ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿ

|

Updated on: Mar 13, 2023 | 3:56 PM

ನಮ್ಮ ಯಾವ ಮಂತ್ರಿಗಳೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ. ಇದು ಡಿಜಿಟಲ್​ ಯುಗವಾದ್ದರಿಂದ ಹೊರ ಬರುತ್ತಿರಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ‌
Image Credit source: thehansindia.com
Follow us on

ಗದಗ: ನಮ್ಮ ಯಾವ ಮಂತ್ರಿಗಳೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ. ಇದು ಡಿಜಿಟಲ್​ ಯುಗವಾದ್ದರಿಂದ ಹೊರ ಬರುತ್ತಿರಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ (basavaraj bommai) ಹೇಳಿದರು. ಜಿಲ್ಲೆಯ ರೋಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಹೆಸರಲ್ಲಿ ಓರ್ವ ಮಂತ್ರಿಗೆ ಡಿ.ಕೆ. ಶಿವಕುಮಾರ ಬೆದರಿಸುತ್ತಿದ್ದಾರೆಂಬ ಆರೋಪಿಸಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ (Ramesh Jarkiholi)  ಮಾಹಿತಿ ಇರಬಹುದು ಎಂದಿದ್ದಾರೆ. ಸಿಎಂ ತಾರತಮ್ಯದಿಂದ ನಾರಾಯಣಗೌಡ ಪಕ್ಷ ಬಿಡುತ್ತಾರೆಂಬ ಆರೋಪವಿದ್ದು, ಊಹಾಪೋಹ ಬಗ್ಗೆ ಉತ್ತರಿಸುವುದಿಲ್ಲ ಎಂದರು. ಅರ್ಕಾವತಿ ಪ್ರಕರಣದ ಮಾಧ್ಯಮದವರು ಪ್ರಶ್ನೆ ಮಾಡಿದ್ದು, ಬಗ್ಗೆ ಈಗ ಮಾತನಾಡಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರೈತರ ಕುಟುಂಬಗಳಿಗೆ ಕೃಷಿ ಆದಾಯ ಸಾಕಾಗೋದಿಲ್ಲ

ರೈತರ ಕುಟುಂಬಗಳಿಗೆ ಕೃಷಿ ಆದಾಯ ಸಾಕಾಗೋದಿಲ್ಲ. ಹಾಗಾಗಿ ರೈತರ ಕುಟುಂಬಗಳಿಗೆ ವಿದ್ಯಾ ನಿಧಿ ಯೋಜನೆ ಮಾಡಲಾಗಿದೆ. ಸಂವಿಧಾನದ ಬದ್ದವಾಗಿ ಜನರನ್ನು ಪುಸಲಾಯಿಸಲಾಗಿದೆ. ಮಹಿಳೆಯರು ಹಾಗೂ ಯುವಕರಿಗೆ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಈ ನಾಡನ್ನು ಕಟ್ಟಲು ಸಾಧ್ಯ. ಕೃಷಿ ಕಾರ್ಮಿಕ ಮಹಿಳೆಯರಿಗೆ ಪ್ರತಿಯೊಂದು ಕುಟುಂಬಕ್ಕೆ 1 ಸಾವಿರ ರೂಪಾಯಿ ನೀಡಲಾಗುವುದು. ನಾವು ಬಡತನವನ್ನು ನೋಡಿದ್ದೇವೆ, ಜನರನ್ನು ಹತ್ತಿರದಿಂದ ಹೋಗಿ ಬಂದವರು. ಬಡವರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: CD Case: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ; ಸಿಡಿ ಪ್ರಕರಣ ಸಂಬಂಧ ಚರ್ಚೆ?

ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮನವಿ

ದುಡಿಯುವ ವರ್ಗಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದೇವೆ. ಈ ದೇಶವನ್ನು ಕಟ್ಟುವ ಕೆಲಸವನ್ನು ದುಡಿಯುವ ವರ್ಗ, ಶ್ರೀಮಂತರಿಂದ ಅಲ್ಲಾ. ಎಸ್​ಸಿಎಸ್​ಟಿ ಜನರನ್ನು ಬಾವಿಯಲ್ಲಿ ಇಟ್ಟಿದ್ದರು. ಈವಾಗ ಅವರಿಗೆ ಹಗ್ಗ ಸಿಕ್ಕದೆ ಮೇಲೆ ಬರುತ್ತಾರೆ. ಅಸಾಧ್ಯವಾದದನ್ನು ಈ ಸಿಎಂ ಬಸವರಾಜ ಬೊಮ್ಮಾಯಿ‌ ಹೇಗೆ ಮಾಡುತ್ತಾನೆ ಅಂತಾರೆ. ಯಾರು ಟೀಕೆ ಮಾಡುತ್ತಾರೆ ಅವುಗಳನ್ನು ಮೆಟ್ಟಿಲಾಗಿ ಬಳಸಿಕೊಂಡು ಮೇಲೆ ಬರುತ್ತೇವೆ. ಬಹಳ ದೊಡ್ಡ ದೊಡ್ಡವರು ನಾವು ದಿನ ದಲಿತರ ಉದ್ಧಾರಕ್ಕಾಗಿ ಎಂದು ಹೇಳಿದ್ದರು. ನೀವು ಆಶೀರ್ವಾದ ಮಾಡಬೇಕು ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಿದರು.

ಏನಿದು ಸಿಡಿ ಪ್ರಕರಣ?

ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬಳೊಂದಿಗಿನ ವಿಡಿಯೋ ಬಿಡುಗಡೆಯಾಗಿ ಜೋರು ಸದ್ದು ಮಾಡಿಕೊನೆಗೆ ಗೋಕಾಕ್ ಸಾಹುಕಾರ್ ಮಂತ್ರಿಸ್ಥಾನ ಕಳೆದುಕೊಳ್ಳಬೇಕಾಯಿತು. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಡಿಕೆ ಶಿವಕುಮಾರ್ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರ ಕೆಲವರು ಷಡ್ಯಂತ್ರ ರೂಪಿಸಿದ್ದರುಅದಕ್ಕೆ ಸಂಬಂಧಿಸಿ ತನ್ನ ಬಳಿಕ ಆಡಿಯೋ ಮತ್ತಿತರ ಹಲವಾರು ದಾಖಲೆಗಳಿವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಶಾಕ್: ಹಾಸನ ಟಿಕೆಟ್​ ಸಾಮಾನ್ಯ ಕಾರ್ಯಕರ್ತನಿಗೆ, ಇದಕ್ಕೆ ಬದ್ಧ ಎಂದ ಕುಮಾರಸ್ವಾಮಿ

ಡಿ.ಕೆ.ಶಿವಕುಮಾರ ವಿರುದ್ಧ ಗುಡುಗು

ಸಿಡಿ ಪ್ರಕರಣ ಮಾಧ್ಯಮಗಳಲ್ಲಿ ಸದ್ದು ಮಾಡುವಾಗಲೇ ರಮೇಶ್ ಜಾರಕಿಹೊಳಿ ಅವರು ರಾಜ್ಯದ ಮಹಾನ್ ನಾಯಕರೊಬ್ಬರು ಈ ಷಡ್ಯಂತ್ರದಲ್ಲಿ ಇದ್ದಾರೆ ಎಂದು ಡಿಕೆಶಿ ಹೆಸರೆತ್ತದೆಯೇ ಹೇಳಿದ್ದರುಸಿಡಿ ಪ್ರಕರಣದಲ್ಲಿರುವ ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸಿದರೆ ಎಲ್ಲಾ ಸಂಗತಿ ಬಯಲಿಗೆ ಬರುತ್ತದೆ ಎಂದೂ ಅವರು ಈಗ ಒತ್ತಾಯಿಸುತ್ತಿದ್ದಾರೆ.

ಡಿಕೆ ಶಿವಕುಮಾರ್ ಮತ್ತು ತಾನು ಹಿಂದೆ ಒಳ್ಳೆಯ ಸ್ನೇಹಿತರಾಗಿದ್ದೆವುಆದರೆಗ್ರಾಮೀಣ ಶಾಸಕಿಯಂದ ತಮ್ಮಿಬ್ಬರ ಆತ್ಮೀಯ ಸಂಬಂಧ ಹಾಳಾಯಿತುಈ ವಿಷಕನ್ಯೆಯಿಂದಲೇ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದಿದ್ದಾರೆಇಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಾರಕಿಹೊಳಿ ವಿಷಕನ್ಯೆ ಎಂದು ಸಂಬೋಧಿಸಿದ್ದಾರೆ.

ಒಬ್ಬ ವ್ಯಕ್ತಿಯ ರಾಜಕೀಯ ಜೀವನ ಹಾಳು ಆಡಲು ಸಿಡಿ ಬಳಕೆ ಮಾಡಿದ ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಇರಲು ಲಾಯಕ್ ಅಲ್ಲಈಗ ನಡೆಯುತ್ತಿರುವುದು ನನ್ನ ಮತ್ತು ಡಿಕೆ ಶಿವಕುಮಾರ್ ನಡುವಿನ ಯುದ್ಧ ಎಂದು ಗೋಕಾಕ್ ಸಾಹುಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:42 pm, Mon, 13 March 23