INSAT-3DS Launch: ಸುಧಾರಿತ ಹವಾಮಾನ ಉಪಗ್ರಹ ಇನ್ಸಾಟ್ -3DS ಉಡಾವಣೆ ಮಾಡಿದ ಇಸ್ರೋ

INSAT-3DS: ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಯ ಸಾಮರ್ಥ್ಯ ಸುಧಾರಿಸುವ ಗುರಿ ಹೊಂದಿರುವ ಇನ್ಸಾಟ್- 3ಡಿಎಸ್” ಉಪಗ್ರಹ ಉಡಾವಣೆಗೊಂಡಿದೆ. ಇನ್ಸಾಟ್- 3ಡಿಎಸ್ ಭಾರತಕ್ಕೆ ಎದುರಾಗುವ ಹವಾಮಾನ ಹಾಗೂ ವಿಪತ್ತುಗಳ ಬಗ್ಗೆ ತಿಳಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ NSAT-3DS ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯನವನ್ನು ಬರೆಯಲಿದೆ ಎಂದು ಇಸ್ರೋ ಹೇಳಿದೆ.

INSAT-3DS Launch: ಸುಧಾರಿತ ಹವಾಮಾನ ಉಪಗ್ರಹ ಇನ್ಸಾಟ್ -3DS ಉಡಾವಣೆ ಮಾಡಿದ ಇಸ್ರೋ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 17, 2024 | 6:33 PM

ಶ್ರೀಹರಿಕೋಟಾ, ಫೆ.17: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಂದು (ಫೆ.17) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಎಫ್ 14 (ಜಿಎಸ್ಎಲ್ವಿ-ಎಫ್14) ನಲ್ಲಿ ಇನ್ಸಾಟ್-3DS ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಿದೆ. ಈ ಇನ್ಸಾಟ್-3DSನ್ನು ದೇಶದಲ್ಲಿ ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಯ ನಿರ್ವಹಣೆ ಮಾಡುವ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. 6-ಚಾನೆಲ್ ಇಮೇಜರ್ ಮತ್ತು 19-ಚಾನೆಲ್ ಸೌಂಡರ್ ಸೇರಿದಂತೆ ಅತ್ಯಾಧುನಿಕ ಪೇಲೋಡ್‌ಗಳೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ NSAT-3DS ಉನ್ನತ ಮಟ್ಟದಲ್ಲಿ ಹವಾಮಾನ ದತ್ತಾಂಶ ಸಂಗ್ರಹ ಮಾಡುತ್ತದೆ ಎಂದು ಇಸ್ರೋ ಹೇಳಿದೆ.

NSAT-3DS ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯನವನ್ನು ಬರೆಯಲಿದೆ. ಇದರ ನಿರ್ಮಾಣಕ್ಕೆ ಕೇಂದ್ರ ಭೂ ವಿಜ್ಞಾನ ಸಚಿವಾಲಯ ಪೂರ್ಣ ಮಟ್ಟದ ಹಣದ ಸಹಾಯವನ್ನು ಮಾಡಿದೆ ಎಂದು ಹೇಳಲಾಗಿದೆ. ಇದರ ಮೂಲಕ ನಮ್ಮ ದೇಶಕ್ಕೆ ಬರುವ ಹವಾಮಾನ ಮುನ್ಸೂಚನೆ ಮತ್ತು ವಿಪತ್ತುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಜತೆಗೆ ಇದು ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆ ಕೂಡ ಮಾಡುತ್ತದೆ.

ಉಪಗ್ರಹ ತಯಾರಿಕೆಯಲ್ಲಿ ಭಾರತೀಯ ಕೈಗಾರಿಕೆಗಳ ಗಣನೀಯ ಕೊಡುಗೆ:

ಭೂ ವಿಜ್ಞಾನ ಸಚಿವಾಲಯದ (MoES) ವಿವಿಧ ಇಲಾಖೆಗಳಾದ ಭಾರತ ಹವಾಮಾನ ಇಲಾಖೆ (IMD), ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (NCMRWF), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM), ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) , ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ಹಲವಾರು ಇತರ ಏಜೆನ್ಸಿಗಳು ಮತ್ತು ಸಂಸ್ಥೆಗಳು ಸುಧಾರಿತ ಹವಾಮಾನ ಮುನ್ಸೂಚನೆಗಳು ಮತ್ತು ಹವಾಮಾನ ಸೇವೆಗಳನ್ನು ಒದಗಿಸಲು INSAT-3DS ಉಪಗ್ರಹ ಡೇಟಾವನ್ನು ಬಳಸುತ್ತವೆ.

ಇದನ್ನೂ ಓದಿ: ಇಸ್ರೋದಲ್ಲಿ ಉದ್ಯೋಗಾವಕಾಶಗಳು -ನಿಮ್ಮ ಕೆರಿಯರ್​ ಲಾಂಚ್​​ ಮಾಡಲು ಇಲ್ಲಿದೆ ಸದವಕಾಶ

GSLV F14ನ್ನು ನಾಟಿ ಬಾಯ್ ಎಂದು ಕರೆದ ಮಾಜಿ ಅಧ್ಯಕ್ಷ

ಇನ್ಸಾಟ್-3DS ಉಪಗ್ರಹದೊಂದಿಗೆ ಉಡಾವಣೆಗೊಂಡಿರುವ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನವನ್ನು (GSLV) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಅಧ್ಯಕ್ಷರೊಬ್ಬರು ನಾಟಿ ಬಾಯ್ ಎಂದು ಕರೆದಿದ್ದಾರೆ. GSLV 15 ಹಾರಾಟಗಳನ್ನು ನಡೆಸಿದೆ. ಮೇ 29, 2023 ರಂದು ನಡೆಸಿದ ಹಾರಾಟದಲ್ಲಿ GSLV ಯಶಸ್ವಿಯಾಗಿತ್ತು. ಅದಕ್ಕೂ ಮೊದಲು ಅಂದರೆ ಆಗಸ್ಟ್ 12ರಂದು ನಡೆಸಿದ ಹಾರಾಟದಲ್ಲಿ ವಿಫಲಗೊಂಡಿತ್ತು ಇದಕ್ಕಾಗಿ ಇದನ್ನು ನಾಟಿ ಬಾಯ್ ಎಂದು ಕರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sat, 17 February 24

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM