BJP ಮುಖಂಡ ಪೃಥ್ವಿ ಸಿಂಗ್​ ಮೇಲಿನ ಹಲ್ಲೆ ಕೇಸ್​; ಸರ್ಕಾರದ ಉತ್ತರಕ್ಕೆ ಆಕ್ರೋಶಗೊಂಡ ವಿಪಕ್ಷ ಬಿಜೆಪಿ, ಸದನದ ಬಾವಿಗಿಳಿದು ಧರಣಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 06, 2023 | 4:34 PM

ಸದನದಲ್ಲಿ BJP ಮುಖಂಡ ಪೃಥ್ವಿ ಸಿಂಗ್​ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಆಗ್ರಹಿಸಿದ್ದು, ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಮಾಡಿದರೆ, ಇತ್ತ ಕಾಂಗ್ರೆಸ್ ಸದಸ್ಯರು ತಾವು ಕುಳಿತಲ್ಲೇ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದರಿಂದ ಕೋಪಗೊಂಡ ಸ್ಪೀಕರ್ ‘ನಾನು ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಬೇಡಿ.

BJP ಮುಖಂಡ ಪೃಥ್ವಿ ಸಿಂಗ್​ ಮೇಲಿನ ಹಲ್ಲೆ ಕೇಸ್​; ಸರ್ಕಾರದ ಉತ್ತರಕ್ಕೆ ಆಕ್ರೋಶಗೊಂಡ ವಿಪಕ್ಷ ಬಿಜೆಪಿ, ಸದನದ ಬಾವಿಗಿಳಿದು ಧರಣಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿ.06: ಸದನದಲ್ಲಿ BJP ಮುಖಂಡ ಪೃಥ್ವಿ ಸಿಂಗ್​ ಮೇಲಿನ ಹಲ್ಲೆ ಪ್ರಕರಣವನ್ನು ಬಿಜೆಪಿ ಸದಸ್ಯ ಬಿ.ವೈ. ವಿಜಯೇಂದ್ರ ಅವರು ಪ್ರಸ್ತಾಪ ಮಾಡಿದ್ದಾರೆ. ಈ  ವೇಳೆ ಗೃಹ ಸಚಿವರು ಬಂದಾಗ ಉತ್ತರ ನೀಡುವುದಾಗಿ ಸಚಿವ ಹೆಚ್​ಕೆ ಪಾಟೀಲ್(HK Patil) ಹೇಳಿದ್ದು, ಈ ಹಿನ್ನಲೆ ವಿಪಕ್ಷ ಬಿಜೆಪಿ(BJP) ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ನವರು, ಗೃಹ ಸಚಿವರು ಬಂದ ಬಳಿಕ ಉತ್ತರ ಕೊಡಿಸುವುದಾಗಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕುಮಾರಸ್ವಾಮಿ ಆಗ್ರಹ

ಇದೇ ವೇಳೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಆಗ್ರಹಿಸಿದ್ದು, ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಮಾಡಿದರೆ, ಇತ್ತ ಕಾಂಗ್ರೆಸ್ ಸದಸ್ಯರು ತಾವು ಕುಳಿತಲ್ಲೇ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದರಿಂದ ಕೋಪಗೊಂಡ ಸ್ಪೀಕರ್ ‘ನಾನು ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಬೇಡಿ. ನಂತರ ನನ್ನ ದೂರಬೇಡಿ, ಪ್ರಚಾರಕ್ಕೆ ಹೀಗೆ ಮಾಡಬೇಡಿ ಎಂದಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಅಧಿವೇಶನ: ಸದನದಲ್ಲಿ ಪ್ರಶ್ನೆ ಕೇಳಲು ಹಳೇದೋಸ್ತಿ ಶಿವಲಿಂಗೇಗೌಡ ಮತ್ತು ರೇವಣ್ಣ ನಡುವೆ ಜಟಾಪಟಿ!

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯ ಧರಣಿ ಮಧ್ಯೆ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಕಾರು ಅಪಘಾತ ವಿಚಾರವನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದ್ದಾರೆ. ‘ಕುಡಿದು ಅಪಘಾತ ಮಾಡಿ ನನ್ನ ಮೇಲೆ ಆರೋಪ ಮಾಡಿದ್ದಾನೆ, ಎರಡು ದಿನದ ಹಿಂದೆ ವಿಜಯೇಂದ್ರ ಕೂಡ ನನ್ನ ವಿರುದ್ಧ ಆರೋಪಿಸಿದ್ದರು. ಇಂದು ಸತ್ಯ ಬಯಲಾಗಿದೆ. ಅಂತಹವರಿಗೆ ಬಿಜೆಪಿ ಟಿಕೆಟ್ ಕೊಟ್ಟು ಸನ್ಮಾನ ಮಾಡುತ್ತಿದೆ. ಇಂತಹವರೆಲ್ಲ ಬಿಜೆಪಿಯಲ್ಲೇ ಯಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ