ನಟಿ ನುಸ್ರತ್ ಜಹಾನ್ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್ ನಿಜವಾಯ್ತು !
Nusrat Jahan: ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.
ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ, ನಟಿ ನುಸ್ರತ್ ಜಹಾನ್ (Nusrat Jahan) ವೈಯಕ್ತಿಕ ಜೀವನ ಸುದ್ದಿಯಾಗಿದ್ದು ಗೊತ್ತೇ ಇದೆ. ಆಗಸ್ಟ್ 26ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಹೇಳಿರಲಿಲ್ಲ. 2019ರಲ್ಲಿ ನಿಖಿಲ್ ಜೈನ್ ಎಂಬ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದರು. ಆದರೆ ಭಾರತೀಯ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ ಎಂದು ಹೇಳಿದ್ದ ನುಸ್ರತ್ ಜಹಾನ್, 2020ರ ನವೆಂಬರ್ ತಿಂಗಳಿಂದಲೂ ತಾವಿಬ್ಬರೂ ಪ್ರತ್ಯೇಕವಾಗಿದ್ದಾಗಿಯೇ ತಿಳಿಸಿದ್ದರು. ಆದರೆ ನಂತರ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಆಗಸ್ಟ್ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ನುಸ್ರತ್ಗೆ ಮಗು ಹುಟ್ಟುತ್ತಿದ್ದಂತೆ ಇಂಟರ್ನೆಟ್ನಲ್ಲಿ ಅನೇಕರು ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದರು. ಆದರೆ ಈ ಪ್ರಶ್ನೆಗೆ ಏನನ್ನೂ ಉತ್ತರಿಸಿದ ನುಸ್ರತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆಲ್ಲ ಪ್ರಶ್ನೆಗಳನ್ನು ಹಾಕಿ ಒಬ್ಬರ ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವುದು ತುಂಬ ಸುಲಭ ಎಂದು ಕಿಡಿಕಾರಿದ್ದರು. ಆದರೆ ಕೊನೆಗೂ ಮಗುವಿನ ತಂದೆ ಯಾರೆಂಬುದು ಗೊತ್ತಾಗಿದೆ. ಅದೂ ಕೂಡ ಮಗುವಿನ ಬರ್ತ್ ಸರ್ಟಿಫಿಕೇಟ್ನಿಂದ ಸ್ಪಷ್ಟವಾಗಿದೆ. ನುಸ್ರತ್ ತಮ್ಮ ಪುತ್ರನಿಗೆ ಯಿಶಾನ್ ಜೆ.ದಾಸ್ಗುಪ್ತ ಎಂದು ಹೆಸರಿಟ್ಟಿದ್ದಾರೆ. ತಂದೆಯ ಹೆಸರಿದ್ದಲ್ಲಿ ನಟ ದೇಬಾಶಿಶ್ ದಾಸ್ಗುಪ್ತ (ಯಶ್ ದಾಸ್ಗುಪ್ತ-Yash Dasgupta) ಎಂಬ ಹೆಸರು ಉಲ್ಲೇಖವಾಗಿದೆ.
ಪತಿ ನಿಖಿಲ್ರಿಂದ ದೂರವಾದ ನಂತರ ನುಸ್ರತ್ ಅವರು ಯಶ್ ಜತೆ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ರೂಮರ್ ಹಬ್ಬಿತ್ತು. ಆದರೆ ಅದಕ್ಕೆ ನುಸ್ರತ್ ಆಗಲೀ, ನಟ ಯಶ್ ದಾಸ್ಗುಪ್ತಾ ಆಗಲೀ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಇನ್ನು ನುಸ್ರತ್ ಗರ್ಭಿಣಿಯಾಗಿದ್ದಾಲೂ ಯಶ್ ದಾಸ್ಗುಪ್ತಾ ತುಂಬ ಕಾಳಜಿ ತೆಗೆದುಕೊಂಡಿದ್ದರು. ಹೆರಿಗೆ ಸಮಯದಲ್ಲೂ ಅವರೇ ನುಸ್ರತ್ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.
ಕಳೆದವಾರ ನುಸ್ರತ್ ಜಹಾನ್ ಮತ್ತು ಯಶ್ ಒಟ್ಟಿಗೇ ಕೋಲ್ಕತ್ತ ಮುನ್ಸಿಪಲ್ ಕಾರ್ಪೋರೇಶನ್ಗೆ ಬಂದಿದ್ದರು. ಅವರು ಕೊವಿಡ್ 19 ಲಸಿಕೆ ಎರಡನೇ ಡೋಸ್ ಪಡೆಯಲು ಬಂದಿದ್ದಾರೆಂದೇ ಹೇಳಲಾಗಿತ್ತು. ಆದರೆ ಅವರು ಮಗುವಿನ ಬರ್ತ್ ಸರ್ಟಿಫಿಕೇಟ್ ಸಂಬಂಧ ಕೆಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ.
ಇದನ್ನೂ ಓದಿ: ಕೆರಿಬಿಯನ್ ದೈತ್ಯರ ಹೆಸರಲ್ಲಿ ಕೆಟ್ಟ ದಾಖಲೆ! ಟಿ20 ಕ್ರಿಕೆಟ್ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು ಇವರೇ
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್
Published On - 3:02 pm, Thu, 16 September 21