ಜಿ. ಪಂ, ತಾ. ಪಂ ಮರು ವಿಂಗಡಣಾ ವಿಧೇಯಕದಿಂದ ಚುನಾವಣೆ ವಿಳಂಬ ಆಗದು: ಸಿಎಂ ಭರವಸೆ
ಕಾಂಗ್ರೆಸ್ ವಿರೋಧದ ನಡುವೆಯೂ ಬಿಲ್ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಬೆಂಗಳೂರು: ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕೆಂಬ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಮರು ವಿಂಗಡಣಾ ವಿಧೇಯಕವನ್ನು ಮಂಡಿಸಲಾಗುತ್ತಿದೆ. ಈಕುರಿತು 2,000ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಹೈಕೋರ್ಟ್ಗೆ ಸಲ್ಲಿಕೆಯಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಮರು ವಿಂಗಡಣಾ ವಿಧೇಯಕವನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡಿಸಲಿದ್ದಾರೆ. ಇದರಿಂದ ಕೆಳಹಂತದ ಚುನಾವಣೆಯಲ್ಲಿ ಅನುಕೂಲವಾಗಲಿದೆ. ಜಿಲ್ಲಾ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳು ವಿಧೇಯಕದಿಂದ ವಿಳಂಬವಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಿಮ್ಮ ಕಾಲದಲ್ಲೂ ಎಲ್ಲವನ್ನೂ ಮಾಡಿದ್ದೀರಿ. ಚುನಾವಣಾ ಆಯೋಗ ಮಾಡಿ ಸೂಕ್ತ ನಿಯಮ ಮಾಡಿಲ್ಲ. ಈಗ ನಿಯಮದ ಮೂಲಕ ಆಯೋಗ ರಚಿಸುತ್ತೇವೆ ಎಂದು ಬಿಜೆಪಿ ಸದಸ್ಯರು ಸಭೆಯಲ್ಲಿ ನಿಲುವು ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ವಿರೋಧದ ನಡುವೆಯೂ ಬಿಲ್ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
11 ಮೀನುಗಾರರ ರಕ್ಷಣೆ ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಅರಬ್ಬೀ ಸಮುದ್ರದ 35 ನಾಟಿಕಲ್ ಮೈಲಿ ದೂರದಲ್ಲಿ IND-KA 02 MM 4294 ‘ಸಾಗರ್ ಸಾಮ್ರಾಟ್’ ಮೀನುಗಾರರ ದೋಣಿ ಕೆಟ್ಟು ನಿಂತಿತ್ತು. ಮೀನುಗಾರರನ್ನು ರಕ್ಷಿಸಿ ಉಡುಪಿ ಜಿಲ್ಲೆಯ ಮಲ್ಪೆಗೆ ಕರೆ ತರಲಾಗಿದೆ. ರೋಪ್ ಹಾಕಿ ಎಳೆದು ಮೀನುಗಾರರ ದೋಣಿಯನ್ನು ಸಹ ಎಳೆದುತರಲಾಗಿದೆ.
ಇದನ್ನೂ ಓದಿ:
Opinion: ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ಮೂಡಿಸಿದ ರಾಜ್ಯ ಸರ್ಕಾರ; ಏಕೆ? ಇಲ್ಲಿದೆ ಓದಿ
ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ, ಮಳೆನೀರು ಕೊಯ್ಲು ಕಡ್ಡಾಯ ಪ್ರಸ್ತಾಪವಿರುವ ವಿಧೇಯಕಗಳ ಮಂಡನೆ
(CM Basavaraj Bommai says Zilla Panchayat and Taluka Panchayat Election did not delay by delimitation commission)
Published On - 9:09 pm, Wed, 15 September 21