ಮೂರು ರಾಜ್ಯದಲ್ಲಿ ಗೆದ್ದ ಬಿಜೆಪಿ: ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ 10 ಸಂಸದರು
ಮೂರು ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸಂಸದರು ಇದೀಗ ಲೋಕಸಭೆ ಸದಸ್ಯತ್ವಕ್ಕೆ ಹಾಗೂ ಮೋದಿ ಸಂಪುಟಕ್ಕೂ ರಾಜೀನಾಮೆ ನೀಡಿದ್ದಾರೆ. ನವೆಂಬರ್ನಲ್ಲಿ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸಿದ 12 ಸಂಸದರಲ್ಲಿ 10 ಮಂದಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಲ್ಲಿ ಒಬ್ಬರು ಮೋದಿ ಸಂಪುಟದ ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಕೂಡ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ದೆಹಲಿ, ಡಿ.6: ಇತ್ತೀಚೆಗಷ್ಟೇ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದು ಮೂರು ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನದಲ್ಲಿ ಬಿಜೆಪಿ ಆಧಿಕಾರಕ್ಕೆ ಬಂದರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಮೀಜೊರಾಂನಲ್ಲಿ ಸ್ಥಳೀಯ ಪಕ್ಷ ಅಧಿಕಾರಿಕ್ಕೆ ಏರಿದೆ. ಆದರೆ ಬಿಜೆಪಿ ಈ ಬಾರಿ ದೊಡ್ಡ ಪ್ಲಾನ್ ಹಾಕಿಕೊಂಡಿತ್ತು. ಆ ಪ್ಲಾನ್ನಂತೆ ಇದೀಗ ಯಶಸ್ವಿಯಾಗಿ ಅಧಿಕಾರ ಹಿಡಿದಿದೆ. ಮೂರು ರಾಜ್ಯಗಳಲ್ಲೂ ಕೇಂದ್ರ ಮಂತ್ರಿಗಳು ಹಾಗೂ ಸಂಸದರನ್ನು ಕಣಕ್ಕೆ ಇಳಿಸಿತ್ತು. ಇದೀಗ ಆ ರಾಜ್ಯಗಳಲ್ಲಿ ಅವರು ಗೆದ್ದು ಶಾಸಕರಾಗಿದ್ದಾರೆ. ಇದರ ಜತೆಗೆ ಗೆದ್ದ ಸಂಸದರು ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸತ್ನಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು. ಈ ಸಮಯದಲ್ಲಿ ಮೂರು ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸಂಸದರು ಇದೀಗ ಲೋಕಸಭೆ ಸದಸ್ಯತ್ವಕ್ಕೆ ಹಾಗೂ ಮೋದಿ ಸಂಪುಟಕ್ಕೂ ರಾಜೀನಾಮೆ ನೀಡಿದ್ದಾರೆ. ನವೆಂಬರ್ನಲ್ಲಿ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸಿದ 12 ಸಂಸದರಲ್ಲಿ 10 ಮಂದಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಲ್ಲಿ ಒಬ್ಬರು ಮೋದಿ ಸಂಪುಟದ ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಕೂಡ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯದಲ್ಲೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
ಸಂಸತ್ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಒಂದೇ ಅಧಿಕಾರವನ್ನು ಅಥವಾ ಸದಸ್ಯತ್ವವನ್ನು ಹೊಂದಿರಬೇಕು. ಈ ನಿಯಮಕ್ಕೆ ಅನುಸಾರವಾಗಿ ಮೂರು ರಾಜ್ಯದಲ್ಲಿ ಗೆದ್ದ ಸಂಸದರು ಒಂದಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇನ್ನು ಇಬ್ಬರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಒಂದು ರಾಜಸ್ಥಾನದ ಅಲ್ವಾರ್‌ನಿಂದ ಸ್ಪರ್ಧಿಸಿದ ಬಾಬಾ ಬಾಲಕನಾಥ್ ಮತ್ತು ಛತ್ತೀಸ್‌ಗಢದ ಸರ್ಗುಜಾನಿಂದ ಸ್ಪರ್ಧಿಸಿದ ರೇಣುಕಾ ಸಿಂಗ್. ಇವರು ಕೂಡ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವವನ್ನು ಅವಮಾನಿಸಿದ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು: ಸಂಸತ್ನಲ್ಲಿ ಬಿಜೆಪಿ ಸಂಸದರ ಒತ್ತಾಯ
ಇನ್ನು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂಸದರು ಮೂರು ರಾಜ್ಯದಲ್ಲೂ ಮುಖ್ಯಮಂತ್ರಿ ಆಕ್ಷಾಂಕಿಗಳಾಗಿದ್ದಾರೆ. ಇವರ ರಾಜೀನಾಮೆ ನಂತರ ಮೂರು ರಾಜ್ಯದಲ್ಲೂ ಮುಖ್ಯಮಂತ್ರಿಗಳನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ. ಇದರ ಜತೆಗೆ ಇಂದು ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಜತೆಗೆ ಸುಮಾರು ಐದು ಗಂಟೆಗಳ ಸಭೆ ನಡೆಸಿದರು.
ಕಳೆದ ತಿಂಗಳು ನಡೆದ ಐದು ಚುನಾವಣೆಗಳಲ್ಲಿ ಐದು ಕೇಂದ್ರ ಸಚಿವರು ಸೇರಿದಂತೆ 21 ಸಂಸದರನ್ನು ಕಣಕ್ಕಿಳಿಸಿತು . ಪಕ್ಷವು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ಏಳು, ಛತ್ತೀಸ್‌ಗಢದಲ್ಲಿ ನಾಲ್ವರು ಮತ್ತು ತೆಲಂಗಾಣದಲ್ಲಿ ಮೂವರು ಸಂಸದರನ್ನು ಕಣಕ್ಕಿಳಿಸಿತ್ತು. ಬಿಜೆಪಿ ತೆಲಂಗಾಣದಲ್ಲಿ ಯಾವುದೇ ದೊಡ್ಡ ಮಟ್ಟದ ಬಹುಮತ ಸಾಧಿಸಲಿಲ್ಲ. ರಾಜಸ್ಥಾನದಲ್ಲಿ ಮೂವರು, ಮಧ್ಯಪ್ರದೇಶದಲ್ಲಿ ಇಬ್ಬರು ಮತ್ತು ಛತ್ತೀಸ್‌ಗಢದಲ್ಲಿ ಒಬ್ಬರು ಬಿಜೆಪಿ ಸಂಸದರು ಸೋತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Wed, 6 December 23