ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ; ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ

ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ ಬಗ್ಗೆ ಸಭೆಯಲ್ಲಿ ಸಮಾಲೋಚನೆ ಮಾಡಲಾಗುತ್ತಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ; ಅರುಣ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ
ಬಿಜೆಪಿ
Updated By: sandhya thejappa

Updated on: Jun 05, 2022 | 4:22 PM

ಬೆಂಗಳೂರು: ರಾಜ್ಯಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಇಂದು (ಜೂನ್ 5) ಬಿಜೆಪಿ (BJP) ನಾಯಕರು ಮಹತ್ವ ಸಭೆ ನಡೆಸುತ್ತಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ ಬಗ್ಗೆ ಸಭೆಯಲ್ಲಿ ಸಮಾಲೋಚನೆ ಮಾಡಲಾಗುತ್ತಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​​​ ಕಟೀಲು, ಸಚಿವ ಆರ್​.ಅಶೋಕ್​, ಲೆಹರ್ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಿಎಂ ಬೊಮ್ಮಾಯಿ ಕೂಡಾ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

ಇನ್ನು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ಲಂಚ್ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಕೇಂದ್ರ ಸಚಿವ ಕಿಶನ್‌ರೆಡ್ಡಿ, ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಆರ್.ಅಶೋಕ್‌, ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳು ಭಾಗಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ನಮ್ಮ ಪಕ್ಷ ಎಲ್ಲ ಧರ್ಮವನ್ನು ಗೌರವಿಸುತ್ತದೆ, ಯಾವುದೇ ಧರ್ಮವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ’: ಬಿಜೆಪಿ ಹೇಳಿಕೆ

ಇದನ್ನೂ ಓದಿ
‘ನಮ್ಮ ಪಕ್ಷ ಎಲ್ಲ ಧರ್ಮವನ್ನು ಗೌರವಿಸುತ್ತದೆ, ಯಾವುದೇ ಧರ್ಮವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ’: ಬಿಜೆಪಿ ಹೇಳಿಕೆ
IIFA Awards 2022: ‘ವಿಕ್ಕಿ ಕೌಶಲ್, ಕೃತಿ ಸನೋನ್…’; ಪ್ರತಿಷ್ಠಿತ ಐಐಎಫ್​ಎ ಪ್ರಶಸ್ತಿ ವಿಜೇತರು ಯಾರೆಲ್ಲಾ? ವಿವರ ಇಲ್ಲಿದೆ
Lemon:ಮಧುಮೇಹಿಗಳು ನಿಂಬೆ ಹಣ್ಣನ್ನು ಬಳಸಬಹುದೇ? ಅಡ್ಡಪರಿಣಾಮಗಳಿವೆಯೇ?
Hyderabad gangrape case ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕನ ಮಗ ಭಾಗಿ, ವಿಡಿಯೊ ಶೇರ್​​ ಮಾಡಿದ ಬಿಜೆಪಿ ನಾಯಕ

3ನೇ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಮತದಾನ ವೇಳೆ ಯಾವುದೇ ಗೊಂದಲವಾಗದಂತೆ ಪಟ್ಟಿಯನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಾಸಕರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಪಟ್ಟಿ  ಮಾಡಲಾಗುತ್ತಿದೆ. ನಿರ್ಮಲಾ, ಜಗ್ಗೇಶ್‌ಗೆ ಯಾರು ಯಾರು ಮತ ಹಾಕಬೇಕು? ಜೊತೆಗೆ 3ನೇ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆಯೂ ಪ್ಲ್ಯಾನ್‌ ಮಾಡಲಾಗುತ್ತಿದೆ.

ಇನ್ನು ಜೆಡಿಎಸ್​ನ ಅಸಮಾಧಾನಿತ ಶಾಸಕರ ಮೇಲೆಯೂ ಬಿಜೆಪಿ ಕಣ್ಣಿಟ್ಟಿದೆ. ಬಿಜೆಪಿ ಪರ ಒಲವು ಹೊಂದಿರುವ ಶಾಸಕರೊಂದಿಗೆ ಒನ್ ಟು ಒನ್ ಮಾತುಕತೆ ನಡೆಸುವಂತೆ ಅಭ್ಯರ್ಥಿ ಲೆಹರ್ ಸಿಂಗ್ ಹಾಗೂ ಆರ್ ಅಶೋಕ್‌ಗೆ ನಾಯಕರು ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Sun, 5 June 22