AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಸಮೀಪಿಸುತ್ತಿರುವಾಗಲೇ ತ್ಯಾಗದ ಬಗ್ಗೆ ಮಾತನಾಡಿದ ಸಿಎಂ, ಮಧ್ಯಂತರ ಬಜೆಟ್​ನಲ್ಲಿ ಮಕ್ಕಳಿಗೆ ಸೈಕಲ್: ಬೊಮ್ಮಾಯಿ

ಎಲೆಕ್ಷನ್ ಸಮೀಪ ಬರುತ್ತಿರುವ ಬೆನ್ನಲ್ಲೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಹತ್ತಿರ ಏನಿದೆಯೋ ಅದನ್ನೆಲ್ಲಾ ತ್ಯಾಗ ಮಾಡಬೇಕು ಎಂದು ಹೇಳಿದ ಸಿಎಂ ಬೊಮ್ಮಾಯಿ.

ಚುನಾವಣೆ ಸಮೀಪಿಸುತ್ತಿರುವಾಗಲೇ ತ್ಯಾಗದ ಬಗ್ಗೆ ಮಾತನಾಡಿದ ಸಿಎಂ, ಮಧ್ಯಂತರ ಬಜೆಟ್​ನಲ್ಲಿ ಮಕ್ಕಳಿಗೆ ಸೈಕಲ್: ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
TV9 Web
| Updated By: Rakesh Nayak Manchi|

Updated on: May 16, 2022 | 5:55 PM

Share

ಮಂಡ್ಯ: ಮುಂದಿನ ವರ್ಷದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ(Election) ನಡೆಯಲಿದ್ದು, ಪಕ್ಷಾಂತರದ ಬಗ್ಗೆ, ಚುನಾಚಣಾ ಫಲಿತಾಂಶಗಳ ಬಗ್ಗೆ ಪಕ್ಷಗಳ ನಡುವೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಲು ಆರಂಭಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಾರ್ಯಕ್ರಮವೊಂದರಲ್ಲಿ ತ್ಯಾಗ(Sacrifice)ದ ಬಗ್ಗೆ ಮಾತನಾಡಿ ಕುತೂಹಲ ಕೆರಳಿಸಿದ್ದಾರೆ. ನಮ್ಮಲ್ಲಿ ಏನಿದೆಯೋ ಅದನ್ನು ತ್ಯಾಗ ಮಾಡಬೇಕು ಎಂದು ಹೇಳುವ ಮೂಲಕ ಚುನಾವಣೆಯ ನಾಯಕತ್ವ(Leadership) ಬದಲಾವಣೆ ಆಗಲಿದೆಯಾ ಎಂಬ ಕುತೂಹಲ ಮೂಡಿಸಿದೆ.

ಬೆಳ್ಳೂರು ಕ್ರಾಸ್​ನ ಆದಿಚುಂಚನಗಿರಿ ಕಾರ್ಯಕ್ರಮದಲ್ಲಿ ತ್ಯಾಗದ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಹತ್ತಿರ ಏನಿದೆಯೊ ಅದನ್ನೆಲ್ಲಾ ತ್ಯಾಗ ಮಾಡಬೇಕು. ಬುದ್ದ ರಾತ್ರೊ ರಾತ್ರಿ ಮನೆಯನ್ನು ತೊರೆದ. ಎಲ್ಲವನ್ನ ಬಿಟ್ಟ. ಇಂದು ಬುದ್ದ ಜಯಂತಿಯನ್ನು ಆಚರಿಸಲಾಗುತ್ತಿದೆ. ಬುದ್ದ ನಮಗೆಲ್ಲಾ ಮಾದರಿಯಾಗಿದ್ದಾನೆ ಎಂದರು.

ಮುಂದುವರೆದು ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ರಾಷ್ಟ್ರಪತಿ ಭವನದಲ್ಲಿ ಬುದ್ದನ ಫೋಟೋ ಇದೆ. ಯುಕೆ ಪ್ರದಾನಿಯವರ ಕಚೇರಿಯಲ್ಲೂ ಬುದ್ದನ ಫೋಟೋ ಇದೆ. ಬದುಕಿನಲ್ಲಿ ನೋವು ಕಷ್ಟ ದುಖಃವಿದೆ. ಇದಕ್ಕೆ ಮೂರು ಕಾರಣವೂ ಇದೆ. ಮೊದಲು ಆಸೆಯನ್ನ ಬಿಡಬೇಕು. ಆಸೆಯನ್ನ ಮೆಟ್ಟಿ ನಿಲ್ಲಬೇಕಾದರೆ ನಮ್ಮಲ್ಲಿರುವ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ಹೇಳಿದ್ದಾರೆ.

ಮಧ್ಯಂತರ ಬಜೆಟ್​ನಲ್ಲಿ ಮಕ್ಕಳಿಗೆ ಸೈಕಲ್

ತುಮಕೂರು: ಮಧ್ಯಂತರ ಬಜೆಟ್​ನಲ್ಲಿ ಮಕ್ಕಳಿಗೆ ಸೈಕಲ್ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ತುಮಕೂರಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಅವರು, ಶಾಲೆಗಳು ಆರಂಭವಾಗಲಿ ಎಂದು ಕಾಯುತ್ತಿದ್ದೆವು. ಇಂದಿನಿಂದ ಆರಂಭವಾಗಿದೆ. ಶಾಲೆಗೆ ಎಷ್ಟು ಮಕ್ಕಳು ಬರ್ತಾರೆ ಎಂದು ತಿಳಿದು ಸೈಕಲ್ ವಿತರಣೆ ಮಾಡಲಾಗುವುದು. ಮಧ್ಯಂತರ ಬಜೆಟ್​ನಲ್ಲಿ ಮಕ್ಕಳಿಗೆ ಸೈಕಲ್ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಗುಡ್ಡಗಾಡು ಹಾಗೂ ಗ್ರಾಮೀಣ ಭಾಗದ ಮಕ್ಕಳ ಹಾಜರಾತಿ ಹೆಚ್ಚಳ ಮಾಡುವ, ಎಲ್ಲರೂ ಶಿಕ್ಷಣ ಪಡೆಯುವಂತಾಗಲು ಮತ್ತು ಶಿಕ್ಷಣದ ಹಕ್ಕು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 2006-07ರಲ್ಲಿ ಸೈಕಲ್ ವಿತರಣೆ ಯೋಜನೆ ಜಾರಿಗೆ ತಂದಿತ್ತು. ಆದರೆ, ಕೋವಿಡ್ ಮಹಾಮಾರಿ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ (2020-21 ಹಾಗೂ 2021-22ನೇ ಶೈಕ್ಷಣಿಕ ವರ್ಷ) ಮಕ್ಕಳಿಗೆ ಸೈಕಲ್ ವಿತರಿಸಲು ಸಾಧ್ಯವಾಗಿಲ್ಲ. ಇದೀಗ ಸಿಎಂ ಬೊಮ್ಮಾಯಿ ಅವರು ಮಕ್ಕಳಿಗೆ ಸೈಕಲ್ ವಿತರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.