AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​ಗೆ ಜೆಡಿಎಸ್ ಶಾಸಕರ ಬೆಂಬಲ: ನಾನು ವ್ಯಂಗ್ಯವಾಗಿ ಹೇಳಿದ್ದು ಎಂದ ಕುಮಾರಸ್ವಾಮಿ

ಡಿಸಿಎಂ ಡಿ.ಕೆ.ಶಿವಕುಮಾರ್​ ನಾಳೆ ಸಿಎಂ ಆಗುವುದಾದರೆ ಜೆಡಿಎಸ್​ನ 19 ​​ ಶಾಸಕರ ಬೆಂಬಲ ಇದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದು, ತಾನು ವ್ಯಂಗ್ಯವಾಗಿ ಹೇಳಿಕೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ, ಶಿವಕುಮಾರ್ ಸಿಎಂ ಆಗುತ್ತಾರಾ ಇಲ್ಲವಾ ಅಂತಾ ಕಾಂಗ್ರೆಸ್​ನವರು ಹೇಳಬೇಕು ಎಂದರು.

ಡಿಕೆ ಶಿವಕುಮಾರ್​ಗೆ ಜೆಡಿಎಸ್ ಶಾಸಕರ ಬೆಂಬಲ: ನಾನು ವ್ಯಂಗ್ಯವಾಗಿ ಹೇಳಿದ್ದು ಎಂದ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: Rakesh Nayak Manchi|

Updated on: Nov 06, 2023 | 3:37 PM

Share

ರಾಮನಗರ, ನ.6: ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)​ ನಾಳೆ ಸಿಎಂ ಆಗುವುದಾದರೆ ಜೆಡಿಎಸ್​ನ 19 ​​ ಶಾಸಕರ ಬೆಂಬಲ ಇದೆ ಎಂದು ಹೇಳಿರುವುದು ವ್ಯಂಗ್ಯವಾಗಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (H.D. Kumaraswamy) ಹೇಳಿದರು. ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಸಿಎಂ ಆಗುತ್ತಾರಾ ಇಲ್ಲವಾ ಅಂತಾ ಕಾಂಗ್ರೆಸ್​ನವರು ಹೇಳಬೇಕು ಎಂದರು.

ಪ್ರತಿ ದಿನ ನೀವು ಬನ್ನಿ, ನೀವು ಬನ್ನಿ ಅಂತಾ ಎಲ್ಲರನ್ನೂ ಕರೆಯುತ್ತಿದ್ದಾರೆ. ನಿನ್ನೆ ಸಿಎಂ ಕನಿಷ್ಠ 50 ಜನರನ್ನಾದರೂ ಕರೆ ತರಬೇಕು ಎಂದಿದ್ದಾರೆ. ಪ್ರತಿನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗುತ್ತಿದ್ದೀರಾ? ಒಳ್ಳೆಯ ಕೆಲಸ ಮಾಡುತ್ತೇನೆ ಅಂದರೆ ಎಲ್ಲರನ್ನೂ ಕಳಿಸುತ್ತೇನೆ ಎಂದಿದ್ದೇನೆ. ಆದರೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರಾ ಇಲ್ಲವಾ ಅಂತ ಕಾಂಗ್ರೆಸ್ ನಾಯಕರು ಹೇಳಬೇಕು ಎಂದರು.

ಇದನ್ನೂ ಓದಿ: ಜೆಡಿಎಸ್​ 19 ಶಾಸಕರ ಬೆಂಬಲವಿದೆ; ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು

ಚುನಾವಣೆ ಬಳಿಕ ಬಿಜೆಪಿ, ಜೆಡಿಎಸ್ ಇರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಲೋಕಸಭೆ ಚುನಾವಣೆಯಾದ ಮೇಲೆ ಈ ರಾಜ್ಯದಲ್ಲಿ ಮಾತ್ರ ಅಲ್ಲ, ಈ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಯೋಚನೆ ಮಾಡಲಿ ಎಂದರು.

ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆದರೆ ನಾವು ಬೆಂಬಲ ನೀಡುತ್ತೇವೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಸಿಎಂ ಆಗುತ್ತಾರೆ ಗೊತ್ತಿಲ್ಲ. ಇದನ್ನು ನೋಡಿದರೆ ಈ ಸರ್ಕಾರಕ್ಕೆ ಒಂದು ಹೆಸರು ಇಡಬಹುದು. ಟಿಸಿಎಂ, ಡಿಸಿಎಂ ಸರ್ಕಾರ ಎಂದು ಕರೆಯಬಹುದು. ಟಿಸಿಎಂ ಅಂದರೆ ಟೆಂಪ್ರವರಿ ಸಿಎಂ, ಡಿಸಿಎಂ ಅಂದ್ರೆ ಡೂಪ್ಲಿಕೇಟ್ ಸಿಎಂ ಎಂದು ವ್ಯಂಗ್ಯವಾಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ