AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Gandhi: ಡಿಕೆ ಶಿವಕುಮಾರ್, ಪುಟ್ಟ ಬಾಲಕನ ಜೊತೆ ರಸ್ತೆಯಲ್ಲೇ ಪುಶ್​-ಅಪ್ ಚಾಲೆಂಜ್ ಸ್ವೀಕರಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್

Bharat Jodo Yatra: ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿರುವಾಗ ಹುಡುಗನೊಬ್ಬ ಅವರ ಜೊತೆ ಸೇರಿಕೊಂಡು ತನ್ನ ತೋಳಿನ ಬಲವನ್ನು ತೋರಿಸುತ್ತಾನೆ. ಇದನ್ನು ನೋಡಿ ನಕ್ಕ ರಾಹುಲ್ ಗಾಂಧಿ ಪುಷ್-ಅಪ್ ಚಾಲೆಂಜ್‌ ಸ್ವೀಕರಿಸಿದ್ದಾರೆ.

Rahul Gandhi: ಡಿಕೆ ಶಿವಕುಮಾರ್, ಪುಟ್ಟ ಬಾಲಕನ ಜೊತೆ ರಸ್ತೆಯಲ್ಲೇ ಪುಶ್​-ಅಪ್ ಚಾಲೆಂಜ್ ಸ್ವೀಕರಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
ರಸ್ತೆಯಲ್ಲೇ ಪುಷ್-ಅಪ್ ಚಾಲೆಂಜ್ ಸ್ವೀಕರಿಸಿದ ರಾಹುಲ್ ಗಾಂಧಿ
TV9 Web
| Edited By: |

Updated on: Oct 12, 2022 | 8:30 AM

Share

ಬೆಂಗಳೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ಪ್ರಯುಕ್ತ ಕರ್ನಾಟದಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ಪುಷ್-ಅಪ್ ಚಾಲೆಂಜ್ (Push-Up Challenge) ಸ್ವೀಕರಿಸಿದರು. ಅಲ್ಲೇ ಇದ್ದ ಪುಟ್ಟ ಹುಡುಗ ಕೂಡ ಕರ್ನಾಟಕದ ರಸ್ತೆಯಲ್ಲಿ ರಾಹುಲ್ ಗಾಂಧಿ ಜೊತೆ ಪುಶ್-ಅಪ್ ಮಾಡಿದ್ದಾನೆ.

ಭಾರತ್ ಜೋಡೋ ಯಾತ್ರೆಯ ಪ್ರಯುಕ್ತ ಕರ್ನಾಟಕದಲ್ಲಿರುವ ರಾಹುಲ್ ಗಾಂಧಿಯವರ ವಿಡಿಯೋಗಳನ್ನು ಕಾಂಗ್ರೆಸ್​ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿರುವಾಗ ಹುಡುಗನೊಬ್ಬ ಅವರ ಜೊತೆ ಸೇರಿಕೊಂಡು ತನ್ನ ತೋಳಿನ ಬಲವನ್ನು ತೋರಿಸುತ್ತಾನೆ. ಇದನ್ನು ನೋಡಿ ನಕ್ಕ ರಾಹುಲ್ ಗಾಂಧಿ ಪುಷ್-ಅಪ್ ಚಾಲೆಂಜ್‌ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಸಿದ್ದು ಕೈ ಹಿಡಿದು ಓಡಿದ ರಾಹುಲ್​: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ!

ತನ್ನೊಂದಿಗೆ ಪುಶ್-ಅಪ್ ಮಾಡಲು ಆ ಹುಡುಗನನ್ನು ಆಹ್ವಾನಿಸಿದ ರಾಹುಲ್ ಗಾಂಧಿ ನಡುರಸ್ತೆಯಲ್ಲೇ ಪುಶ್-ಅಪ್ ಮಾಡಲು ಶುರು ಮಾಡುತ್ತಾರೆ. ಆಗ ಕೆಸಿ ವೇಣುಗೋಪಾಲ್, ಡಿಕೆ ಶಿವಕುಮಾರ್ ಸಹ ಅವರ ಜೊತೆ ಸೇರುತ್ತಾರೆ. ಆದರೆ, ಡಿಕೆ ಶಿವಕುಮಾರ್ ಅವರಿಗೆ ಸುಸ್ತಾಗಿ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಎಂದು ಎದ್ದು ನಿಲ್ಲುತ್ತಾರೆ. ಬಾಲಕನ ಜೊತೆ ರಾಹುಲ್ ಗಾಂಧಿ ಪುಶ್-ಅಪ್ ಮಾಡಿ ಆತನನ್ನು ಖುಷಿಪಡಿಸುತ್ತಾರೆ.

ಪುಶ್-ಅಪ್ ಚಾಲೆಂಜ್​ನ ಕೊನೆಯಲ್ಲಿ ರಾಹುಲ್ ಗಾಂಧಿ ಆ ಹುಡುಗನಿಗೆ ಕೈ ಕುಲುಕಿದ್ದಾರೆ. ರಾಹುಲ್ ಗಾಂಧಿ ಪುಶ್- ಅಪ್ ಚಾಲೆಂಜ್ ಅನ್ನು ಸಂತೋಷದಿಂದ ಸ್ವೀಕರಿಸುತ್ತಿರುವುದು ಇದೇ ಮೊದಲಲ್ಲ. 2021ರ ಅವರ ಹಿಂದಿನ ಪುಶ್-ಅಪ್ ವೀಡಿಯೊ ಕೂಡ ವೈರಲ್ ಆಗಿತ್ತು. ಆ ಸಮಯದಲ್ಲಿ, ಅವರು ತಮಿಳುನಾಡಿನ ಕಾಲೇಜಿನಲ್ಲಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜೊತೆ ಅವರು ಪುಶ್-ಅಪ್ ಮಾಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ