ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದಿವ್ಯಾಂಗ ಕಲಾವಿದ ಎಂದು ಮಧ್ಯಪ್ರದೇಶದ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ವಿಶ್ವಾಸ್ ಸಾರಂಗ್ ಕರೆದಿದ್ದಾರೆ. ಇದೀಗ ಈ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಸಚಿವ ವಿಶ್ವಾಸ್ ಸಾರಂಗ್ ಗುರಿಯಾಗಿದ್ದಾರೆ. ಇದೀಗ ಈ ಬಗ್ಗೆ ಕಾಂಗ್ರೆಸ್ ವ್ಯಾಪಕ ಅಕ್ರೋಶ ಪಡಿಸಿದ್ದು, ದಿವ್ಯಾಂಗ್ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದಿವ್ಯಾಂಗ್ ಕಲಾವಿದರನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಭಿಯಾನ ಯಶಸ್ಸಿಯಾಗುತ್ತಿದೆ ಇದು ಕೇಸರಿ ಪಕ್ಷದಲ್ಲಿ ತಲ್ಲಣಗೊಳಿಸಿದೆ ಎಂದು ಹೇಳಿದೆ.
ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದಲ್ಲಿ ಸಚಿವ ಸಾರಂಗ್ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ಕಾಮ” ಎಂದೂ ಕರೆಯಲ್ಪಡುವ ಕಾಮೋ ಗುಜರಾತ್‌ನಲ್ಲಿ ತನ್ನ ವಿಶಿಷ್ಟವಾದ ನೃತ್ಯ ವಿಧಾನಕ್ಕಾಗಿ ಪ್ರಸಿದ್ಧನಾಗಿದ್ದಾನೆ ಮತ್ತು ಜಾನಪದ ಗಾಯಕರ ನೇರ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವರು ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವಂತೆ ತೋರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಚಿವ ಸಾರಂಗ್ ಅವರು ರಾಹುಲ್ ಗಾಂಧಿ ಅವರನ್ನು ಕಾಮೋಗೆ ಹೋಲಿಸಿ ಅಪಹಾಸ್ಯ ಮಾಡಿರುವುದು ಕೇಳಿಬಂದಿದೆ.ಅದು ಯಾರು? ಹೌದು, ಕಾಮೋ….ಕಾಮೋ ಭಾರತ್ ಜೋಡೋ ಎಂದು ಹೇಳುತ್ತಾ ತನ್ನ ಪ್ರಯಾಣವನ್ನು ಎಲ್ಲಿಂದ ಪ್ರಾರಂಭಿಸಿದ್ದಾನೆಂದು ನೀವು ನೋಡಬಹುದು ಎಂದು ಬಿಜೆಪಿ ಸಚಿವ ಸಾರಂಗ್ ಹೇಳಿರುವ ಮಾತು ವಿಡಿಯೋದಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಾಹುಲ್ ಗಾಂಧಿ ಅವರು ಗರೀಬಿ ಹಟಾವೋ ಬಗ್ಗೆ ಮಾತನಾಡುತ್ತಾರೆ ಆದರೆ ಅವರು ಭಾರತ್ ಜೋಡೋಗೆ 40,000 ರೂ. ಬೆಲೆಯ ಟೀ ಶರ್ಟ್ ಧರಿಸುತ್ತಾರೆ ಎಂದು ಹೇಳಿದ್ದಾರೆ.ಸೋನಿಯಾ ಗಾಂಧಿಯವರ ಕೂಡ ಪರೋಕ್ಷವಾಗಿ ಟೀಕಿಸಿದ ಸಚಿವ ಕಾಮೋ ಅವರ ಮಮ್ಮಿ ರಿಮೋಟ್ ಮೂಲಕ ಮೌನ್ಮೋಹನ್ ಸಿಂಗ್ ಅವರನ್ನು ನಿಯಂತ್ರಿಸುತ್ತಿದ್ದರು ಎಂದು ಹೇಳಿದರು.
ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, ಕಾಮ ಒಬ್ಬ ದಿವ್ಯಾಂಗ (ವಿಶೇಷ ಸಾಮರ್ಥ್ಯವುಳ್ಳ) ಕಲಾವಿದ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಲಕ್ಷಾಂತರ ಜನರು ಸೇರುವುದನ್ನು ನೋಡಿ ಬಿಜೆಪಿ ನಾಯಕರು ಗಲಿಬಿಲಿಗೊಂಡಿದ್ದಾರೆ ಮತ್ತು ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
Published On - 9:48 am, Sat, 22 October 22