿ ಅಭಿನಂದಿಸುತ್ತೇವೆ- ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು

ಮೀಸಲಾತಿಗೆ ಬಿಜೆಪಿ ಬದ್ಧವಾಗಿದೆ: ಸರ್ವಪಕ್ಷ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಘೋಷಣೆ -ಕಾರ್ಯಕಾರಿಣಿಯಲ್ಲಿ ಕಟೀಲು ಅಭಿನಂದನೆ
ಮೀಸಲಾತಿಗೆ ಬಿಜೆಪಿ ಬದ್ಧವಾಗಿದೆ: ಸರ್ವಪಕ್ಷ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಘೋಷಣೆ -ಕಾರ್ಯಕಾರಿಣಿಯಲ್ಲಿ ಕಟೀಲು ಅಭಿನಂದನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 07, 2022 | 2:29 PM

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಸಭೆ ಆಯೋಜಿಸಲಾಗಿದೆ. ಕಾರ್ಯಕಾರಿಣಿ ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಚಾಲನೆ ನೀಡಿದರು. ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಾಂದ್ಲಾಜೆ, ಸಿಟಿ ರವಿ, ಜಗದೀಶ್ ಶೆಟ್ಟರ್, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದ ಭಗಂವತ ಖೂಬಾ, ನಾರಾಯಣ ಸ್ವಾಮಿ, ಅರುಣಾ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದರು. ಕಾರ್ಯಕಾರಿಣಿ ಸಭೆಯಲ್ಲಿ 592 ಸದಸ್ಯರು ಭಾಗಿಯಾಗಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕಾರಿಣಿ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಪ್ರತಿ 3 ತಿಂಗಳಿಗೊಮ್ಮೆ ಬಿಜೆಪಿಯಲ್ಲಿ ಸಭೆ ನಡೆಯುತ್ತಿದೆ. ಬೇರೆ ಯಾವ ಪಕ್ಷದಲ್ಲೂ ಈ ರೀತಿ ನಡೆಯೊದಿಲ್ಲ. ನಮಗೆ ಒಂದು ಕಾರ್ಯಸೂಚಿ ಇದೆ, ಸದಾ ಚಲನಶೀಲತೆ ಇರುವ, ಜನರಿಗೆ ಹತ್ತಿರವಿರುವ ಪಕ್ಷ ನಮ್ಮದು. ಹೀಗಾಗಿ ಪ್ರತಿ 3 ತಿಂಗಳಿಗೆ ಸಭೆ ಮಾಡ್ತೀವಿ. ಬೇರೆ ಪಕ್ಷದಲ್ಲಿ ಯಾವುದಕ್ಕೂ ದಿಕ್ಸೂಚಿ ಇಲ್ಲ. ಜನ ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟಂತೆ ಬೇರೆ ಪಕ್ಷದ ಮೇಲೆ ಇಟ್ಟಿಲ್ಲ. ಅವರೇನೆ ಸ್ಟಂಟ್ ಮಾಡಲಿ ವಿಪಕ್ಷಗಳ ಮೇಲೆ ಜನರಿಗೆ ನಂಬಿಕೆ ಇಲ್ಲ. ಬಿಜೆಪಿ ಬಗ್ಗೆ ಜನರು ನಂಬಿಕೆ ಇಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ 3 ವರ್ಷದಿಂದ ಅಧಿಕಾರ ನಡೆಸುತ್ತಿದೆ ಎಂದರು.

ಎಸ್​ಸಿ, ಎಸ್​ಟಿ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ: ನಮ್ಮ ಪಕ್ಷದ ಮೇಲೆ ರಾಜ್ಯದ ಜನತೆ ನಂಬಿಕೆ ಇಟ್ಟಿದ್ದಾರೆ. ವಿಪಕ್ಷಗಳು ಅಧಿಕಾರಕ್ಕೇರಲು ಏನೇ ಸ್ಟಂಟ್ ಮಾಡಿದರೂ ಜನ ನಂಬಲ್ಲ. 36 ಸ್ಥಾನ ಪಡೆದಿದ್ದ ಪಕ್ಷಕ್ಕೆ ಕಾಂಗ್ರೆಸ್ ಅಧಿಕಾರ ನೀಡಿತ್ತು. ವಾಮಮಾರ್ಗದಿಂದ ರಚಿಸಿದ್ದ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡದೆಯೇ ಅಕ್ರಮ ಬಿಲ್ ಮಾಡಲಾಗಿದೆ. ​ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಲ್ಲಿ ಹಾಸಿಗೆ ಮತ್ತು ದಿಂಬುನಲ್ಲಿ ಅಕ್ರಮ ಎಸಗಲಾಗಿದೆ. ಅಂದಿನ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಡಿಐಜಿ ಮೇಲೆ ಆರೋಪವಿದೆ. ಆದರೂ ಅಂದಿನ ಕಾಂಗ್ರೆಸ್​ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ. ಕಾಂಗ್ರೆಸ್ ಶಾಸಕರ ಮೇಲೆ ಪಿಎಫ್ ಐ ನವರಿಂದ ಹಲ್ಲೆಯಾಗಿದ್ದರೂ ಸುಮ್ಮನಿದ್ರು. ಕಾಂಗ್ರೆಸ್‌ ಪಿಎಫ್ಐ ತುಷ್ಠೀಕರಣ ಮಾಡುತ್ತಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಎಸ್​ಸಿ, ಎಸ್​ಟಿ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ:

ಎಸ್​ಸಿ, ಎಸ್​ಟಿ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದರು. ಈ ನಿಟ್ಟಿನಲ್ಲಿ ಕೆಲವೇ ಕ್ಷಣಗಳಲ್ಲಿ ಸರ್ವ ಪಕ್ಷಗಳ ಸಭೆ ಕರೆದಿದ್ದೇನೆ. ಸಾಮಾಜಿಕವಾಗಿಯೂ ಹಲವು ಸಮಸ್ಯೆ ಬಗೆಹರಿಸಲು ಬದ್ಧವಾಗಿದೆ. ಸಮಸ್ಯೆಗಳನ್ನ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಜನಪರವಾಗಿರುವ ಆಡಳಿತವನ್ನ ನಮ್ಮ ಸರ್ಕಾರ ಮಾಡ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಯುವಕ ಯುವತಿಯರಿಗೆ ಸುಮಾರು 10 ಲಕ್ಷ ಉದ್ಯೋಗಕ್ಕೆ ಪ್ಲಾನ್ ಮಾಡಿದ್ದೇವೆ. ಹತ್ತು ಹಲವಾರು ಯೋಜನೆಗಳನ್ನ ರೂಪಿಸಿದ್ದೇವೆ. ಕಾರವಾರದಲ್ಲಿ 280 ಕೋಟಿಯ ಬಂದರು ನಿರ್ಮಾಣ, ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಇಂಡಸ್ಟ್ರಿಯಲೈಜೇಶನ್ ಮಾಡುತ್ತಿದ್ದೇವೆ. ದಾವಣಗೆರೆ, ಶಿವಮೊಗ್ಗ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೊಳ್ಳಲಿದೆ. 3 ಸಾವಿರ ಕೋಟಿಯ ರೋಡ್ ಡೆವಲಪ್ಮೆಂಟ್ ನಡೆದಿದೆ. ಕರ್ನಾಟಕ ರಾಜ್ಯಕ್ಕೆ ಹೆಚ್ಚು ಎಫ್ ಡಿಎ ಬಂದಿದೆ. ಇನೋವೇಶನ್ ನಲ್ಲಿ ನಾವೂ ನಂಬರ್ 1೧ ಅಂತಾ ನೀತಿ ಆಯೋಗ ಘೋಷಿಸಿದೆ. ಏರ್​​ಪೋರ್ಟ್ ಟರ್ಮಿನಲ್ ಉದ್ಘಾಟನೆ ಮಾಡುತ್ತೇವೆ. ನವೆಂಬರ್ 19ಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಇದೇ ವೇಳೆ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಹೀಗೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅಭಿನಂದನೆ: ಎಸ್ ಸಿ, ಎಸ್ ಟಿ ಮೀಸಲಾತಿ ಕೊಡಬೇಕು ಅಂತಾ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬೊಮ್ಮಾಯಿಗೆ ಒತ್ತಾಯ ಮಾಡಿದ್ವಿ. ಅದನ್ನ ಅನುಷ್ಠಾನಕ್ಕೆ ತರುವುದಾಗಿ ಸಿಎಂ ಹೇಳಿದ್ದಾರೆ. ಅವರಿಗೆ ಪಕ್ಷದ ಪರವಾಗಿ ಚಪ್ಪಾಳೆ ತಟ್ಟಿ ಅಭಿನಂದಿಸುತ್ತೇವೆ ಎಂದು ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದರು.

ವಿಜಯ ಯಾತ್ರೆ ಶುರುವಾಗಿದೆ. 150 ಕ್ಷೇತ್ರ ಗೆಲ್ಲಲು ಸಂಕಲ್ಪ ಮಾಡಿದ್ದೇವೆ: ಕಟೀಲ್

ವಿಜಯ ಯಾತ್ರೆಗಾಗಿ ನಾವು ಇಲ್ಲಿ ಸೇರಿದ್ದೇವೆ. ವಿಜಯ ದಶಮಿಯ ಬಳಿಕ ವಿಜಯ ಯಾತ್ರೆಗಾಗಿ ಇಲ್ಲಿ ಸೇರಿದ್ದೇವೆ. ತಾಯಿ ದುರ್ಗೆಯನ್ನ ಪ್ರಾರ್ಥಿಸಿ ವಿಜಯ ಯಾತ್ರೆ ಶುರುವಾಗಿದೆ. 150 ಕ್ಷೇತ್ರ ಗೆಲ್ಲಲು ಈ ಮೂಲಕ ಸಂಕಲ್ಪ ಮಾಡಿದ್ದೇವೆ. ಬಿಜೆಪಿ ಅಭೂತಪೂರ್ವ ಕೆಲಸ ಮಾಡಿದೆ. ಯಡಿಯೂರಪ್ಪ ಸರ್ಕಾರ ಮಾಡಿದಾಗ ಒಂದೆಡೆ ನೆರೆ, ಅತ್ತ ಕೋವಿಡ್ ಇತ್ತು. ಯಡಿಯೂರಪ್ಪ ಅವರು ಕೋವಿಡ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಇಂದು ಮಾಸ್ಕ್ ಇಲ್ಲದೇ ಇಲ್ಲಿ ಕುಳಿತು ಕೊಳ್ಳುವ ಸಂದರ್ಭ ಬಂದಿದ್ದರೆ ಅದಕ್ಕೆ ಪ್ರಧಾನಿ ಮೋದಿ ಕಾರಣರು. ಕೋವಿಡ್ ಪರಿಸ್ಥಿತಿಯಲ್ಲಿ ಮೋದಿ ಅಷ್ಟು ಉತ್ತಮವಾಗಿ ಕೆಲಸ ಮಾಡಿದ್ದರು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಪೌರಕಾರ್ಮಿಕರಿಗಾಗಿ ವಿಶೇಷ ಕೆಲಸ ಮಾಡಿದ್ದಾರೆ. ಇದೀಗ ಎಸ್ ಸಿ, ಎಸ್ ಟಿ ಗಾಗಿ ಮೀಸಲಾತಿಗೆ ಸಿಎಂ ಒಪ್ಪಿದ್ದಾರೆ. ಇದಕ್ಕಾಗಿ ನಾನು ಸಿಎಂ ಗೆ ಅಭಿನಂದನೆ ಸಲ್ಲಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮ ಭಾಷಣದ ವೇಳೆ ಹೇಳಿದರು.

ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಭಾಷಣ:

ನಮ್ಮ‌ ಮುಂದಿನ ಯಾತ್ರೆ ವಿಜಯ ಯಾತ್ರೆ. ನಮ್ಮನ್ನ ಕಟ್ಟಿ ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳ್ನ ಗೆಲ್ಲುವುದು ನಿಶ್ಚಿತ. ನಾನು ನಿಮಗೆ ಮನವಿ ಮಾಡ್ತೇನೆ- ನಮ್ಮ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನ ಕಾರ್ಯಕ್ರಮ ವನ್ನ ಮನೆ ಮನೆಗೆ ಮುಟ್ಟಿಸಿ. ಪರಿಶಿಷ್ಟ ರ ಕಲ್ಯಾಣಕ್ಕೆ ನಾವು ಕೆಲಸ ಮಾಡಿದ್ದೇವೆ. ಅನೇಕ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಆ ಮನೆಗಳಿಗೆ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ‌ಕಾರ್ಯಕರ್ತರು ನಮ್ಮ ಯೋಜನೆ ಮನದಟ್ಟು ಮಾಡಿಕೊಂಡು ಮನೆ ಮನೆಗೆ ತಲುಪಿಸಬೇಕು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜನರಿಗೆ ತಲುಪಿದೆ. 43 ಲಕ್ಷಕ್ಕೂ ಹೆಚ್ಚು ರೈತರಿಗೆ ಡಿಬಿಟಿ ಮೂಲಕ ಹಣ ತಲುಪಿಸಿದ್ದೇವೆ. ಹಿಂದೆ ಸವಲತ್ತಿಗೆ ಮುಖಂಡರ ಮನೆ ಸುತ್ತಿ ಕೈ ಬಿಸಿ ಮಾಡಬೇಕಿತ್ತು. ಆದರೆ ಪಿಎಂ ಮೋದಿ ರೈತರಿಗೆ ನೇರವಾಗಿ ತಲುಪಿಸಲು ಯಶಸ್ವಿ ಆಗಿದ್ದಾರೆ. ರಾಜ್ಯದ ಪ್ರತಿ ಮನೆಗೆ ಶುದ್ದವಾದ ಕುಡಿಯೋ ನೀರು ಕೊಡುವ ಮೂಲಕ ಮಧ್ಯಮ ವರ್ಗದವರಿಗೆ ಗ್ಯಾಸ್- ಪಡಿತರ ತಲುಪಿಸುವ ಮೂಲಕ ಕೆಲಸ ಮಾಡಿದ್ದೇವೆ ಎಂದು ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹೇಳಿದರು.

ಈ ಬಾರಿ ರಾಜ್ಯದಲ್ಲಿ ಕೆರೆ ಕಟ್ಟೆಗಳು ಜಲಾಶಯ ತುಂಬಿವೆ. ನೀರಾವರಿ ಯೋಜನಗೆ ಹೆಚ್ಚಿನ ಆದ್ಯತೆ ಕೊಡುವ ಕೆಲಸ ಸರ್ಕಾರ ಮಾಡಿದೆ. ಎತ್ತಿನ ಹೊಳೆ, ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆಗೆ ಸಾವಿರಾರು ಕೋಟಿ ರೂ ಅನುದಾನ ‌ನೀಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ರೈತ ವಿದ್ಯಾನಿಧಿಗೆ 440 ಕೋಟಿ‌ ರೂ ಅನುದಾನ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಗೊಳಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಸರ್ಕಾರ ಶಾಲೆಯಲ್ಲಿ 8100 ಕೊಠಡಿ ನಿರ್ಮಾಣದ ಕೆಲಸ ಆರಂಭವಾಗಿದೆ. ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ ಮಾಡಲಾಗಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಚಾಲ್ತಿಯಲ್ಲಿದೆ. 7 ವಿಶ್ವವಿದ್ಯಾಲಯಗಳಿಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. 100 ಪಿಎಸ್ ಸಿ ಉನ್ನತೀಕರಣ ನಡೆದಿದೆ. 80 ಕ್ಕೂ ಹೆಚ್ಚು ಪಿಎಸ್ ಸಿ ಆರಂಭಗೊಂಡಿದೆ. ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಆರಂಭಗೊಂಡಿವೆ. ಅಂಬೇಡ್ಕರ್ ವಸತಿ ನಿಲಯ, ನೇಕಾರ ಸಮ್ಮಾನ ಯೋಜನೆ, ನೇಕಾರರಿಗೆ ಕಡಿಮೆ ಬಡ್ಡಿ ಯೋಜನೆ, ಬಿಸಿ ಊಟ ತಯಾರಕರಿಗೆ ಗೌರವ ಧನ ಹೆಚ್ಚಳ ಮಾಡಿದ್ದೇವೆ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಹೇಳಿದರು.

ಪಿಎಂ ಮೋದಿ ಸಮಯ ಲಭ್ಯತೆ ನೋಡಿ ಯುವ ಸಮಾವೇಶ:

ಬಿಜೆಪಿಯ ವಿವಿಧ ಸಮಾವೇಶಗಳ ಬಗ್ಗೆ ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ರತಿ ಸಮುದಾಯವನ್ನೂ ಸಂಪರ್ಕಿಸುವ ನಿಟ್ಟಿನಲ್ಲಿ ಸಮಾವೇಶ ನಡೆಸಲು ಚರ್ಚೆ ನಡೆಯಿತು. ಬಿಜೆಪಿ ರೈತ, ಎಸ್ ಸಿ, ಎಸ್ ಟಿ, ಓಬಿಸಿ, ಮಹಿಳಾ ಹಾಗೂ ಯುವ ಸಮಾವೇಶ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರುಗಳನ್ನು ಈ ಸಮಾವೇಶಗಳಿಗೆ ಆಹ್ವಾನಿಸಲು ತೀರ್ಮಾನ ಮಾಡಲಾಯಿತು. ಪ್ರಧಾನಿ ಮೋದಿ ಅವರ ಸಮಯ ಲಭ್ಯತೆ ನೋಡಿಕೊಂಡು ಶಿವಮೊಗ್ಗ ಅಥವಾ ಮಂಗಳೂರಿನಲ್ಲಿ ಯುವ ಸಮಾವೇಶ ನಡೆಸಲು ಚಿಂತಿಸಲಾಗಿದೆ.

Published On - 12:25 pm, Fri, 7 October 22

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು