ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ, ಫೇಸ್​ಬುಕ್​​ನಲ್ಲಿ ಪೋಸ್ಟ್ ಮಾಡಿದ ಸಂಸದ ಜಾಧವ್! ವಾಸ್ತು ನೋಡಿ ಹಕ್ಕು ಚಲಾಯಿಸಿದ ರೇವಣ್ಣ!

ಸಂಸದ ಡಾ. ಉಮೇಶ್ ಜಾಧವ್ ಫೇಸ್​ಬುಕ್​​ ಪೋಸ್ಟ್ ಹೀಗಿದೆ: ಇಂದು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾಗವಹಿಸಿ ಜಿಲ್ಲೆಯ ತಾಲೂಕಾ ಪಂಚಾಯತ ಕಛೇರಿಗೆ ತೆರಳಿ ನನ್ನ ಮತವನ್ನು ಚಲಾಯಿಸಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸ ನಮಗಿದೆ. #MLCElections

Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 10, 2021 | 10:08 AM

ಕಲಬುರಗಿ: ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ವೇಳೆ ಬಿಜೆಪಿ ಸಂಸದ ಜಾಧವ್ ಗೌಪ್ಯ ಮತದಾನ ನಿಯಮ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ನನ್ನ ಮತ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಪರ ಚಲಾಯಿಸಿದೆ ಎಂದು ಬಿ.ಜಿ.ಪಾಟೀಲ್​ಗೆ ಮತಚಲಾವಣೆ ಬಗ್ಗೆ ಫೇಸ್​ಬುಕ್​​ನಲ್ಲಿ ಸಂಸದ ಡಾ. ಉಮೇಶ್ ಜಾಧವ್ ಪೋಸ್ಟ್ ಒಂದನ್ನು ಚಿತ್ರ ಸಮೇತ ಹಾಕಿದ್ದಾರೆ. ಇದರೊಂದಿಗೆ ಕಲಬುರಗಿ ಕ್ಷೇತ್ರದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ತಾವು ವೋಟ್​ ಹಾಕಿರುವ ಬಗ್ಗೆ ಬಹಿರಂಗವಾಗಿ ಹೇಳಿದಂತಾಗಿದೆ.

ಸಂಸದ ಡಾ. ಉಮೇಶ್ ಜಾಧವ್ ಫೇಸ್​ಬುಕ್​​ ಪೋಸ್ಟ್ ಹೀಗಿದೆ: ಇಂದು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾಗವಹಿಸಿ ಜಿಲ್ಲೆಯ ತಾಲೂಕಾ ಪಂಚಾಯತ ಕಛೇರಿಗೆ ತೆರಳಿ ನನ್ನ ಮತವನ್ನು ಚಲಾಯಿಸಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸ ನಮಗಿದೆ. #MLCElections

ವಾಸ್ತು ಮತ್ತು ಸಂಖ್ಯಾ ಶಾಸ್ತ್ರದ ಪ್ರಕಾರ ಹಕ್ಕು ಚಲಾಯಿಸಿದ ರೇವಣ್ಣ ಕುಟುಂಬಸ್ಥರು:

hd revanna

ವಾಸ್ತು ಪ್ರಕಾರ ಮತದಾನ ಮಾಡಿಸಿದ ಹೆಚ್.ಡಿ. ರೇವಣ್ಣ

ಈ ಮಧ್ಯೆ ಇಂದು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕೊನೆಯ ಪುತ್ರ ಚುನಾವಣಾ ಕಣದಲ್ಲಿದ್ದು ರೇವಣ್ಣ ಕುಟುಂಬದವರು ವಾಸ್ತು ಮತ್ತು ಸಂಖ್ಯಾ ಶಾಸ್ತ್ರದ ಪ್ರಕಾರ ಹಕ್ಕು ಚಲಾಯಿಸಿದ್ದಾರೆ. ರೇವಣ್ಣ ಅವರು ವಾಸ್ತು ಪ್ರಕಾರ ಹಕ್ಕು ಚಲಾಯಿಸುವ ಮುನ್ನ ಹೊಣೆನರಸೀಪುರದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಮಧ್ಯೆ, ಅವರ ಮತ್ತೊಬ್ಬ ಪುತ್ರ ಪ್ರಜ್ಚಲ್ ರೇವಣ್ಣ ಒಂಬತ್ತು ಅದೃಷ್ಟ ಸಂಖ್ಯೆ ಎನ್ನೋ ಕಾರಣಕ್ಕೆ ನಂಬರ್ ಪ್ರಕಾರ ಹಕ್ಕು ಚಲಾಯಿಸಿದರು.

ಇನ್ನು ಹಾಸನ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ಹಿನ್ನೆಲೆಯಲ್ಲಿ ಮತದಾನಕ್ಕೂ ಮೊದಲು ಸಂಸದ ಪ್ರಜ್ವಲ್ ರೇವಣ್ಣ ಹೊಳೆನರಸೀಪುರ ಶ್ರಿಲಕ್ಷ್ಮಿ ನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಕೂಡ ಇದೇ ದೇವಸ್ಥಾನದಲ್ಲಿ ತಂದೆ ಹೆಚ್.ಡಿ.ರೇವಣ್ಣ ಜೊತೆಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ಹೆಚ್.ಡಿ.ರೇವಣ್ಣ ಪುರಸಭೆ ಸದಸ್ಯರಿಂದ ವಾಸ್ತು ಪ್ರಕಾರ ಮತದಾನ ಮಾಡಿಸಿದ್ದಾರೆ.

Published On - 9:57 am, Fri, 10 December 21