ಜೆಡಿಎಸ್ 19 ಶಾಸಕರ ಬೆಂಬಲವಿದೆ; ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಕುಮಾರಸ್ವಾಮಿ ಅವರ ಪ್ರೀತಿ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ದೆಹಲಿಯಲ್ಲಿ ಏನು ನಡೆಯಿತು, ಹೆಚ್‌ಡಿಕೆ ಯಾರನ್ನು ಭೇಟಿಯಾಗಿದ್ದರೂ, ಏನೆಲ್ಲಾ ದೊಡ್ಡ ಪ್ಲ್ಯಾನ್‌ಗಳಾಗಿವೆ ಎಂದು ಜೊತೆಯಲ್ಲಿದ್ದವರೇ ಹೇಳಿದ್ದಾರೆ. ಅದರ ಬಗ್ಗೆ ಎಲ್ಲಾ ಬಿಚ್ಚಿ ಈಗ ಚರ್ಚೆ ಮಾಡುವುದು ಬೇಡ ಎನ್ನುವ ಮೂಲಕ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರು, ನ.04: ಡಿಕೆಶಿ ಸಿಎಂ ಆದ್ರೆ ಜೆಡಿಎಸ್ (JDS) ಶಾಸಕರ ಬೆಂಬಲವಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ದಯವಿಟ್ಟು ನಾನು ಹೆಚ್ ಡಿ ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ. 136 ಶಾಸಕರಿದ್ದೇವೆ, ಸಾಕಷ್ಟು ಬೆಂಬಲ ಇದೆ. ನಿಮ್ಮ ಪಕ್ಷ NDAನಲ್ಲಿದೆ. ಅಲ್ಲಿದ್ದು ಕಾಂಗ್ರೆಸ್ ಪಾರ್ಟಿ ಬಗ್ಗೆ ಏಕೆ ಮಾತನಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರ ಪ್ರೀತಿ ಏನು ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ದೆಹಲಿಯಲ್ಲಿ ಏನು ನಡೆಯಿತು, ಹೆಚ್‌ಡಿಕೆ ಯಾರನ್ನು ಭೇಟಿಯಾಗಿದ್ದರೂ, ಏನೆಲ್ಲಾ ದೊಡ್ಡ ಪ್ಲ್ಯಾನ್‌ಗಳಾಗಿವೆ ಎಂದು ಜೊತೆಯಲ್ಲಿದ್ದವರೇ ಹೇಳಿದ್ದಾರೆ. ಅದರ ಬಗ್ಗೆ ಎಲ್ಲಾ ಬಿಚ್ಚಿ ಈಗ ಚರ್ಚೆ ಮಾಡುವುದು ಬೇಡ ಎನ್ನುವ ಮೂಲಕ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos