Thippareddy: ಮಂಜುನಾಥ್ ಮತ್ತು ನನ್ನ ಮಧ್ಯೆ ಮೊದಲಿನಿಂದಲೂ ದ್ವೇಷವಿದೆ, ಆತನಿಗೆ ಬೆದರಿಸುವ ಗುಣ ಇದೆ: ಶಾಸಕ ತಿಪ್ಪಾರೆಡ್ಡಿ

ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ 25 % ಕಮಿಷನ್ ಆರೋಪ ಮಾಡಲಾಗಿದ್ದು, ಆಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ತಿಪ್ಪಾರೆಡ್ಡಿ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

Thippareddy: ಮಂಜುನಾಥ್ ಮತ್ತು ನನ್ನ ಮಧ್ಯೆ ಮೊದಲಿನಿಂದಲೂ ದ್ವೇಷವಿದೆ, ಆತನಿಗೆ ಬೆದರಿಸುವ ಗುಣ ಇದೆ: ಶಾಸಕ ತಿಪ್ಪಾರೆಡ್ಡಿ
ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
Follow us
TV9 Web
| Updated By: Rakesh Nayak Manchi

Updated on:Jan 16, 2023 | 4:41 PM

ಚಿತ್ರದುರ್ಗ: ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಂಜುನಾಥ್ ಹಾಗೂ ನನ್ನ ನಡುವೆ ಮೊದಲಿನಿಂದಲೂ ದ್ವೇಷವಿದೆ, ವೈಯಕ್ತಿಕ ವಿಚಾರಕ್ಕಾಗಿ ಆತ ಈ ರೀತಿ ಮಾಡಿರುವುದಾಗಿ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ (MLA G.H.Thippareddy) ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಭ್ರಷ್ಟಾಚಾರ (Corruption) ಆರೋಪ ಮಾಡಿದ ಹಿನ್ನಲೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಚ್ಚಂಗಿ ಯಲ್ಲಮ್ಮ ದೇಗುಲ ಕಾಮಗಾರಿ ಕಳಪೆಯಾಗಿದೆ. ಅದನ್ನು ಈಗ ಆರೋಪಿಸುವುದು ಸರಿಯಲ್ಲ. ಎಲ್ಲಾ ಕಾಮಗಾರಿ ವೇಳೆ ಆತನೇ ಸುಪ್ರೀಂ ರೀತಿ ವರ್ತನೆ ಮಾಡುತ್ತಾನೆ. ನಾನು ಅಧ್ಯಕ್ಷ ಅಂತ ದೌರ್ಜನ್ಯ ಮಾಡುತ್ತಾರೆ. ಅಷ್ಟು ಕೊಟ್ಟಿದೇನೆ, ಇಷ್ಟು ಕೊಟ್ಟಿದ್ದೇನೆ ಅಂತ ಹೇಳಿದ್ದಾನೆ. ಆದರೆ ಯಾರಿಗೆ ಕೊಟ್ಟಿದ್ದಾನೆ ಅಂತ ಗೊತ್ತಿಲ್ಲ ಎಂದರು.

ಕಂಟ್ರಾಕ್ಟರ್ ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರೂ ಆತ ಹೇಳಿದ್ದೇ ಫೈನಲ್ ಆಗಿತ್ತು. ಅಧಿಕಾರಿಗಳಿಗೆ ನಾನು ಜಿಲ್ಲಾ ಅಧ್ಯಕ್ಷ ಅಂತ ಬೆದರಿಸುತ್ತಾನೆ. ಸಣ್ಣಪುಟ್ಟ ಕಂಟ್ರಾಕ್ಟರ್​ಗಳು ಕೆಲಸ‌ ಕೇಳಿದಾಗ ತಾರತಮ್ಯ ಮಾಡುತ್ತಿದ್ದನು. ಯಾರ ಬೆಂಬಲಿಗರು, ಯಾವ ಪಕ್ಷ ಅಂತ ಕೇಳುತ್ತಿದ್ದನು ಎಂದು ಶಾಸಕ ತಿಪ್ಪಾರೆಡ್ಡಿ ಅವರು ಮಂಜುನಾಥ್ ವಿರುದ್ಧ ಆರೋಪ ಮಾಡಿದರು.

ಇದನ್ನೂ ಓದಿ: Thippareddy Audio: ಕೆಲವು ಆಡಿಯೋ ಮಿಮಿಕ್ರಿ ಆಗಿರಲೂ ಬಹುದು ಎಂದ ಶಾಸಕ ಪ್ರೀತಮ್ ಗೌಡ

ಆತ ಯುಜಿಡಿ ಕಾಮಗಾರಿ ವೇಳೆ ಪೈಪ್ ಲೈನ್ ಹೊಡೆದಿದ್ದನು. ಅದನ್ನು ಕೇಳಿದ್ದೆ. ಕೇಳಿರುವುದು ತಪ್ಪಾ ಎಂದು ಪ್ರಶ್ನಿಸಿದ ಶಾಸಕ ತಿಪ್ಪಾರೆಡ್ಡಿ ಅವರು ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರವನ್ನು ‌ಜೊತೆಗೆ ಮಾಡೋಣ ಎಂದು ಮಂಜುನಾಥ್ ನನ್ನ ಬಳಿ ಕೇಳಿದ್ದನು. ಅದನ್ನು ನಾನು ವಿರೋಧಿಸಿದ್ದಕ್ಕೆ ಇದೆಲ್ಲ ಶುರುವಾಗಿದೆ ಎಂದರು.

ಆತನ ಗುಣವೇ ಹೆದರಿಸಿ ಕೆಲಸ‌ ಮಾಡುವುದಾಗಿದೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆ. ಆಸ್ಪತ್ರೆಯ ಕೆಎಚ್​ಎಸ್​ಡಿಪಿ ಯೋಜನೆಯ ಟೆಂಡರ್ ಕೊಡಿಸದ ಹಿನ್ನಲೆಯಲ್ಲಿ ಆರೋಪ ಮಾಡಲಾಗಿದೆ. ಈ ವಿಚಾರದಲ್ಲಿ ಇಬ್ಬರ ಮದ್ಯೆ ಮೌಕಿಕ ಮಾತುಕತೆ ನಡೆದಿತ್ತು ಎಂದು ಶಾಸಕರು ಸ್ಪಷ್ಟನೆ ನೀಡಿದರು.

ತಿಪ್ಪಾರೆಡ್ಡಿ ವಿರುದ್ಧ ಮಂಜುನಾಥ್ ಮಾಡಿದ ಆರೋಪವೇನು?

ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಮಂಜುನಾಥ್, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಭ್ರಷ್ಟಾಚಾರ ಇರೋದು ಸತ್ಯ. ನಮ್ಮ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು ತಿಪ್ಪಾರೆಡ್ಡಿ ಅವರು ಶುರುಮಾಡಿದ್ದಾರೆ. ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ಲೋಕಾಯುಕ್ತಕ್ಕೆ ಅಫಿಡೇವಿಟ್ ಮಾಡಿದ್ದೇವೆ. ಒಟ್ಟು 13 ಜನ ಶಾಸಕರು 4-5 ಜನ ಸಚಿವರ ದಾಖಲೆಗಳು ಇದೆ. ತಿಪ್ಪಾರೆಡ್ಡಿ ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ, ವಾಟ್ಸ್ ಆ್ಯಪ್ ರೆಕಾರ್ಡ್ ಕೂಡಾ ಇದೆ. ಶೇ. 25% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಚಿತ್ರದುರ್ಗ ಕ್ಷೇತ್ರದಲ್ಲಿ 700 ಕೋಟಿ ಕಾಮಗಾರಿ ಆಗಿದೆ. ಬಿಲ್ಡಿಂಗ್​ಗೆ ಶೇ15 ಪಡೆಯುತ್ತಾರೆ. ರಸ್ತೆಗೆ ಶೇ 10 ಕಮಿಷನ್ ಬಗ್ಗೆ ಕೈ ನಲ್ಲೇ ಸನ್ನೆ ಮಾಡ್ತಾರೆ. 2019 ರಿಂದ ಇತ್ತೀಚೆಗೆ ನಾನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ. ತಿಪ್ಪಾರೆಡ್ಡಿ ಅವರ ಆಡಿಯೋ ರಿಲೀಸ್ ಮಾಡಲಾಗ್ತಿದೆ. ಬಿಡಬ್ಲ್ಯೂಡಿ ಕೇಸ್ ನಲ್ಲಿ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಕೇಳಿರುವ ಆಡಿಯೋ ರಿಲೀಸ್ ಆಗಿದೆ ಎಂದಿದ್ದಾರೆ. ನಾವು ಕಮಿಷನ್ ಕೊಡಲಿಲ್ಲ ಅಂದ್ರೆ ಇಂಜಿನಿಯರ್ ಗಳಿಗೆ ಒತ್ತಡ ಹಾಕ್ತಾರೆ. ಪಿಡಬ್ಲ್ಯೂಡಿ ಬಿಲ್ಡಿಂಗ್ ಕಟ್ಟಿ ಮೂರು ವರ್ಷ ಆಯಿತು. ಬಿಲ್ ಕೊಡಿ ಅಂದ್ರೆ ಕಮಿಷನ್ ಕೇಳಿದ್ರು. 2.5 ಕೋಟಿ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Mon, 16 January 23

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ