ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿಯೊಂದಿಗೆ ಕುಣಿದ ಮಾಜಿ ಸಚಿವ ಬಿ ಶ್ರೀರಾಮುಲು
ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಬಿ ಶ್ರೀರಾಮುಲು ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದರು. ಹುಬ್ಬೇರಿಸಿದ ಜನ, ಅವರೇನಾದರೂ ಕಾಂಗ್ರೆಸ್ ಸೇರಲಿದ್ದಾರೆಯೇ ಅಂತ ಮಾತಾಡಿದ್ದರು. ಶ್ರೀರಾಮುಲು ಅವರೇ, ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಬಂದಿದ್ದೆ ಅಂತ ಹೇಳಿ ಅವರ ಗೊಂದಲ ನಿವಾರಿಸಿದ್ದರು.
ಬಳ್ಳಾರಿ: ಜಿಲ್ಲೆಯ ಪ್ರಮುಖ ರಾಜಕಾರಣಿ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಬಿ ಶ್ರೀರಾಮುಲು (B Sriramulu) ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಯಾಕಾಗಬೇಡ? ಅವರ ಪ್ರೀತಿಯ ಮಗಳು ದೀಕ್ಷಿತಾ (Deekshita) ಡಿಸೆಂಬರ್ 7 ರಂದು ಸಪ್ತಪದಿ ತುಳಿಯಲಿದ್ದಾಳೆ. ಇಂದು ನಗರದ ಅವಂಬಾವಿಯ ರಾಮುಲು ನಿವಾಸದಲ್ಲಿ ಅರಿಶಿನ ಶಾಸ್ತ್ರ (Sangeeth programme) ಇಟ್ಟುಕೊಳ್ಳಲಾಗಿತ್ತು. ಸಂಬಂಧಿಕರು ಮತ್ತು ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಹೈಲೈಟ್ ಅಂದರೆ ಶ್ರೀರಾಮುಲು ಅವರ ಮೈ ದಣಿಯದ ಕುಣಿತ! ಮಾಜಿ ಸಚಿವ ತಮ್ಮ ಧರ್ಮಪತ್ನಿ ಬಾಗ್ಯಲಕ್ಷ್ಮಿ (Bhagyalaxmi) ಜೊತೆ ಯಜಮಾನ ಚಿತ್ರ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರು ಕುಣಿಯತ್ತಿದ್ದರೋ ಅಥವಾ ಪತ್ನಿಯ ಕೈ ಹಿಡಿದು ತಮ್ಮ ಮೈ ಅಲ್ಲಾಡಿಸುತ್ತಿದ್ದಾರೋ ಗೊತ್ತಾಗದು! ಅದಕ್ಕೇ ನಾವು ಮೈ ದಣಿಯದ ಕುಣಿತ ಅಂತ ಹೇಳಿದ್ದು. ಇರಲಿ ಬಿಡಿ, ಇದು ತಮಾಷೆಯ ಸಮಯವಲ್ಲ. ಕನ್ನಡಕಧಾರಿಯೊಬ್ಬರು ಹೇಗೆ ಕುಣಿಯಬೇಕೆಂದು ಹಾವಭಾವದ ಮೂಲಕ ತೋರಿಸುತ್ತಿದ್ದಾರೆ. ಶ್ರೀರಾಮುಲು ಮನೆಯ ಮಂಗಳಕಾರ್ಯ ಸಂಭ್ರಮ ಸಡಗರಗಳೊಂದಿಗೆ ನೆರವೇರಲಿ ಎಂದು ಹಾರೈಸೋಣ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ