AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಸೇರುತ್ತೀರಾ ಎಂದು ಕೇಳಿದಾಗ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದೇನು?

ಶನಿವಾರ ದೆಹಲಿಗೆ ಬಂದಿಳಿದ ಕಮಲ್ ನಾಥ್ "ನೀವು ಯಾಕೆ ತುಂಬಾ ಉತ್ಸುಕರಾಗಿದ್ದೀರಿ?" ಎಂದು ಮಾಧ್ಯಮದವರಿಗೇ ಮರು ಪ್ರಶ್ನೆ ಹಾಕಿದ್ದಾರೆ. ಹಾಗಾದರೆ ನೀವು ವದಂತಿ ನಿರಾಕರಿಸುತ್ತಿಲ್ಲ ಎಂದು ವರದಿಗಾರರೊಬ್ಬರು ಹೇಳಿದಾಗ, "ಇದು ನಿರಾಕರಿಸುವ ಬಗ್ಗೆ ಅಲ್ಲ, ನೀವು ಇದನ್ನು ಹೇಳುತ್ತಿದ್ದೀರಿ, ನೀವು ಉತ್ಸುಕರಾಗಿದ್ದೀರಿ, ಏನಾದರೂ ಇದ್ದರೆ ನಿಮಗೇ ಮೊದಲು ತಿಳಿಸುವೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಸೇರುತ್ತೀರಾ ಎಂದು ಕೇಳಿದಾಗ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದೇನು?
ಕಮಲ್ ನಾಥ್
ರಶ್ಮಿ ಕಲ್ಲಕಟ್ಟ
|

Updated on: Feb 17, 2024 | 7:15 PM

Share

ದೆಹಲಿ ಫೆಬ್ರುವರಿ 17: ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ (BJP) ಕೈಜೋಡಿಸುವ ವದಂತಿಗಳ ಕುರಿತು ಮಾಧ್ಯಮಗಳ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕ ಕಮಲ್ ನಾಥ್ (Kamal Nath) ಉತ್ತರಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ (Mallikarjun kharge) ನೇತೃತ್ವದ ಪಕ್ಷವನ್ನು ತ್ಯಜಿಸಲು ಚಿಂತನೆ ನಡೆಸುತ್ತಿದ್ದೀರಿ ಎಂಬ ವದಂತಿ ಬಗ್ಗೆ ಪತ್ರಕರ್ತರು ಕಮಲ್ ನಾಥ್ ಅವರಲ್ಲಿ ಕೇಳಿದಾಗ ನಾನು ಮೊದಲು ನಿಮಗೇ (ಮಾಧ್ಯಮದವರಿಗೆ) ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಶನಿವಾರ ದೆಹಲಿಗೆ ಬಂದಿಳಿದ ಕಮಲ್ ನಾಥ್ “ನೀವು ಯಾಕೆ ತುಂಬಾ ಉತ್ಸುಕರಾಗಿದ್ದೀರಿ?” ಎಂದು ಮಾಧ್ಯಮದವರಿಗೇ ಮರು ಪ್ರಶ್ನೆ ಹಾಕಿದ್ದಾರೆ. ಹಾಗಾದರೆ ನೀವು ವದಂತಿ ನಿರಾಕರಿಸುತ್ತಿಲ್ಲ ಎಂದು ವರದಿಗಾರರೊಬ್ಬರು ಹೇಳಿದಾಗ, “ಇದು ನಿರಾಕರಿಸುವ ಬಗ್ಗೆ ಅಲ್ಲ, ನೀವು ಇದನ್ನು ಹೇಳುತ್ತಿದ್ದೀರಿ, ನೀವು ಉತ್ಸುಕರಾಗಿದ್ದೀರಿ, ನಾನು ಈ ಕಡೆ ಅಥವಾ ಆ ಕಡೆ ಉತ್ಸುಕನಾಗುತ್ತಿಲ್ಲ, ಆದರೆ ಅಂತಹ ಏನಾದರೂ ಇದ್ದರೆ, ನಾನು ನಿಮಗೆ ಮೊದಲು ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಕಮಲ್ ನಾಥ್ ಅವರ ಪುತ್ರ, ಮಧ್ಯಪ್ರದೇಶದ ಚಿಂದ್ವಾರದ ಸಂಸದ ನಕುಲ್ ನಾಥ್ ಅವರು ತಮ್ಮ ಎಕ್ಸ್ ಬಯೋದಿಂದ ಕಾಂಗ್ರೆಸ್ ಅನ್ನು ತೆಗೆದುಹಾಕಿದ್ದಾರೆ. ಕಮಲ್ ನಾಥ್ ಅವರಪ ಸಂಸತ್ತಿನ ಕೆಳಮನೆಯಲ್ಲಿ ಒಂಬತ್ತು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದರು

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಅವರ ಪುತ್ರ ನಕುಲ್ ನಾಥ್ ಅವರು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಬಿಜೆಪಿ ಆಡಳಿತದ ರಾಜ್ಯವನ್ನು ಪ್ರವೇಶಿಸುವ ಮೊದಲು ಬಿಜೆಪಿಗೆ ಸೇರಬಹುದು.  ಗ್ವಾಲಿಯರ್-ಚಂಬಲ್ ರಾಜಕಾರಣಿ ಅಶೋಕ್ ಸಿಂಗ್ ಅವರನ್ನು ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಾಮನಿರ್ದೇಶನ ಮಾಡುವ ಮೊದಲು ಪಕ್ಷದ ನಾಯಕತ್ವದಿಂದ ಸಮಾಲೋಚಿಸದ ಕಾರಣ ಕಮಲ್ ನಾಥ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

ವದಂತಿ ಅಲ್ಲಗೆಳೆದ ದಿಗ್ವಿಜಯ ಸಿಂಗ್

ಈ ವದಂತಿಗಳನ್ನು ದಿಗ್ವಿಜಯ ಸಿಂಗ್ ಅಲ್ಲಗಳೆದಿದ್ದು, ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ನೆಹರೂ-ಗಾಂಧಿ ಕುಟುಂಬದೊಂದಿಗಿನ ಸುದೀರ್ಘ ಒಡನಾಟವನ್ನು ಅವರು ನಾಥ್ ಅವರಿಗೆ ನೆನಪಿಸಿದರು. “ಜನತಾ ಪಕ್ಷದಿಂದ ಇಂದಿರಾ ಗಾಂಧಿಯನ್ನು ಜೈಲಿಗೆ ಕಳುಹಿಸಿದಾಗ ನೆಹರು-ಗಾಂಧಿ ಕುಟುಂಬದೊಂದಿಗೆ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ವ್ಯಕ್ತಿ, ಅಂತಹ ವ್ಯಕ್ತಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಎಂದಿಗೂ ತೊರೆಯುತ್ತಾರೆ ಎಂದು ನೀವು ಭಾವಿಸುತ್ತೀರಾ?” ಸಿಂಗ್ ಕೇಳಿದ್ದಾರೆ.

ಇದನ್ನೂ ಓದಿ: Jnanpith Award: ಖ್ಯಾತ ಉರ್ದು ಕವಿ ಗುಲ್ಜಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯಗೆ ಜ್ಞಾನಪೀಠ ಪ್ರಶಸ್ತಿ

ಬಿಜೆಪಿಯಿಂದ ಬಹಿರಂಗ ಆಹ್ವಾನ

ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಇತರ ಹಿರಿಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಶುಕ್ರವಾರ ಹೇಳಿದ್ದಾರೆ. “ಆದ್ದರಿಂದ ಇಂದು ನಾನು ನಿಮಗೆ ಹೇಳುತ್ತಿದ್ದೇನೆ, ನಾವು ನಮ್ಮ ಬಾಗಿಲು ತೆರೆದಿದ್ದೇವೆ ಏಕೆಂದರೆ ಕಾಂಗ್ರೆಸ್‌ ರಾಮನನ್ನು ಬಹಿಷ್ಕರಿಸುತ್ತದೆ, ಭಾರತದ ಹೃದಯದಲ್ಲಿ ರಾಮನು ಇದ್ದಾನೆ ಎಂದು ಭಾವಿಸುವ ಜನರು ಕಾಂಗ್ರೆಸ್‌ನಲ್ಲಿದ್ದಾರೆ, ಕಾಂಗ್ರೆಸ್ ಅವರನ್ನು ಅವಮಾನಿಸಿದಾಗ ನೋವು ಅನುಭವಿಸುವ ಜನರಿದ್ದಾರೆ. ಇದರಿಂದ, ಯಾರು ಅಸಮಾಧಾನಗೊಂಡಿದ್ದಾರೆಯೋ ಅವರಿಗೆ ಅವಕಾಶ ಸಿಗಬೇಕು, ನೀವು ಯಾರ ಹೆಸರನ್ನು ತೆಗೆದುಕೊಳ್ಳುತ್ತೀರೋ ಅವರ ಹೃದಯದಲ್ಲಿ ನೋವು ಇದ್ದರೆ, ಅವರಿಗೂ ಸ್ವಾಗತ, ”ಎಂದು ಕಮಲ್ ನಾಥ್ ಬಗ್ಗೆ ಕೇಳಿದಾಗ ಶರ್ಮಾ ಹೇಳಿದರು.

ಕಮಲ್ ನಾಥ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಹಲವಾರು ಶಾಸಕರು ಬಂಡಾಯವೆದ್ದು ಸರ್ಕಾರವನ್ನು ಉರುಳಿಸಿದರು. 2023ರ ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ 230 ವಿಧಾನಸಭಾ ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಹೀನಾಯವಾಗಿ ಸೋಲಿಸಿತು. ನಂತರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಘಟಕದ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಮಿಲಿಂದ್ ದಿಯೋರಾ ಮತ್ತು ಅಶೋಕ್ ಚವಾಣ್ ಅವರು ಕಾಂಗ್ರೆಸ್ ತೊರೆದ ಕೆಲವು ದಿನಗಳ ನಂತರ ಕಮಲ್ ನಾಥ್ ಅವರೂ ಪಕ್ಷ ಬದಲಿಸಲಿದ್ದಾರೆ ಎಂಬ ವದಂತಿ ಹರಿದಾಡಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ