ಬಿಜೆಪಿ- ಕಾಂಗ್ರೆಸ್ ನಾಯಕರ ಕಿತ್ತಾಟ ಪ್ರಕರಣ: ರೌಡಿ ಡಿಕೆ ಬ್ರದರ್ಸ್​ ಎಂದು ಬಿಜೆಪಿ ಘಟಕ ಟ್ವೀಟ್

| Updated By: ganapathi bhat

Updated on: Jan 03, 2022 | 5:21 PM

ಗೂಂಡಾಗಿರಿಯಿಂದಾಗಿ ರಾಮನಗರ ಹೆಸರುಗಳಿಸಬಾರದು. ಇಂತಹ ಅನಾಗರಿಕ ವರ್ತನೆ ಕೇವಲ ಒಂದು ಪಕ್ಷದಿಂದ ಸಾಧ್ಯ. ನಿಮ್ಮ ಹೋರಾಟ ಅಭಿವೃದ್ಧಿ ವಿಚಾರವಾಗಿರಲಿ ಎಂದು ಅಶ್ವತ್ಥ್​ ಹೇಳಿದ್ದಾರೆ.

ಬಿಜೆಪಿ- ಕಾಂಗ್ರೆಸ್ ನಾಯಕರ ಕಿತ್ತಾಟ ಪ್ರಕರಣ: ರೌಡಿ ಡಿಕೆ ಬ್ರದರ್ಸ್​ ಎಂದು ಬಿಜೆಪಿ ಘಟಕ ಟ್ವೀಟ್
ಡಿಕೆ ಶಿವಕುಮಾರ್ (ಎಡ), ಡಿಕೆ ಸುರೇಶ್ (ಬಲ)
Follow us on

ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ರೌಡಿ ಡಿಕೆ ಬ್ರದರ್ಸ್​ ಎಂದು ಬಿಜೆಪಿ ಘಟಕ ಆಕ್ರೋಶ ಹೊರಹಾಕಿದೆ. ತೋಳ್ಬಲ, ಅಕ್ರಮ ಸಂಪತ್ತಿನ ಬಲದಿಂದ ಮೆರೆಯುತ್ತಿರುವ ಕನಕಾಸುರರು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಅಧಿಕಾರ ಹಿಡಿದು ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಇವರು ಅಧಿಕಾರಕ್ಕೆ ಬಂದ್ರೆ ಕಂಡ ಕಂಡ ಖಾಲಿ ಜಾಗಕ್ಕೆ ಬೇಲಿ ಹಾಕುವುದರಲ್ಲಿ ಅನುಮಾನವಿಲ್ಲ. ರಾಜ್ಯದ ಜನರು ಇಂಥವರಿಗೆ ಅಧಿಕಾರ ನೀಡಲಾರರು ಎಂದು ಡಿಕೆ ಬ್ರದರ್ಸ್​ ವಿರುದ್ಧ ಟ್ವಿಟರ್​​ನಲ್ಲಿ ರಾಜ್ಯ ಬಿಜೆಪಿ ಗರಂ ಆಗಿದೆ.

ಸಂಸದ ಡಿ.ಕೆ.ಸುರೇಶ್-ಸಚಿವ ಅಶ್ವತ್ಥ್ ನಾರಾಯಣ ಕಿತ್ತಾಟ ಘಟನೆ ಸಂಬಂಧಿಸಿ ಟಿವಿ9ಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ದೇವರಾಜ ಅರಸು, ಗುಂಡೂರಾವ್ ಕಾಲದಲ್ಲಿ ಗೂಂಡಾಗಿರಿ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಗೂಂಡಾಗಿರಿಯನ್ನು ತರುತ್ತಿದೆ. ಸಚಿವರ ಮೇಲೆಯೇ ಹಲ್ಲೆ ಮಾಡಲು ಅವರು ಹೋಗಿದ್ದಾರೆ. ಹೀಗಿರುವಾಗ ಜನಸಾಮಾನ್ಯರನ್ನು ಇವರು ಬಿಡ್ತಾರಾ? ಸಚಿವರು ಯಾವುದೇ ಕೆಟ್ಟ ಪದವನ್ನು ಬಳಕೆ ಮಾಡಿಲ್ಲ. ಜನ ಮಾತಾಡಿದ್ದಕ್ಕೆ ಹಲ್ಲೆ ಮಾಡಲು ಹೋಗುವುದು ಸರಿಯಲ್ಲ. ಸಿಎಂ ಕೂಡಾ ಸ್ಥಳದಲ್ಲಿದ್ದ ಕಾರಣ ಅವರೇ ತೀರ್ಮಾನಿಸುತ್ತಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಗಲಾಟೆ ಕುರಿತು ಸಚಿವ ಡಾ. ಅಶ್ವತ್ಥ್​ ನಾರಾಯಣ ಟ್ವೀಟ್​ ಮಾಡಿದ್ದಾರೆ. ರಾಜ್ಯಕ್ಕೆ ರಾಮನಗರ ಇಬ್ಬರು ಮುಖ್ಯಮಂತ್ರಿಗಳನ್ನ ಕೊಟ್ಟಿದೆ. ಅಭಿವೃದ್ಧಿ ವಿಚಾರವಾಗಿ ರಾಮನಗರ ಹೆಸರು ಗಳಿಸಬೇಕು. ಗೂಂಡಾಗಿರಿಯಿಂದಾಗಿ ರಾಮನಗರ ಹೆಸರುಗಳಿಸಬಾರದು. ಇಂತಹ ಅನಾಗರಿಕ ವರ್ತನೆ ಕೇವಲ ಒಂದು ಪಕ್ಷದಿಂದ ಸಾಧ್ಯ. ನಿಮ್ಮ ಹೋರಾಟ ಅಭಿವೃದ್ಧಿ ವಿಚಾರವಾಗಿರಲಿ ಎಂದು ಅಶ್ವತ್ಥ್​ ಹೇಳಿದ್ದಾರೆ.

ಗಲಾಟೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಸಚಿವರಾದ ಅಶ್ವತ್ಥ್​ ಭಾಷಣ ಬೇಳೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಹಾಗೂ ಕಾಂಗ್ರೆಸ್ ಮುಖಂಡರ ವರ್ತನೆ ಖಂಡನೀಯ. ಇಂಥ ರಾಜಕೀಯ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲ. ರಾಮನಗರ ಕರ್ನಾಟಕದಲ್ಲಿದೆ ಅನ್ನೋದು ನೆನಪಿರಲಿ ಎಂದು ಗಲಾಟೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ; ಚುನಾವಣೆಗೆ ತಿಂಗಳಿರುವಾಗ ರಾಜಕಾರಣ ಮಾಡೋಣ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: ರಾಮನಗರ: ವೇದಿಕೆಯಲ್ಲೇ ಬಿಜೆಪಿ- ಕಾಂಗ್ರೆಸ್ ನಾಯಕರ ಜಟಾಪಟಿ; ಅಶ್ವತ್ಥ ನಾರಾಯಣ ಫ್ಲೆಕ್ಸ್ ಹರಿದು ಆಕ್ರೋಶ!

Published On - 5:19 pm, Mon, 3 January 22