ಪ್ರಿಯಾಂಕಾ ಗಾಂಧಿ ನಾ ನಾಯಕಿ ಸಮಾವೇಶ ಬೆನ್ನಲ್ಲೆ ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ

ಪ್ರಿಯಾಂಕಾ ಗಾಂಧಿ ನಾ ನಾಯಕಿ ಸಮಾವೇಶ ಬೆನ್ನಲ್ಲೆ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳೊಂದಿಗೆ, ‘ನವ ಭಾರತಕ್ಕಾಗಿ ನವ ಕರ್ನಾಟಕ’ ಶೀರ್ಷಿಕೆಯ ಜಾಹೀರಾತು ನೀಡಿದೆ.

ಪ್ರಿಯಾಂಕಾ ಗಾಂಧಿ ನಾ ನಾಯಕಿ ಸಮಾವೇಶ ಬೆನ್ನಲ್ಲೆ ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ
ಮಹಿಳಾ ಯೋಜನೆಗಳ ಬಗ್ಗೆ ಜಾಹಿರಾತು ಪ್ರಕಟಿಸಿದ ಬಿಜೆಪಿ ಸರ್ಕಾರ
Follow us
TV9 Web
| Updated By: ಆಯೇಷಾ ಬಾನು

Updated on:Jan 16, 2023 | 3:13 PM

ಬೆಂಗಳೂರು: ಎಲೆಕ್ಷನ್ ಸಮೀಪಿಸುತ್ತಿದ್ದಂತೆ ತಯಾರಿ ಜೋರು ಮಾಡಿರುವ ಕಾಂಗ್ರೆಸ್ ಮಹಿಳೆಯರ ಮತಕ್ಕೆ ಕೈ ಹಾಕಿದೆ. ಈ ಹಿನ್ನೆಲೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ. ಇದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು(Priyanka Gandhi) ನಾ ನಾಯಕಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಿಳಾ ಕಾಂಗ್ರೆಸ್ ಘಟಕ, ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ. ಕಾಂಗ್ರೆಸ್‌ನಲ್ಲಷ್ಟೇ ಮಹಿಳೆಯರಿಗೆ ಮಾನ್ಯತೆ ಇದೆ ಅನ್ನೋ ಸಂದೇಶ ಸಾರಿದ್ದಾರೆ. ಆದ್ರೆ ಇದರ ನಡುವೆ ಬಿಜೆಪಿ(BJP Government) ಕೂಡ ತನ್ನ ಗಾಳ ಬೀಸಿದೆ.

ಪ್ರಿಯಾಂಕಾ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಿರುವ ದಿನದಂದೇ ಆಡಳಿತಾರೂಢ ಬಿಜೆಪಿ ಸರ್ಕಾರವು ದಿನ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಮಾಡಿದ ತನ್ನ ಯೋಜನೆಗಳು ಮತ್ತು ಬಜೆಟ್ ಹಂಚಿಕೆಯ ಸಂಪೂರ್ಣ ಮಾಹಿತಿಯ ಜಾಹಿರಾತು ನೀಡುವ ಮೂಲಕ ಕಾಂಗ್ರೆಸ್​ಗೆ ಟಕ್ಕರ್ ಕೊಟ್ಟಿದೆ. ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿಯವರು ಮಹಿಳೆಯರಿಗಾಗಿ ವಿಶೇಷ ಘೋಷಣೆಗಳನ್ನು ಮಾಡಿದರೆ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸಬಹುದೆಂಬ ಉದ್ದೇಶಕ್ಕೆ ಬಿಜೆಪಿ ಸರ್ಕಾರ ಪ್ರಮುಖ ದಿನಪತ್ರಿಕೆಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ತೋರಿಸುವ ಪೂರ್ಣ ಪುಟದ ಜಾಹೀರಾತು ನೀಡಿದೆ.

ಇದನ್ನೂ ಓದಿ: Priyanka Gandhi Bengaluru: ಎಐಸಿಸಿ ನಾಯಕ ಎಡಬಲ ನಿಂತು ಕಾಂಗ್ರೆಸ್ ಜ್ಯೋತಿ ಬೆಳಗಿಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಗಳೊಂದಿಗೆ, ‘ನವ ಭಾರತಕ್ಕಾಗಿ ನವ ಕರ್ನಾಟಕ’ ಶೀರ್ಷಿಕೆಯ ಜಾಹೀರಾತು ನೀಡಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡಿದೆ. ‘ಗೃಹಿಣಿ ಶಕ್ತಿ’ ಮತ್ತು ಅಮೃತ್ ಸ್ವಯಂ-ಸಹಾಯ ಮೈಕ್ರೋ ಎಂಟರ್‌ಪ್ರೈಸ್. ಎಲ್ಲಾ ಯೋಜನೆಗಳಿಗೆ ಬಜೆಟ್ ಹಂಚಿಕೆಗಳು ಮತ್ತು ಯೋಜನೆಗಳ ಅನುಷ್ಠಾನದ ವಿವರಗಳನ್ನು ಎತ್ತಿ ತೋರಿಸುವಂತೆ ದಿನಪತ್ರಿಕೆಗಳ ಪೂರ್ಣ ಪುಟದ ಜಾಹೀರಾತು ನೀಡಿದೆ. ಈ ಮೂಲಕ ಬಿಜೆಪಿ ಕೂಡ ಮಹಿಳೆಯರಿಗೆ ಆಧ್ಯತೆ ನೀಡಿದೆ ಎಂಬ ಸಂದೇಶ ಸಾರಿದೆ.

ಜಾಹೀರಾತಿನಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಕೈಗೊಂಡ ಕ್ರಮಗಳನ್ನೂ ನೀಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 1,412 ಕೋಟಿ ವೆಚ್ಚದಲ್ಲಿ 8,101 ತರಗತಿ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. 15,000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಕಲ್ಯಾಣ ಕರ್ನಾಟಕದಲ್ಲಿ 5,000 ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯಕ್ಕಾಗಿ ಕೈಗೊಂಡ ಕ್ರಮಗಳನ್ನು ಎತ್ತಿ ತೋರಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಗಾಂಧಿ ಬೆಂಗಳೂರಿಗೆ ಆಗಮಿಸಿದ ದಿನವೇ ಈ ಜಾಹೀರಾತನ್ನು ಹಾಕಲಾಗಿದೆ.

ಅಕ್ಟೋಬರ್‌ನಲ್ಲಿ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ ಕರ್ನಾಟಕದಲ್ಲಿ ನಡೆದಾಗ ಜವಾಹರಲಾಲ್ ನೆಹರು ದೇಶವನ್ನು ವಿಭಜಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸರ್ಕಾರ ಕನ್ನಡ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿತ್ತು. ಆಗ ಬಿಜೆಪಿ ಇತಿಹಾಸವನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದರು.

ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Mon, 16 January 23