ರಾಜ್ಯಸಭೆ ಟಿಕೆಟ್​ ಕೊನೆ ಹಂತಕ್ಕೆ ಬಂದು ಮಿಸ್​ ಆಯ್ತು, ಹೀಗೆ ಹೇಳುತ್ತಲೇ ಹೊಸ ಸುದ್ದಿ ಕೊಟ್ಟ ಸೋಮಣ್ಣ

| Updated By: ರಮೇಶ್ ಬಿ. ಜವಳಗೇರಾ

Updated on: Feb 17, 2024 | 6:33 PM

ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಕೊನೆ ಕ್ಷಣದಲ್ಲಿ ರಾಜ್ಯಸಭಾ ಟಿಕೆಟ್​ ಕೈತಪ್ಪಿದೆ. ಈ ಬಗ್ಗೆ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದರ ಜೊತೆ ಹೊಸ ಸುದ್ದಿಯೊಂದನ್ನು ನೀಡಿದ್ದು, ಕನಸು ನನಸಾಗುವ ವಿಶ್ವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರಿನ ಮಠ-ಮಾನ್ಯಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯಸಭೆ ಟಿಕೆಟ್​ ಕೊನೆ ಹಂತಕ್ಕೆ ಬಂದು ಮಿಸ್​ ಆಯ್ತು, ಹೀಗೆ ಹೇಳುತ್ತಲೇ ಹೊಸ ಸುದ್ದಿ ಕೊಟ್ಟ ಸೋಮಣ್ಣ
ಬಿಜೆಪಿ ನಾಯಕ ವಿ ಸೋಮಣ್ಣ
Follow us on

ತುಮಕೂರು, (ಫೆಬ್ರವರಿ 17): ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲುಕಂಡಿರುವ ವಿ ಸೋಮಣ್ಣ(V Somanna) ಇದೀಗ ಲೋಕಸಭೆ ಚುನಾವಣೆ (Loksabha Elections 2024) ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಈ ಬಾರಿ ತುಮಕೂರು ಲೋಕಸಭಾ (Tumakuru Loksabha)ಕ್ಷೇತ್ರದಿಂದ ಸ್ಪರ್ಧಿಸಲು ಆಸೆ ವ್ಯಕ್ತಪಡಿಸಿದ್ದು, ಟಿಕೆಟ್​​ಗಾಗಿ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಸೋಮಣ್ಣ ಅವರಿಗೆ ರಾಜ್ಯಸಭೆ ಟಿಕೆಟ್​ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಟಿಕೆಟ್​ ಕೈತಪ್ಪಿದೆ. ಇನ್ನು ಈ ಬಗ್ಗೆಸೋಮಣ್ಣ  ಬೇಸರ ವ್ಯಕ್ತಪಡಿಸುತ್ತಲೇ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು..ರಾಜ್ಯಸಭಾ ಟಿಕೆಟ್​​ ಕೊನೆ ಕ್ಷಣದಲ್ಲಿ ಬದಲಾಗಿದೆ ಎಂದು ಹೇಳಿರುವ ಸೋಮಣ್ಣ, ತುಮಕೂರು ಲೋಕಸಭೆ ಟಿಕೆಟ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿರುವ ಸೋಮಣ್ಣ, ಬೆಳಿಗ್ಗೆ ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ ಭೇಟಿಯಾಗಿದ್ದೆ, ಬಳಿಕ ಸಿದ್ದರ ಬೆಟ್ಟಕ್ಕೆ ಹೋಗಿದ್ದೆ. ನಂತರ ಸಿದ್ದಗಂಗಾ ಮಠದ ಗುರುಗಳಿಗೆ ಪೋನ್ ಮಾಡ್ದೆಡಿದ್ದೆ. ಪ್ರಸಾದಕ್ಕೆ ಮಠಕ್ಕೆ ಬನ್ನಿ ಎಂದು ಕರೆದಿದ್ದಕ್ಕೆ ಬಂದಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ನಡೆದಾಡುವ ದೇವರು ಇದಿದ್ದು. ಹಾಗಾಗಿ ತುಮಕೂರಿ ಎಲ್ಲಾ ಮಠಗಳಿಗೆ ಭೇಟಿ ಕೊಡುತ್ತಿದ್ದೇನೆ. ಬಾಲಗಂಗಾಧರನಾಥ್ ಹಾಗೂ ಸಿದ್ದಗಂಗಾ ಶ್ರೀಗಳು ನನಗೆ ಗುರುಗಳು. ಮಠ ಮಾನ್ಯಗಳು ನನಗೇನು ಹೊಸದಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್!

ರಾಜ್ಯಸಭೆ ಟಿಕೆಟ್​ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು

ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡುತ್ತೇನೆ ಅಂದಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು ‌. ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬದಲಾಗಿದೆ. ಒಳ್ಳೇ ಕಾರ್ಯಕರ್ತನಿಗೆ ಟಿಕೆಟ್​ ಕೊಟ್ಟಿದ್ದಾರೆ, ಸ್ವಾಗತ. ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಲೋಕಸಭೆ ಚುನಾವಣೆಗೆ ಟಿಕೆಟ್​ ಕೊಟ್ಟರೆ ಸ್ಪರ್ಧಿಸುತ್ತೇನೆ. ಹೈಕಮಂಡ್ ಏನು ಹೇಳುತ್ತೆ ಅದನ್ನೇ ಹೇಳುತ್ತೇನೆ. ಹೈಕಮಂಡ್ ಟಿಕೆಟ್ ಕೊಟ್ಟರೆ ನಿಂತುಕೊಳ್ಳಬೇಕು. ಸ್ಪರ್ಧೆ ಮಾಡ್ಬೇಕು ಅಂದ್ರೆ ಸ್ಪರ್ಧೆ ಮಾಡುತ್ತೇನೆ. ಇದು ನನ್ನ ಡಿಮಾಂಡ್ ಅಲ್ಲ ಮನವಿ ಎಂದು ಹೇಳಿದರು.

ಮಾಧುಸ್ವಾಮಿಗೆ ತೀಕ್ಷ್ಣ ತಿರುಗೇಟು

ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಮಾತಿಗೆ ವಿಚಾರದ ಪ್ರತಿಕ್ರಿಯಿಸಿ, ಮಾಧುಸ್ವಾಮಿ ಅವರು ನಮ್ಮ ಹಿರಿಯ ನಾಯಕರು. ನನಗಿಂತ ಬುದ್ದಿವಂತರು, ಹೋರಾಟದಿಂದ ಬಂದವರು. ವಕೀಲರು. ಸ್ಥಳೀಯರು ಮತ್ತೊಬ್ಬರು ಅನ್ನೋದಕ್ಕಿಂತ ದೇಶ ಪ್ರದಾನಿ ಮೋದಿ ಅವರ ಆಡಳಿತ ಬಯಸಿದೆ. ನರೇಂದ್ರ ಮೋದಿ ಅವರು ಗುಜರಾತ್ ನವರು ಎಲ್ಲಿ ಬಂದು ನಿಂತ್ರು. ಮಾಧುಸ್ವಾಮಿ ಅವರು ಹೇಳೋದು ಸಹಜ. ಅದಕ್ಕೆ ನನ್ನ ಭಿನ್ನಾಭಿಪ್ರಾಯ ಏನಿಲ್ಲ. ಹೈಕಮಂಡ್ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ತಮಕೂರು ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಧುಸ್ವಾಮಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಇನ್ನು ಇದೇ ವೇಳೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಅವರ ಸೋಲಿನ ಬಗ್ಗೆ ಮಾತನಾಡಿ, 2003 ರಲ್ಲಿ ಬೆಂಗಳೂರಿನಲ್ಲಿ ನಾನೊಬ್ಬನೇ ಗೆದ್ದಿದ್ದು. ದೇವೆಗೌಡರ ಖುಣ ಇದೆ ಅಂತ ಹೋಗಿ ತಿರಿಸಿದವನು ನಾನೊಬ್ಬನೇ. ದೇವೆಗೌಡರು ಮತ್ತೆ ಜನತಾದಳದ ವಿರುದ್ಧ ನಾನೇನು ಮಾಡಿಲ್ಲ. ಪಕ್ಷ ನನಗೆ ಏನ್ ಜವಾಬ್ದಾರಿ ಕೊಟ್ಟಿದೆ ಅದನ್ನ ನಾನು ಮಾಡಿದ್ದೇನೆ. ದೇವೆಗೌಡರ ಜೊತೆ 28 ವರ್ಷ ಇದ್ದೇನೆ. ಅವರ ಹತ್ತಿರನೇ ನಾನು ರಾಜಕೀಯ ಎಬಿಸಿಡಿ ಕಲಿತಿದ್ದು. ನಾನು ಎಲ್ಲೂ ಅಪಚಾರದ ಮಾತನ್ನ ಆಡಿಲ್ಲ . ಇವತ್ತು ಜೆಡಿಎಸ್ ಬಿಜೆಪಿ ಹೋಂದಾಣಿಕೆಯಾಗಿದೆ. ದೇವೆಗೌಡರೇ ಮೋದಿ ಪ್ರಧಾನಿ ಆಗ್ಬೇಕು ಅಂತ ಬಯಸಿದ್ದಾರೆ ಎಂದರು.

ಇದು ಬಿಜೆಪಿ ಕ್ಷೇತ್ರ, ಇಲ್ಲಿ ಬಸವರಾಜು ಅವರು ಎಂ.ಪಿ ಇದ್ದಾರೆ. ವಯಸ್ಸಿನ ಕಾರಣ ಅವರು ಸ್ಪರ್ಧೆ ಮಾಡಲ್ಲ ಎಂದು ತಿರ್ಮಾನ ಮಾಡಿದ್ದಾರೆ. ನಾವು ಬಿಜೆಪಿ ಅವರು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತೀವಿ. ಕ್ಷೇತ್ರ ಯಾರಿಗೆ ಹೋಗಬೇಕು ಎಂಬುದನ್ನ ತಿರ್ಮಾನ ಮಾಡುತ್ತೆ. ಈಗಾಗಲೇ ಎಲ್ಲವನ್ನು ಹೈಕಮಂಡ್ ತಿರ್ಮಾನ ಮಾಡಿದೆ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನ ಎಲ್ಲೇಲ್ಲಿ ಕರೆಸಿಕೊಳ್ಳಬೇಕು, ಎಲ್ಲೇಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವುದು ಭಗವಂತನ ನಿರ್ಣಯ. ನಾನು ಹೈಕಮಂಡ್ ಟಿಕೆಟ್ ಕೊಟ್ರೆ ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತೇನೆ. ತುಮಕೂರು ಬೇಡ ಬೇರೆ ಕಡೆ ಸ್ಪರ್ಧೆ ಮಾಡು ಅಂದ್ರೆ ಮಾಡುತ್ತೇನೆ. ನಾನು ಎಲ್ಲದಕ್ಕೂ ತಯಾರಿದ್ದೇನೆ ಎಂದು ಕಡ್ಡಿ ಮುರಿದಂತೆ ಹೇಳಿದರು. ಇದರೊಂದಿಗೆ ಸೋಮಣ್ಣ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿಯೇ ತೀರುವ ಗುರಿ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಕರ್ನಾಟಕ ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ