ಬೆಳಗಾವಿ ಅಧಿವೇಶನ: ಸದನದಲ್ಲಿ ಪ್ರಶ್ನೆ ಕೇಳಲು ಹಳೇದೋಸ್ತಿ ಶಿವಲಿಂಗೇಗೌಡ ಮತ್ತು ರೇವಣ್ಣ ನಡುವೆ ಜಟಾಪಟಿ!
ಕಳೆದ ವಾರ ಹೆಚ್ ಡಿ ರೇವಣ್ಣ ಅವರು ತೆಂಗಿನಕಾಯಿ ಬೆಳೆಗಾರರೊಂದಿಗೆ ಕೈಯಲ್ಲಿ ಕೊಬ್ಬರಿ ಚೀಲ ಹಿಡಿದುಕೊಂಡು ಬಂದು ಹಾಸನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ ಮನವಿ ಪತ್ರವನ್ನು ಡಿಸಿಗೆ ನೀಡಿದ್ದರು. ಅವರ ಕಾಳಜಿ ಅರ್ಥವಾಗುವಂಥದ್ದೇ, ಆದರೆ ಕಲಾಪ ನಡೆಯುವಾಗ ಸದನದ ನಿಯಮಾವಳಿ ಪಾಲಿಸಬೇಕಾಗುತ್ತದೆ.
ಬೆಳಗಾವಿ: ವಿಧಾನಮಂಡಲದ ಇಂದಿನ ಕಾರ್ಯಕಲಾಪದಲ್ಲಿ ಇಬ್ಬರು ಗೌಡರ ನಡುವೆ ಜಟಾಪಟಿ ನಡೆಯಿತು. ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಒಂದುkAಲತ್ತಿಲ್ ಆಪ್ತಮಿತ್ರರು. ಆದರೆ ಅರಸೀಕೆರೆ ಶಾಸಕರೀಗ ಕೈ ಪಾರ್ಟಿ. ವಿಷಯವೇನೆಂದರೆ, ಇಬ್ಬರಿಗೂ ಕೊಬ್ಬರಿಗೆ ಬೆಂಬಲ (MSP) ನೀಡಲು ಸರ್ಕಾರದ ಗಮನ ಸೆಳಯುವ ಕಾತುರ. ತಮ್ಮ ಕ್ಷೇತ್ರದ ಜನರ ಮತ್ತು ತೆಂಗಿನಕಾಯಿ ಬೆಳೆಗಾರರ ಕ್ರೆಡಿಟ್ ಪಡೆದುಕೊಳ್ಳುವ ಹವಣಿಕೆ ಇದ್ದಿರಬಹುದು. ಶಿವಲಿಂಗೇಗೌಡರು ಮಾತಾಡಲು ಮೇಲೇಳುತ್ತಿದ್ದಂತೆ ರೇವಣ್ಣ ಸಹ ಮೇಲೆದ್ದು ಸಭಾಧ್ಯಕ್ಷರೇ ಸಭಾಧ್ಯಕ್ಷರೇ ಅನ್ನುತ್ತಾರೆ. ತನಗೆ ಮಾತಾಡಲು ನೀಡಿರುವ ಅವಕಾಶವನ್ನು ರೇವಣ್ಣ ಕಸಿದುಕೊಳ್ಳುವ ಪ್ರಯತ್ನಮಾಡಿದ್ದು ಗೌಡರಿಗೆ ರೇಗುತ್ತದೆ ಮತ್ತು ರೇವಣ್ಣ ಮೇಲೆ ಹರಿಹಾಯಲಾರಂಭಿಸುತ್ತಾರೆ. ರೇವಣ್ಣ ತಮ್ಮ ಮಾತು ನಿಲ್ಲಿಸದಾದಾಗ ಸಭಾಧ್ಯಕ್ಷ ಯುಟಿ ಖಾದರ್ ಮಧ್ಯಪ್ರವೇಶಿಸಿ, ಶೂನ್ಯ ವೇಳೆಯಲ್ಲಿ ಪ್ರಶ್ನೆ ಕೇಳಲು ಶಿವಲಿಂಗೇಗೌಡರು ಸೋಮವಾರ ಬೆಳಗ್ಗೆಯೇ ಹೆಸರು ಬರೆಸಿದ್ದಾರೆ, ರೇವಣ್ಣ ಸ್ವಲ್ಪ ಹೊತ್ತಿಗೆ ಮುಂಚೆಗಷ್ಟೇ ಬರೆಸಿರೋದು, ಹಾಗಾಗಿ ಶಿವಲಿಂಗೇಗೌಡರು ಮಾತಾಡುವಾಗ ಅಡ್ಡಿ ಮಾಡಬೇಡಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ