ಮೊದಲು ಎನ್‌ಡಿಎನಿಂದ ಹೊರ ಬಂದು ಮಾತನಾಡಲಿ: ಹೆಚ್‌ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್
ಬಹಳ ಸಂತೋಷ, ನಮಗೂ NDAಗೂ ಸಂಬಂಧ ಇಲ್ಲ. ಮೊದಲು ಎನ್‌ಡಿಎನಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೊರ ಬಂದು ಮಾತನಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಾಡೋ ಕಾಲದಲ್ಲಿ ಮಾಡಿಲ್ಲ, ಈಗ ಏನು ಮಾಡಲು ಆಗುತ್ತೆ ಎಂದು ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 04: ಬಹಳ ಸಂತೋಷ, ನಮಗೂ NDAಗೂ ಸಂಬಂಧ ಇಲ್ಲ. ಮೊದಲು ಎನ್‌ಡಿಎನಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೊರ ಬಂದು ಮಾತನಾಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗೋದಾದರೆ JDS ಶಾಸಕರ ಬೆಂಬಲವಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 136 ಶಾಸಕರಿದ್ದೇವೆ, ಜನ ಕೊಟ್ಟಿರುವ ಆಶೀರ್ವಾದ ನಮಗೆ ಸಾಕು. ಮಾಡೋ ಕಾಲದಲ್ಲಿ ಮಾಡಿಲ್ಲ, ಈಗ ಏನು ಮಾಡಲು ಆಗುತ್ತೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಒಳ್ಳೆಯ ವಿಪಕ್ಷ ನಾಯಕರಾಗಲಿ. ವಿಪಕ್ಷ ಸ್ಥಾನದಲ್ಲಿದ್ದು ಸರ್ಕಾರವನ್ನು ತಿದ್ದುವ ಕೆಲಸ ಮಾಡಲಿ. ಸುಮ್ಮನೆ ಟೀಕೆ ಮಾಡುವುದಲ್ಲ, ಸರ್ಕಾರದ ತಪ್ಪುಗಳನ್ನು ತಿದ್ದಬೇಕು. ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಅಪಾರ ಅನುಭವವಿದೆ, ನಮಗೆ ಮಾರ್ಗದರ್ಶನ ನೀಡಲಿ. ಜನರು ಆಶೀರ್ವಾದ ಕೊಟ್ಟಿದ್ದಾರೆ, ಅದಕ್ಕೆ ಕೆಲಸ ಮಾಡುತ್ತೇನೆ ಎಂದರು.
ಡಿ.ಕೆ.ಶಿವಕುಮಾರ್ಗೆ ಓಪನ್ ಆಫರ್ ಕೊಟ್ಟ ಹೆಚ್‌ಡಿ ಕುಮಾರಸ್ವಾಮಿ
ಡಿಸಿಎಂ ಡಿ.ಕೆ.ಶಿವಕುಮಾರ್ ನಾಳೆ ಸಿಎಂ ಆಗುವುದಾದರೆ ಜೆಡಿಎಸ್ನ 19 ಶಾಸಕರ ಬೆಂಬಲ ಇದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆದರೆ ನಾವು ಬೆಂಬಲ ನೀಡುತ್ತೇವೆ ಎಂದು ಓಪನ್ ಆಫರ್ ನೀಡಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್ನ 19 ಶಾಸಕರ ಬೆಂಬಲ: ಹೆಚ್‌ಡಿ ಕುಮಾರಸ್ವಾಮಿ ಓಪನ್ ಆಫರ್
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾನೇ ಸಿಎಂ ಅನ್ನೋ ಕೂಗು ಬಿರುಗಾಳಿ ಎಬ್ಬಿಸಿದೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆಂದು ಎಂದಿದ್ದ ಸಿದ್ದರಾಮಯ್ಯ ಇದೀಗ ಯುಟರ್ನ್ ಹೊಡೆದಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ಹೇಳಿದ್ದೇನೆ ಅಂತಾ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದರು.
ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ನಾಯಕರಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ
ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಿ ಡಿಸಿಎಂ ಡಿಕೆ ಶಿವಕುಮಾರ್ ಯಾರು ಏನು ಹೇಳಿದರೂ ಸಂತೋಷ ಅಂತ ಹೇಳಿದ್ದರು. ಇತ್ತ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸಿಎಂ ಹುದ್ದೆ ಖಾಲಿ ಇಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:44 pm, Sat, 4 November 23