ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಕಾಂಗ್ರೆಸ್​ನ 45 ಶಾಸಕರು: ಹೆಚ್​ಡಿ ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Nov 08, 2023 | 1:28 PM

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ, ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ. 136 ಜನ ಶಾಸಕರನ್ನು ಇಟ್ಟುಕೊಂಡು ಯಾಕೆ ಹೀಗೆ ಪರದಾಡುತ್ತಿದ್ದೀರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಿ. ಅದು ಬಿಟ್ಟು ಅವರು ಬರುತ್ತಾರೆ, ಇವರು ಬರುತ್ತಾರೆ ಅಂತ ಏಕೆ ಹೇಳುತ್ತೀರಾ? ಎಂದು ಕಾಂಗ್ರೆಸ್​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಕಾಂಗ್ರೆಸ್​ನ 45 ಶಾಸಕರು: ಹೆಚ್​ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Follow us on

ಹಾಸನ ನ.08: ಗುಪ್ತಚರ ಮಾಹಿತಿ ಪ್ರಕಾರ ಬಿಜೆಪಿ (BJP) ಜೊತೆ ಕಾಂಗ್ರೆಸ್​ನ 45 ಶಾಸಕರು ಸಂಪರ್ಕದಲ್ಲಿದ್ದಾರೆ. ಅದನ್ನು ತಡೆಯಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಹೆಚ್​. ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಹಾಸನದಲ್ಲಿ (Hassan) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಪಕ್ಷದ 40 ರಿಂದ 50 ಶಾಸಕರು ಮತ್ತು ಮುಖಂಡರನ್ನು ಪಕ್ಷಕ್ಕೆ ಕರೆತನ್ನಿ ಅಂತ ಬ್ರೇಕ್​ಫಾಸ್ಟ್ ಸಭೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್​ ಸೂಚನೆ ನೀಡಿದೆ ಎಂಬ ಮಾಹಿತಿ ದೊರೆತಿದೆ. 136 ಸ್ಥಾನ ಇದ್ದರೂ ಆಪರೇಷನ್ ಮಾಡಲು ಹೊರಟಿದ್ದೀರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಿ. ಅದು ಬಿಟ್ಟು ಅವರು ಬರುತ್ತಾರೆ, ಇವರು ಬರುತ್ತಾರೆ ಅಂತ ಏಕೆ ಹೇಳುತ್ತೀರಾ? ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದರು.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ದುಬೈನಲ್ಲಿದ್ದಾಗ 5 ರಿಂದ 8 ಜನ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಗೊಂದಲ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ (ನ.08) ಸಭೆ ಕರೆದಿದ್ದೆ.​ ಸಭೆಯಲ್ಲಿ 19 ಶಾಸಕರ ಪೈಕಿ 18 ಶಾಸಕರು ಭಾಗಿಯಾಗಿದ್ದರು. ಶಾಸಕ ಶರಣಗೌಡ ಕಂದಕೂರ್​ ಭಾಗಿಯಾಗಿರಲಿಲ್ಲ. ಕಂದಕೂರ್​ ನಮ್ಮ ಮನೆಯ ಮಗ, ಅವರಲ್ಲಿ ಸ್ವಲ್ಪ ಗೊಂದಲ ಇದೆ. ಶರಣಗೌಡ ಕಂದಕೂರ್ ಅವರನ್ನು ಕರೆದು ಮಾತನಾಡುತ್ತೇನೆ. ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಶಾಸಕರ ಮೇಲೆ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್​ ಆಮಿಷಕ್ಕೆ ಒಳಗಾಗಿ ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಎಂದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ, ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ. 136 ಜನ ಶಾಸಕರನ್ನು ಇಟ್ಟುಕೊಂಡು ಯಾಕೆ ಹೀಗೆ ಪರದಾಡುತ್ತಿದ್ದೀರಿ. ನೀವು ಮತ್ತು ನಿಮ್ಮ ಅಧಿಕಾರಿಗಳು ಬಡ ಹೆಣ್ಣುಮಕ್ಕಳ ಹೆಸರಿನಲ್ಲಿ ಟಿಕೆಟ್ ಹರಿದು, ಹಣವನ್ನು ಯಾವ ರಾಜ್ಯಕ್ಕೆ ಹಣ ಸಾಗಿಸುತ್ತಿದ್ದೀರಿ? ಇಂದಿರಾ ಕ್ಯಾಂಟಿನಲ್ಲೂ ಅದೇ ಕತೆ. ಅಲ್ಲೂ ಹಣ ಲೂಟಿ ಹೋಡೆಯುತ್ತಿದ್ದೀರಾ? ನಿಮ್ಮ ಸರ್ಕಾರ ಐದು ವರ್ಷ ಇದ್ದರೇ 10 ಲಕ್ಷ ಕೋಟಿ ರೂ. ಸಾಲ ಆಗುತ್ತದೆ. ಮೊದಲು ರೈತರನ್ನು ಉಳಿಸಿ. ಹಲವಾರು ಕಡೆ ಎರಡು ಗಂಟೆ ಕರೆಂಟ್ ಇಲ್ಲ. ಏಳು ಗಂಟೆ ಕರೆಂಟ್ ಕೋಡುತ್ತೇವೆ ಎಂಬ ನಿಮ್ಮ ಆದೇಶ ಎಸಿ ರೂಮ್​ಗೆ ಸೀಮಿತವಾಗಿದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಡಿಕೆ ಶಿವಕುಮಾರ್​ಗೆ ಜೆಡಿಎಸ್ ಶಾಸಕರ ಬೆಂಬಲ: ನಾನು ವ್ಯಂಗ್ಯವಾಗಿ ಹೇಳಿದ್ದು ಎಂದ ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹುಬ್ಲೋಟ್ ವಾಚ್ ಕಥೆ ಮರೆತಿಲ್ಲ. ಕದ್ದು ವಾಚು ಹಾಕಿಕೊಂಡರು ಎರಡು ವರ್ಷ ಓಡಾಡಿದ್ದೀರಿ. ದುಬೈನಿಂದ ನಕಲಿ ಬಿಲ್ ತೋರಿಸಿ ವಾಚ್ ವಿಧಾನಸೌಧದಲ್ಲಿ ಇಟ್ಟಿದ್ದೀರಿ. ನಿಮ್ಮಿಂದ ನಾವು ಕಲಿಯಬೇಕಿಲ್ಲ ಮುಖ್ಯಮಂತ್ರಿಗಳೆ. ನಿಮ್ಮ ಮಂತ್ರಿಗಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಿ. ನನ್ನ ಬಗ್ಗೆ ಮತನಾಡುಲು ಬರಬೇಡಿ ಎಂದು ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆಗೆ ಹೆಚ್​ಡಿ ದೇವೇಗೌಡರು ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಶಾಸಕರು ಅವರ ಅಭಿಪ್ರಾಯ ಹೇಳಿದ್ದಾರೆ. ದೇವೇಗೌಡರಿಗೆ ವಯಸ್ಸಿನ ತೊಂದರೆ ಇದೆ. ಹಿಂದೆ ಹಾಸನದಲ್ಲಿ ಹೆಚ್​ಡಿ ದೇವೇಗೌಡರ ಕುಟುಂಬ ಬಿಟ್ಟು ಒಬ್ಬ ಸಾಮಾನ್ಯ ಕಾರ್ಯಕರ್ತ ಗೆಲ್ಲಬಹುದು ಎಂದು ಜನ ತೋರಿಸಿ ಕೊಟ್ಟಿದ್ದಾರೆ. ಈ ಪಕ್ಷ ಅಷ್ಟು ಸುಲಭವಾಗಿ ಮುಗಿಯಲ್ಲ ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು ಡಿಸೆಂಬರ್​ನಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:22 pm, Wed, 8 November 23