AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮುಕ್ತ ಭಾರತವಾಗಲಿ ಅಂತಾ ಹೇಳುವುದಿಲ್ಲ, ಆದರೆ ಅವನತಿ ಶುರುವಾಗಿದೆ ಎಂದ ಸಿಎಂ ಸಿದ್ಧರಾಮಯ್ಯ

ಬಿಜೆಪಿ ಯಾವಾಗಲೂ ವಿಪಕ್ಷವಾಗಿಯೇ ಇರಬೇಕು. ಬಿಜೆಪಿ‌ಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಬಿಜೆಪಿಗರು ಅವಲಂಬಿತರಾಗಿದ್ದಾರೆ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಕಿರಣ್​ ಹನಿಯಡ್ಕ
| Edited By: |

Updated on:Jul 20, 2023 | 6:07 PM

Share

ಬೆಂಗಳೂರು, ಜುಲೈ 20: ನಾನು ಬಿಜೆಪಿ ಮುಕ್ತ ಭಾರತ ಆಗಲಿ ಅಂತಾ ಹೇಳುವುದಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ವಿಪಕ್ಷವಾಗಿಯೇ ಇರಬೇಕು. ಬಿಜೆಪಿ‌ಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಜನಪ್ರಿಯತೆ ದಿನೇ ದಿನೇ ಮಸುಕಾಗುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಮೋದಿ 28 ಬಾರಿ ಬಂದಿದ್ದಾರೆ. ಒಂದು ಅಸೆಂಬ್ಲಿ ಚುನಾವಣೆಗೆ ಯಾವ ಪ್ರಧಾನಿ ಕೂಡ ಇಷ್ಟು ಬಾರಿ ಚುನಾವಣೆ ಪ್ರಚಾರ ಮಾಡಿಲ್ಲ. ಮೈಸೂರು, ಬಾದಾಮಿ, ಬೆಂಗಳೂರು ಸೇರಿ ಹಲವೆಡೆ ಪ್ರಚಾರ ಮಾಡಿದ್ದು, ಮೋದಿ ಪ್ರಚಾರ ಮಾಡಿದ ಎಲ್ಲಾ ಕಡೆಯೂ ನಾವು ಗೆದ್ದಿದ್ದೇವೆ. ಇವರು ಯಾವುದೇ ಚುನಾವಣೆಗಳಲ್ಲೂ ಹೆಚ್ಚು ಮತ ಪಡೆದಿಲ್ಲ. ನಮ್ಮ ಮತಗಳ ಶೇಕಡಾವಾರು ಜಾಸ್ತಿಯಾಗುತ್ತಲೇ ಹೋಗುತ್ತಿದೆ ಎಂದು ಹೇಳಿದರು.

ಡೆಪ್ಯುಟಿ ಸ್ಪೀಕರ್​ ಮೇಲೆ ಬಿಜೆಪಿ ಶಾಸಕರು ಕಾಗದ ಹರಿದು ಎಸೆದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು. ಸದನದಲ್ಲಿ ನಿನ್ನೆ ಬಿಜೆಪಿಯವರ ನಡವಳಿಕೆ ಬಗ್ಗೆ ಏನಂತ ಕರೆಯಬೇಕು? ಬಿಜೆಪಿಯವರನ್ನು ಅನಾಗರಿಕರು ಅಂತಾ ಕರೆಯಬೇಕು ಎಂದರು.

ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು

ನಾನು ಯಾವತ್ತಿಗೂ ಇಂತಹ ಅನಾಗರಿಕ ವರ್ತನೆಯನ್ನು ನೋಡಿಲ್ಲ. ಪಾಪ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಮುಖವೇ ಸಪ್ಪೆ ಆಗಿ ಹೋಗಿದೆ. ಯೋಚನೆ ಮಾಡಬೇಡಿ ನಾವು ನಿಮ್ಮ ಜೊತೆ ಇದ್ದೇವೆ. ಮಾರ್ಷಲ್​ ಇಲ್ಲದಿದ್ರೆ ಡೆಪ್ಯುಟಿ ಸ್ಪೀಕರ್​ ಮೇಲೆ ಹಲ್ಲೆ ಮಾಡುತ್ತಿದ್ದರೂ ಏನೋ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ನಾವು ಕೊಟ್ಟ ಗ್ಯಾರಂಟಿಗಳಿಂದ ಜನರು ತುಂಬಾ ಸಂತಸವಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಡಿಯಾ ಹೆಸರಿನಲ್ಲಿ ಒಂದಾಗಿದ್ದನ್ನು ಕಂಡು ಸಹಿಸದೆ ಕ್ಯಾತೆ ತೆಗೆದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿಗೆ ಆಹ್ವಾನ ನೀಡಿದ್ದರು

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ವೇಳೆ ವಿಪಕ್ಷ ನಾಯಕರಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅವತ್ತು ಹೆಚ್​ಡಿ ಕುಮಾರಸ್ವಾಮಿ ವಿರೋಧ ಪಕ್ಷದ ‌ನಾಯಕರಿಗೆ ಆಹ್ವಾನ ನೀಡಿದ್ದರು. ಬಹಳ ಜನ ವಿರೋಧ ಪಕ್ಷದ ನಾಯಕರು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಈಗ H.D.ಕುಮಾರಸ್ವಾಮಿ ಧರಣಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:05 pm, Thu, 20 July 23

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ