ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ನಡೆಯುತ್ತಿದೆ, ಪಶುಸಂಗೋಪನಾ ಸಚಿವರೇ ಹಸು ಕಡಿಯಬೇಕು ಅಂತಾ ಹೇಳ್ತಾರೆ -ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ

ಪಶುಸಂಗೋಪನಾ ಸಚಿವರು ಅಂದ್ರೆ ಪಶುಗಳನ್ನು ಕಾಪಾಡುವವರು, ಪಶು ಸಂಪತ್ತು ಆಸ್ತಿ ಕಾಪಾಡುವುದು. ಆದ್ರೆ ದುರದೃಷ್ಟಕರ ಸಂಗತಿ ಪಶುಸಂಗೋಪನಾ ಸಚಿವರೇ ಪಶುಗಳನ್ನ ಕಡಿಯಬೇಕು ಅಂತಾ ಹೇಳ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ನಡೆಯುತ್ತಿದೆ, ಪಶುಸಂಗೋಪನಾ ಸಚಿವರೇ ಹಸು ಕಡಿಯಬೇಕು ಅಂತಾ ಹೇಳ್ತಾರೆ -ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
ಚಕ್ರವರ್ತಿ ಸೂಲಿಬೆಲೆ
Follow us
ಆಯೇಷಾ ಬಾನು
|

Updated on:Jun 05, 2023 | 3:29 PM

ಬೆಂಗಳೂರು: ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಎಂಬ ಸಚಿವ ಕೆ.ವೆಂಕಟೇಶ್​(K Venkatesh) ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‍ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ(Chakravarti Sulibele) ತಿರುಗೇಟು ಕೊಟ್ಟಿದ್ದಾರೆ. ಪಶುಸಂಗೋಪನಾ ಸಚಿವರು ಅಂದ್ರೆ ಪಶುಗಳನ್ನು ಕಾಪಾಡುವವರು, ಪಶು ಸಂಪತ್ತು ಆಸ್ತಿ ಕಾಪಾಡುವುದು. ಆದ್ರೆ ದುರದೃಷ್ಟಕರ ಸಂಗತಿ ಪಶುಸಂಗೋಪನಾ ಸಚಿವರೇ ಪಶುಗಳನ್ನ ಕಡಿಯಬೇಕು ಅಂತಾ ಹೇಳ್ತಾರೆ. ಸಚಿವರು ಹಸು ಕಡಿಯುವುದಕ್ಕೆ ಬೇರೆ ಬೇರೆ ಕಾರಣ ನೀಡುತ್ತಿದ್ದಾರೆ. ಜನರು ಸರ್ಕಾರದ ನಡುವಳಿಕೆ ನೋಡ್ತಾ ಇದ್ದಾರೆ. ಇದನ್ನೆಲ್ಲ ಬಿಟ್ಟು ಸರ್ಕಾರ ಮೊದಲು 200 ಯೂನಿಟ್ ಕರೆಂಟ್ ಕೊಡ್ಲಿ ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಷರತ್ತು ಇಲ್ಲದೆ ಕರೆಂಟ್ ಕೊಡುವ ಕೆಲಸ ಮಾಡಲಿ. ಸಿದ್ದರಾಮಯ್ಯನವರೇ ನೀವು ಹೇಳಿದ್ದಂತೆ 200 ಯೂನಿಟ್ ಕರೆಂಟ್ ನೀಡಿ. ಕಾಂಗ್ರೆಸ್ ಸರ್ಕಾರದಿಂದ ಬೇರೆ ಏನು ನಿರೀಕ್ಷೆ ಸಾಧ್ಯವಿಲ್ಲ. ಮುಸ್ಲಿಂರ 80% ಓಟ್ ಪಡೆದು ಅಧಿಕಾರಕ್ಕೆ ಬಂದ ಸರ್ಕಾರ ನಿಮ್ಮದು. ಲಿಂಗಾಯತರಿಗೂ ನೀವು ಈ ಕಾಯ್ದೆ ವಾಪಸ್ಸನಿಂದ ಅವಮಾನ ಮಾಡಿದ್ದಂತೆ, ಈ ನಾಡಿನ ಹಿಂದೂಗಳಿಗೂ ಅವಮಾನ ಮಾಡಿದ್ದಂತೆ. ಸಮಾಜ ಜನರು ಸರ್ಕಾರದ ನಡೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಹಿಟ್ಲರ್ ಸರ್ಕಾರ ತಂದಿದ್ದಾರೆ. ಪ್ರತಿಭಟನಾತ್ಮಕವಾಗಿ ನಾಲ್ಕು ಲೈನ್ ಸಮಾಜಿಕ ಜಾಲತಾಣದಲ್ಲಿ ಬರೆಯೋದಕ್ಕೂ ಅವಕಾಶ ನೀಡಿಲ್ಲ. ಸರ್ಕಾರದ ವಿರುದ್ಧ ಮಾತನಾಡಿದ್ರೆ ನಡು ಬೀದಿಯಲ್ಲಿ ಹೊಡೆಯುವ ಕೆಲಸ ಮಾಡಿದ್ದಾರೆ. ನಿನ್ನೆ ನಂಜನಗೂಡಿನಲ್ಲಿ ಭಾರತ ಮಾತಕೀ ಜೈ ಅಂತಾ ಹೇಳಿದಕ್ಕೆ ಚೂರಿ ಇಂದ ಇರಿದಿದ್ದಾರೆ. ಸರ್ಕಾರ ತನ್ನ ಅಸ್ತ್ರವನ್ನ ಹಿಟ್ಲರ್ ರೀತಿ ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಇದನ್ನೂ ಓದಿ: ರಾಜಕೀಯ ಬಿಟ್ಟು ಬೆಂಗಳೂರು ಅಭಿವೃದ್ಧಿ ಮಾಡೋಣ: ಶಾಸಕರ ಸಭೆಯಲ್ಲಿ ಡಿಕೆ ಶಿವಕುಮಾರ್ ಕಿವಿಮಾತು

ಸಚಿವ ವೆಂಕಟೇಶ್​ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಇನ್ನು ಸಚಿವ ವೆಂಕಟೇಶ್​ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಸಚಿವರು ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಗೋ ಹತ್ಯೆ ನಿಷೇಧ ಕಾನೂನು ತಂದಿರುವ ಉದ್ದೇಶ ಗೋ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಅಂತ. ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದ್ರೆ ಕಾಂಗ್ರೆಸ್​ಗೆ ಆಪತ್ತು ಕಾದಿದೆ. ಈ ಸರ್ಕಾರಕ್ಕೆ ಅಧಿಕಾರದ ಅಮಲು ಬಂದಿದೆ. ಪ್ರತಿಯೊಬ್ಬ ವ್ಯಕ್ತಿಯ ವಾಕ್ ಸ್ವಾತಂತ್ರ್ಯ ಮೊಟಕು ಗೊಳಿಸುತ್ತಿದ್ದಾರೆ. ಅತೀ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮರ್ಜೆನ್ಸಿ ಬರುತ್ತೆ. ನಾವು ವಿರೋಧ ಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಯಾರನ್ನ‌ ಜೈಲಿಗೆ ಹಾಕ್ತಿರೋ ಹಾಕಿ, ನಿಮಗೆ ಜೈಲುಗಳು ಸಾಕಾಗೋದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಕಿಡಿಕಾರಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:28 pm, Mon, 5 June 23