Opinion: ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ಮೂಡಿಸಿದ ರಾಜ್ಯ ಸರ್ಕಾರ; ಏಕೆ? ಇಲ್ಲಿದೆ ಓದಿ
ಪ್ರಸ್ತುತ ರಾಜ್ಯ ಸರ್ಕಾರದ ನಿಲುವಿನಂತೆ ಕ್ಷೇತ್ರ ಮರು ವಿಂಗಡಣೆ ಆಯೋಗ ರಚಿಸುವ ಪ್ರಕ್ರಿಯೆಗಳು ಆರಂಭಗೊಂಡಲ್ಲಿ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮುಂದೂಡಲ್ಪಡುವ ಸಾಧ್ಯತೆ ಹೆಚ್ಚುತ್ತದೆ.
ರಾಜಕಾರಣದಲ್ಲಿ ಅಧಿಕಾರ ಗೃಹಣ ಮಾಡಲಿಚ್ಛಿಸುವ ಮಹತ್ವಾಕಾಂಕ್ಷಿ ಯುವ ಮುಖಂಡರಿಗೆ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಹೆಬ್ಬಾಗಿಲು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ತೀರ್ಮಾನವೊಂದು ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ. ಪಂಚಾಯತ್ ರಾಜ್ ಡಿಲಿಮಿಟೇಷನ್ ಆ್ಯಕ್ಟ್‌ಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಕುರಿತು ಮಾತನಾಡಿದ ಸಚಿವ ಮಾಧುಸ್ವಾಮಿ, ಅಗತ್ಯಬಿದ್ದರೆ ಮಾತ್ರ ಡಿಲಿಮಿಟೇಷನ್ ಕಮಿಷನ್ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈವರ್ಷದ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳು ನಡೆಯಲಿವೆ ಎಂಬ ನಿರೀಕ್ಷೆಯಿತ್ತು. ಪಂಚಾಯತ್ ರಾಜ್ ಕ್ಷೇತ್ರಗಳ ಮರು ವಿಂಗಡಣೆಗೆ ಆಯೋಗ ರಚನೆಗೆ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. ಈಮೂಲಕ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಸರ್ಕಾರ ಚಿಂತನೆ ರೂಪಿಸಿದೆ. ಪ್ರತ್ಯೇಕ ಡಿಲಿಮಿಟೇಷನ್ ಕಮಿಷನ್ ರಚನೆ ಮಾಡಿ, ನಿವೃತ್ತ ಎಸಿಎಸ್ ಆಯೋಗದ ಅಧ್ಯಕ್ಷರನ್ನಾಗಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಹಿಂದೆ ಚುನಾವಣಾ ಆಯೋಗ ಮಾಡಿದ ಪುನರ್ ವಿಂಗಡಣೆ ಬಗ್ಗೆ ಆಕ್ಷೇಪಣೆಯನ್ನೇ ಆಲಿಸುವ ಅವಕಾಶವಿರಲಿಲ್ಲ. ಆದರೆ ಚುನಾವಣಾ ಆಯೋಗಕ್ಕೂ ಮತ್ತು ಪುನರ್ ವಿಂಗಡಣೆಗೂ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಮುನ್ನ ಜನಸಂಖ್ಯೆಯನ್ನು ಆಧರಿಸದೇ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿಲಾಗಿತ್ತು. ಈಬಗ್ಗೆ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಈಗ ಕ್ಷೇತ್ರ ಮರು ವಿಂಗಡನಾ ಆಯೋಗದ ಮೂಲಕ ಹೊಸದಾಗಿ ಮರು ವಿಂಗಡನೆ ಆಗಬೇಕಿರುವ ಸಂಬಂಧ ನ್ಯಾಯಾಲಯಕ್ಕೆ ವಿವರಣೆ ಕೊಡುತ್ತೇವೆ. ನ್ಯಾಯಾಲಯ ಅನುಮತಿ ಕೊಟ್ಟರೆ ಈಗ ಆಗಿರುವ ಕ್ಷೇತ್ರ ಮರುವಿಂಗಡನೆಯನ್ನು ಮತ್ತೆ ಪರಿಷ್ಕರಿಸಲಾಗುತ್ತದೆ. ಡಿಲಿಮಿಟೇಷನ್ ಆಯೋಗದ ಮೂಲಕ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಕರಾರು ಆಲಿಸಿ, ಆಯೋಗದ ಮಟ್ಟದಲ್ಲಿ ತಕರಾರು ಪರಿಹಾರಕ್ಕಾಗಿ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಕೋರ್ಟ್ ಅನುಮತಿ ನೀಡದಿದ್ದರೆ, ಮತ್ತೆ ಡಿಮಿಲಿಟೇಷನ್ ಮಾಡುವುದಾಗಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸುತ್ತೇವೆ ಎಂದು ಸ್ವತಃ ಕಾನೂನು ಸಚಿವ ಮಾಧುಸ್ವಾಮಿ ಅವರೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರದ ನಿಲುವಿನಂತೆ ಕ್ಷೇತ್ರ ಮರು ವಿಂಗಡಣೆ ಆಯೋಗ ರಚಿಸುವ ಪ್ರಕ್ರಿಯೆಗಳು ಆರಂಭಗೊಂಡಲ್ಲಿ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮುಂದೂಡಲ್ಪಡುವ ಸಾಧ್ಯತೆ ಹೆಚ್ಚುತ್ತದೆ. ಇದು ರಾಜಕೀಯವಾಗಿ ಮುನ್ನೆಲೆಗೆ ಬರಲು ಮತ್ತು ಅಧಿಕಾರ ಹಿಡಿಯುವ ಇಚ್ಛೆಯುಳ್ಳ ರಾಜಕಾರಣಿಗಳನ್ನು ಇನ್ನಷ್ಟು ಕಾಯಿಸುವಂತೆ ಮಾಡಲಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಜತೆಗೆ ಕ್ಷೇತ್ರ ಮರು ವಿಂಗಡಣೆಯೂ ಸಹ ಈವರೆಗಿನ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಲಿದೆ ಎಂದೇ ಹೇಳಲಾಗಿದೆ. ಈ ಎಲ್ಲ ದೃಷ್ಟಿಕೋನಗಳಲ್ಲಿ ಅವಲೋಕಿಸುವುದಾದರೆ ರಾಜ್ಯ ಸಚಿವ ಸಂಪುಟದ ಇಂದಿನ ನಿರ್ಧಾರ ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ತಂದಿದೆ.
ಇದನ್ನೂ ಓದಿ:
ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ
Opinion: ಪ್ರಾಮಾಣಿಕ ಪತ್ರಕರ್ತರನ್ನು ನೀವು ಕೊಲ್ಲಬೇಡಿ!
(Karnataka Politics Opinion state government decided for delimitation commission to forward ZP and Tp Election)
Published On - 3:58 pm, Sat, 4 September 21