ಸಕಾರಾತ್ಮಕ ಜಾತ್ಯತೀತತೆ ಅಳವಡಿಸಿಕೊಳ್ಳಿ: ಬಿಜೆಪಿ ರಾಷ್ಟ್ರೀಯ ಮಂಡಳಿಯಲ್ಲಿ ಪ್ರತಿನಿಧಿಗಳಿಗೆ ಸಲಹೆ

|

Updated on: Feb 17, 2024 | 8:32 PM

ಯಾವುದೇ ತಾರತಮ್ಯ (ಜಾತಿ, ಪಂಥ ಅಥವಾ ಧರ್ಮ) ಇಲ್ಲದಿರುವಲ್ಲಿ ನಿಜವಾದ ಜಾತ್ಯತೀತತೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರಿಗೆ, ಎಲ್ಲರ ಸಂತೋಷ ಮತ್ತು ಅನುಕೂಲಕ್ಕಾಗಿ, ಅವರ ಹಕ್ಕುಗಳ 100% ಗಾಗಿ ಕೆಲಸ ಮಾಡುವುದಕ್ಕಿಂತ ದೊಡ್ಡ ಸಾಮಾಜಿಕ ನ್ಯಾಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಸಕಾರಾತ್ಮಕ ಜಾತ್ಯತೀತತೆ ಅಳವಡಿಸಿಕೊಳ್ಳಿ: ಬಿಜೆಪಿ ರಾಷ್ಟ್ರೀಯ ಮಂಡಳಿಯಲ್ಲಿ ಪ್ರತಿನಿಧಿಗಳಿಗೆ ಸಲಹೆ
ಬಿಜೆಪಿ
Follow us on

ದೆಹಲಿ ಫೆಬ್ರುವರಿ 17: ಎರಡು ದಿನಗಳ ಕಾಲ ನಡೆಯುವ ಬಿಜೆಪಿ (BJP) ರಾಷ್ಟ್ರೀಯ ಮಂಡಳಿ ಸಭೆಯು (National council) ಇಲ್ಲಿಯ ಭಾರತ ಮಂಟಪಂನಲ್ಲಿ ಇಂದು (ಶನಿವಾರ) ಆರಂಭವಾಗಿದೆ.ಲೋಕಸಭಾ ಚುನಾವಣೆಗೆ (Lok sabha Election)  ರಣತಂತ್ರ ರೂಪಿಸುವುದರ ಜತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಇಲ್ಲಿ ಚಿಂತನ-ಮಂಥನ ನಡೆಲಾಗುತ್ತದೆ. ಬಿಜೆಪಿ ತನ್ನ ಎಲ್ಲಾ 11,300 ಪ್ರತಿನಿಧಿಗಳಿಗೆ, ಉನ್ನತ ಕೇಂದ್ರ ಮಂತ್ರಿಗಳಿಂದ ಪಂಚಾಯತ್ ಅಧ್ಯಕ್ಷರವರೆಗೆ ಎರಡು ದಿನಗಳ ರಾಷ್ಟ್ರೀಯ ಮಂಡಳಿಗೆ ಹಾಜರಾದ ಪ್ರತಿನಿಧಿಗಳಿಗೆ ಐದು ಅಂಶಗಳ ಪಟ್ಟಿ ನೀಡಿದ್ದು  ಇದರಲ್ಲಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಲು ಕೇಳಿಕೊಂಡಿದೆ.

ಪ್ರತಿನಿಧಿಗಳಿಗೆ ಹಸ್ತಾಂತರಿಸಿದ ಪಠ್ಯದಲ್ಲಿ ಅವಳಡಿಸಬೇಕಾದ ವಿಷಯಗಳ ಪಟ್ಟಿ ಇದೆ. ಅದರಲ್ಲಿ ನಾಲ್ಕನೆಯದು ‘ಸರ್ವ್ ಧರ್ಮ ಸಂಭವ’. ಬಿಜೆಪಿ ಅದನ್ನು ‘ಸಕಾರಾತ್ಮಕ ಜಾತ್ಯತೀತತೆ’ ಎಂದು ವಿವರಿಸಿದೆ. ಪಟ್ಟಿ ಮಾಡಲಾದ ಇತರ ವಿಷಯಗಳೆಂದರೆ ಸಾಂಸ್ಕೃತಿಕ ರಾಷ್ಟ್ರೀಯತೆ, ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಮತ್ತು ನೈತಿಕತೆಯಿಂದ ಕೂಡಿದ ರಾಜಕೀಯ.

ಬಿಜೆಪಿಯ ಜಾತ್ಯತೀತತೆಯ ಬ್ರ್ಯಾಂಡ್ ಮತ್ತು ಪ್ರತಿಪಕ್ಷಗಳ ನಡುವಿನ ವ್ಯತ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಎತ್ತಿ ತೋರಿಸುತ್ತಾರೆ. “ಯಾವುದೇ ತಾರತಮ್ಯ (ಜಾತಿ, ಪಂಥ ಅಥವಾ ಧರ್ಮ) ಇಲ್ಲದಿರುವಲ್ಲಿ ನಿಜವಾದ ಜಾತ್ಯತೀತತೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರಿಗೆ, ಎಲ್ಲರ ಸಂತೋಷ ಮತ್ತು ಅನುಕೂಲಕ್ಕಾಗಿ, ಅವರ ಹಕ್ಕುಗಳ 100% ಗಾಗಿ ಕೆಲಸ ಮಾಡುವುದಕ್ಕಿಂತ ದೊಡ್ಡ ಸಾಮಾಜಿಕ ನ್ಯಾಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೌದು, ನಾವು ನಡೆಯುತ್ತಿರುವುದು ಇದೇ ಹಾದಿ,” ಎಂದು ಕಳೆದ ವರ್ಷ ಮೇನಲ್ಲಿ ಮೋದಿ ಹೇಳಿದ್ದರು. ಬಿಜೆಪಿ ಯಾವಾಗಲೂ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಜಾತ್ಯತೀತತೆಯ ಬ್ರ್ಯಾಂಡ್ ಅನ್ನು “ಹುಸಿ ಜಾತ್ಯತೀತತೆ” ಎಂದು ಕರೆಯುತ್ತದೆ.

ಬಿಜೆಪಿಯ ‘ಮಿಷನ್ 370’ ಸಮಾವೇಶದ ಸ್ಥಳವಾದ ಭಾರತ್ ಮಂಟಪದಲ್ಲಿ ವೇದಿಕೆಯಲ್ಲಿಯೂ ಭಗವಾನ್ ರಾಮನ ಘೋಷಣೆ ಕೂಗಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370 ಸೀಟುಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪದಾಧಿಕಾರಿಗಳ ಮುಚ್ಚಿದ ಬಾಗಿಲಿನ ಸಭೆ ನಡೆಸಿದರು. “ಬೋಲಿಯೇ ಸಿಯಾವರ್ ರಾಮ್ ಚಂದ್ರ ಕೀ ಜೈ”, “ಜೈ ಜೈ ಶ್ರೀ ರಾಮ್” ಮತ್ತು “ಭಾರತ್ ಮಾತಾ ಕೀ ಜೈ” ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

ಇದನ್ನೂ ಓದಿ: ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ಬೃಹತ್ ರಾಷ್ಟ್ರೀಯ ಸಮಾವೇಶ: ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು

ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರದ ಫೋಟೋ ಪ್ರಮುಖವಾಗಿ ವಂದೇ ಭಾರತ್ ರೈಲುಗಳು ಮತ್ತು ಚಂದ್ರಯಾನ 3 ಮಿಷನ್ ಜೊತೆಗೆ ಮೋದಿ ಸರ್ಕಾರದ 2.0 ನ ಪ್ರಮುಖ ಸಾಧನೆಯಾಗಿ ಬಿಂಬಿಸಲಾಗಿದೆ. ರೈತರ ಜೊತೆಗೆ ದೇಶಕ್ಕೆ ಪ್ರಶಸ್ತಿಗಳನ್ನು ತಂದ ಭಾರತದ ಮಹಿಳಾ ಕ್ರೀಡಾಪಟುಗಳ ಫೋಟೋಗಳು ಸಹ ಕಾಣಿಸಿಕೊಂಡಿವೆ.

ಆದರೆ ಪರಿಷತ್ತಿನ ಮುಖ್ಯ ಅಜೆಂಡಾ ರಾಷ್ಟ್ರೀಯತೆ ಮತ್ತು ಶ್ರೀರಾಮ. ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ಪ್ರಾರ್ಥಿಸುತ್ತಿರುವ ಭಗವಾನ್ ರಾಮನ ವಿಗ್ರಹದ ಫೋಟೋವನ್ನು ಹೊಂದಿರುವ ಕಿರುಪುಸ್ತಕವನ್ನು ಎಲ್ಲಾ ಬಿಜೆಪಿ ಪ್ರತಿನಿಧಿಗಳಿಗೆ ನೀಡಲಾಗಿದೆ. ಕಿರುಪುಸ್ತಕದಲ್ಲಿ ‘ದೇವ್ ಸೇ ದೇಶ್, ರಾಮ್ ಸೇ ರಾಷ್ಟ್ರ’ ಎಂದು ಮುದ್ರಿಸಲಾಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ