Karnataka Politics: ಡಿಕೆ ಸುರೇಶ್ ರಾಜಕೀಯ ನಿವೃತ್ತಿ ಮಾತು: ಸ್ಫೋಟಕ ಕಾರಣ ಕೊಟ್ಟ ಆರ್ ಅಶೋಕ್

|

Updated on: Jun 18, 2023 | 3:29 PM

ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದಾರೆ. ಮತ್ತೊಂದೆಡೆ ಇದಕ್ಕೆ ಬಿಜೆಪಿ ನಾಯಕ ಆರ್ ಅಶೋಕ್ ಸ್ಪೋಟಕ ಕಾರಣ ಕೊಟ್ಟಿದ್ದಾರೆ.

Karnataka Politics: ಡಿಕೆ ಸುರೇಶ್ ರಾಜಕೀಯ ನಿವೃತ್ತಿ ಮಾತು: ಸ್ಫೋಟಕ ಕಾರಣ ಕೊಟ್ಟ ಆರ್ ಅಶೋಕ್
ಡಿಕೆ ಸುರೇಶ್, ಆರ್ ಅಶೋಕ್
Follow us on

ಬೆಂಗಳೂರು: ಕಾಂಗ್ರೆಸ್ ಸಂಸದ ಡಿಕೆ ಶಿವಕುಮಾರ್ ಅವರು ಅದ್ಯಾಕೋ ರಾಜಕಾರಣದ ಬಗ್ಗೆ ಮಾತುಗಳನ್ನಾಡುತ್ತಿದ್ದು, ರಾಜಕಾರಣವೇ ಬೇಡ ಎಂಬ ಅರ್ಥದಲ್ಲಿ ಹೇಳುತ್ತಿದ್ದಾರೆ. ಇನ್ನು ಇದಕ್ಕೆ ಬಿಜೆಪಿ ಶಾಸಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಗ್ಯಾರಂಟಿಯಾಗಿ ಹೇಳುತ್ತೇನೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ. ಕರ್ನಾಟಕದಲ್ಲಿ ಅವರಿಬ್ಬರಿಗಿಂತ ಸಿದ್ದರಾಮಯ್ಯ ಪವರ್ ಫುಲ್​. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಅದಕ್ಕಾಗಿ ಡಿ.ಕೆ.ಸುರೇಶ್ ರಾಜಕೀಯ ನಿವೃತ್ತಿ ಹೇಳಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಬಿಗ್ ಶಾಕ್: ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಡಿಕೆ ಸುರೇಶ್?

ಬೆಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅಶೋಕ್, ಡಿ.ಕೆ.ಶಿವಕುಮಾರ್​ ಸಿಎಂ ಆಗಲ್ಲವೆಂದು ಡಿ.ಕೆ.ಸುರೇಶ್​ಗೆ ಗೊತ್ತಾಗಿದೆ. ಕಾಂಗ್ರೆಸ್​ ಒಂದು ರೀತಿ ಒಡೆದ ಮನೆ ಆಗಿದೆ. ಶ್ಯಾಡೋ ಮುಖ್ಯಮಂತ್ರಿಯಂತೆ ನಟಿಸಲು ಡಿಕೆ ಶಿವಕುಮಾರ್ ಹೋಗುತ್ತಿದ್ದಾರೆ. ಇನ್ನು 6 ತಿಂಗಳಲ್ಲಿ ಸಿದ್ದರಾಮಯ್ಯ, ಡಿಕೆ ಜಗಳ ಬಹಿರಂಗವಾಗುತ್ತದೆ ಎಂದು ಅಶೋಕ್ ಭವಿಷ್ಯ ನುಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅವರಲ್ಲಿನ ಒಳ ಜಗಳ ಒಂದೊಂದಾಗಿ ಹೊರ ಬರುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ತರ ನಾನು ಗ್ಯಾರೆಂಟಿಯಾಗಿ ಹೇಳುತ್ತೇನೆ ಸಿದ್ದರಾಮಯ್ಯ ಅಧಿಕಾರವನ್ನು ಬಿಟ್ಟುಕೊಡಲ್ಲ. ರಾಜಸ್ಥಾನದಲ್ಲಿ ಶೇರಿಂಗ್ ಆಗಿದ್ದರೂ ಬಿಟ್ಟು ಕೊಟ್ಟಿಲ್ಲ. ಮಧ್ಯಪ್ರದೇಶದಲ್ಲಿ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಕರ್ನಾಟಕದಲ್ಲಿ ಅವರಿಬ್ಬರಕ್ಕಿಂತ ಸಿದ್ದರಾಮಯ್ಯ ಪವರ್ ಪುಲ್ ಪವರ್ ಶೇರಿಂಗ್ ವಿಚಾರ ಒಂದು ನಾಟಕ ಅಷ್ಟೇ. ಡಿಕೆ ಶಿವಕುಮಾರ್ ಒಂದು ಕನಸು ಅಷ್ಟೇ. ಅದಕ್ಕೆ ಅವರ ಸಹೋದರ ಡಿಕೆ ಸುರೇಶ್ ರಾಜಕೀಯ ನಿವೃತ್ತಿ ಹೇಳುತ್ತಿದ್ದಾರೆ. ಡಿಕೆ ಸುರೇಶ್ ಗೆ ಡಿಕೆ ಶಿವಕುಮಾರ್ ಇನ್ಮುಂದೆ ಸಿಎಂ ಆಗೋದೇ ಇಲ್ಲ ಎಂದು ಗೊತ್ತಾಗಿದೆ. ಆದ್ದರಿಂದ ಈ ರೀತಿಯಾದ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ