Thippareddy Audio: ಕೆಲವು ಆಡಿಯೋ ಮಿಮಿಕ್ರಿ ಆಗಿರಲೂ ಬಹುದು ಎಂದ ಶಾಸಕ ಪ್ರೀತಮ್ ಗೌಡ
ಕಮಿಷನ್ ಪಡೆಯೋದು ಎಷ್ಟು ತಪ್ಪೋ ಅಷ್ಟೇ ತಪ್ಪು ಕೊಡುವುದು ಕೂಡ ಆಗಿರುತ್ತದೆ. ಕಮಿಷನ್ ಕೊಟ್ಟವರದ್ದು ಮೊದಲನೇ ತಪ್ಪಾದರೆ, ಕಮಿಷನ್ ನೀಡಿದವರದ್ದು ಮೊದಲನೇ ತಪ್ಪು ಎಂದು ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ.
ಹಾಸನ: ಕಮಿಷನ್ ಪಡೆಯೋದು ಎಷ್ಟು ತಪ್ಪೋ ಅಷ್ಟೇ ತಪ್ಪು ಕೊಡುವುದು ಕೂಡ ಆಗಿರುತ್ತದೆ. ಕಮಿಷನ್ ಕೊಟ್ಟವರದ್ದು ಮೊದಲನೇ ತಪ್ಪಾದರೆ, ಕಮಿಷನ್ ನೀಡಿದವರದ್ದು ಮೊದಲನೇ ತಪ್ಪು. ಹಾಗಂತಾ ಲಂಚ ಪಡೆದುಕೊಂಡವರು ಸಾಚಾ ಅಂತಲ್ಲ ಎಂದು ಶಾಸಕ ಪ್ರೀತಮ್ ಗೌಡ (MLA Preetham J Gowda) ಹೇಳಿದ್ದಾರೆ. ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಆಡಿಯೋ (MLA G.H.Thippareddy Audio) ಬಿಡುಗಡೆ ಪ್ರಕರಣ ಸಂಬಂಧ ಮಾತನಾಡಿದ ಅವರು, ನಾನು ತಿಪ್ಪಾರೆಡ್ಡಿಯವರ ವಕ್ತಾರ ಅಲ್ಲಾ. ಆಡಿಯೋಗಳ ಸತ್ಯಾಸತ್ಯತೆ ಬಗ್ಗೆ ಕೂಡ ಸಾಕಷ್ಟು ಪ್ರಶ್ನೆ ಇರುತ್ತವೆ. ಅವರು ಕಮಿಷನ್ ಕೊಡುವ ಮೊದಲೇ ಹೇಳಿದಿದ್ದರೆ ಒಪ್ಪಬಹುದಿತ್ತು ಎಂದರು.
ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೊಚನೆ ಮಾಡಿ ಮಾತಾಡಬೇಕು. ಯಾವುದೇ ಆಡಿಯೋ ಇದ್ದರೆ ಅದರ ನೈಜತೆ ನೋಡಬೇಕಾಗುತ್ತದೆ ಎಂದು ಗುತ್ತಿಗೆದಾರರ ಸಂಘದ ಪದಾದಿಕಾರಿಗಳು ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ತಿರುಗೇಟು ನೀಡಿದರು. ಮತ್ತೆ ಹಲವು ಶಾಸಕರ ಸಚಿವರ ಆಡಿಯೊ ಇದೆ ಎಂಬ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಅವರ ಮಾಹಿತಿ ಏನಾದರು ಇದ್ದಿದ್ದರೆ ಕಮಿಷನ್ ನೀಡುವ ಮೊದಲೇ ಮಾಡಬೇಕಿತ್ತು. ಈಗ ಚುನಾವಣೆ ವೇಳೆಯಲ್ಲಿ ಯಾವ ಉದ್ದೇಶದಿಂದಮಾಡುತ್ತಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಬೇರೆಯವರದ್ದು ಏನಿದೆ, ಐದು ವರ್ಷಗಳ ಹಿಂದಿನದ್ದು ಏನಾದರು ವಿಡಿಯೋ ಇದೆಯಾ ಎನ್ನುವುದನ್ನು ಜನರು ಕಾಯುತ್ತಿರುತ್ತಾರೆ.ಇಂತಹ ಆಡಿಯೋ ವೀಡಿಯೋಗಳಿಗೆ ಹೆಚ್ಚಿನ ಮಹತ್ವ ಕೊಡುವುದು ಬೇಡಾ. ಅದು ಯಾವ ಸಂದರ್ಭದಲ್ಲಿ ಏನಾಗಿರುತ್ತೊ ಗೊತ್ತಿರಲ್ಲ. ಯಾರಾರ ಹಣೆಬರಹ ಏನು ಎನ್ನೋದು ಜನರಿಗೆ ಮತ್ತು ಕ್ಷೇತ್ರದ ಜನರಿಗೆ ಗೊತ್ತಿರುತ್ತದೆ. ಅವರ ಬಳಿ ದಾಖಲೆ ಇದ್ದರೆ ಅದನ್ನು ಎಲ್ಲಿಗೆ ಕೊಡಬೇಕೋ ಅಲ್ಲಿಗೆ ಕೊಡಲಿ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆ ಸಂಪೂರ್ಣ ಜಾತಕ ಬಿಚ್ಚಿಟ್ಟ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್
ಕೆಲವು ಮಿಮಿಕ್ರಿ ಕಲಾವಿದರ ಆಡಿಯೋ ಕೂಡ ಇರುತ್ತದೆ, ಹೇಳಲು ಸಾಧ್ಯವಿಲ್ಲ. ಆಡಳಿತ ಇದ್ದಾಗ ವಿಪಕ್ಷಗಳು ಆರೋಪ ಮಾಡುವುದು ಸಮಾನ್ಯ. ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕೋ ಬೇಡವೋ ಎಂಬುದನ್ನು ತನಿಖಾ ಸಂಸ್ಥೆ ತೀರ್ಮಾನ ಮಾಡುತ್ತದೆ ಎಂದು ಪ್ರೀತಮ್ ಗೌಡ ಹೇಳಿದರು.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಮಂಜುನಾಥ್, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಭ್ರಷ್ಟಾಚಾರ ಇರೋದು ಸತ್ಯ. ನಮ್ಮ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು ತಿಪ್ಪಾರೆಡ್ಡಿ ಅವರು ಶುರುಮಾಡಿದ್ದಾರೆ. ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ಲೋಕಾಯುಕ್ತಕ್ಕೆ ಅಫಿಡೇವಿಟ್ ಮಾಡಿದ್ದೇವೆ. ಒಟ್ಟು 13 ಜನ ಶಾಸಕರು 4-5 ಜನ ಸಚಿವರ ದಾಖಲೆಗಳು ಇದೆ. ತಿಪ್ಪಾರೆಡ್ಡಿ ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ, ವಾಟ್ಸ್ ಆ್ಯಪ್ ರೆಕಾರ್ಡ್ ಕೂಡಾ ಇದೆ. ಶೇ. 25% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಚಿತ್ರದುರ್ಗ ಕ್ಷೇತ್ರದಲ್ಲಿ 700 ಕೋಟಿ ಕಾಮಗಾರಿ ಆಗಿದೆ. ಬಿಲ್ಡಿಂಗ್ಗೆ ಶೇ15 ಪಡೆಯುತ್ತಾರೆ. ರಸ್ತೆಗೆ ಶೇ 10 ಕಮಿಷನ್ ಬಗ್ಗೆ ಕೈ ನಲ್ಲೇ ಸನ್ನೆ ಮಾಡ್ತಾರೆ. 2019 ರಿಂದ ಇತ್ತೀಚೆಗೆ ನಾನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ. ತಿಪ್ಪಾರೆಡ್ಡಿ ಅವರ ಆಡಿಯೋ ರಿಲೀಸ್ ಮಾಡಲಾಗ್ತಿದೆ. ಬಿಡಬ್ಲ್ಯೂಡಿ ಕೇಸ್ ನಲ್ಲಿ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಕೇಳಿರುವ ಆಡಿಯೋ ರಿಲೀಸ್ ಆಗಿದೆ ಎಂದಿದ್ದಾರೆ. ನಾವು ಕಮಿಷನ್ ಕೊಡಲಿಲ್ಲ ಅಂದ್ರೆ ಇಂಜಿನಿಯರ್ ಗಳಿಗೆ ಒತ್ತಡ ಹಾಕ್ತಾರೆ. ಪಿಡಬ್ಲ್ಯೂಡಿ ಬಿಲ್ಡಿಂಗ್ ಕಟ್ಟಿ ಮೂರು ವರ್ಷ ಆಯಿತು. ಬಿಲ್ ಕೊಡಿ ಅಂದ್ರೆ ಕಮಿಷನ್ ಕೇಳಿದ್ರು. 2.5 ಕೋಟಿ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.
ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Mon, 16 January 23