ಸದನಲ್ಲಿ ಬಿಜೆಪಿಗೆ ಕೌಂಟರ್ ಕೊಡಲು ಸರ್ಕಾರ ಪ್ಲ್ಯಾನ್, ಸಿಎಲ್‌ಪಿ ಸಭೆಯಲ್ಲಿ ತಂತ್ರ ಹೆಣೆದ ಸಿದ್ದರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Dec 07, 2023 | 8:17 AM

ನಿನ್ನೆ(ಡಿಸೆಂಬರ್ 06) ಬೆಳಗಾವಿಯಲ್ಲಿರುವ ಖಾಸಗಿ ಹೋಟೆಲ್ ಫೆರ್ಫೇಲ್ಡ್ ಮ್ಯಾಲಿಯಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ವಿಪಕ್ಷಗಳ ಬಾಯಿ ಮುಚ್ಚಿಸಲು ಹಲವು ತಂತ್ರಗಾರಿಗೆ ರೂಪಿಸಲಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಗಳೇನು? ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಕೊಟ್ಟ ಸಲಹೆಗಳೇನು ಎನ್ನವ ವಿವರ ಇಲ್ಲಿದೆ.

ಸದನಲ್ಲಿ ಬಿಜೆಪಿಗೆ ಕೌಂಟರ್ ಕೊಡಲು ಸರ್ಕಾರ ಪ್ಲ್ಯಾನ್, ಸಿಎಲ್‌ಪಿ ಸಭೆಯಲ್ಲಿ ತಂತ್ರ ಹೆಣೆದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಬೆಳಗಾವಿ, (ಡಿಸೆಂಬರ್ 07): ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ(Belagavi Winter Session)  ಕಾವೇರುತ್ತಿದೆ. ಬರಗಾಲ, ಬೆಳೆ ಪರಿಹಾರ ವಿತರಣೆಯಲ್ಲಿ ವೈಫಲ್ಯ, ಗ್ಯಾರಂಟಿ ಯೋಜನೆ ಸರಿಯಾಗಿ ಅನುಷ್ಠಾನವಾಗದೇ ಇರೋದು, ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಹೀಗೆ ಹಲವು ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳುತ್ತಿವೆ. ಬಿಜೆಪಿಗೆ ಜೆಡಿಎಸ್ ಕೂಡ ಸಾಥ್ ನೀಡಿ ಜಂಟಿ ಹೋರಾಟಕ್ಕೆ ಪ್ಲ್ಯಾನ್ ಮಾಡಿವೆ. ಜಮೀರ್ ಹೇಳಿಕೆ ಖಂಡಿಸಿ ಸದನದಲ್ಲಿಂದು ಸಮರವನ್ನೇ ಸಾರಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಇದರ ನಡುವೆ ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರ ತಂತ್ರಗಾರಿಕೆ ಹೆಣೆದಿದೆ.

ವಿಪಕ್ಷಗಳ ಬಾಯಿ ಮುಚ್ಚಿಸಲು ‘ಕೈ’ ಮಾಸ್ಟರ್‌ಪ್ಲ್ಯಾನ್!

ನಿನ್ನೆ(ಡಿಸೆಂಬರ್ 06) ಬೆಳಗಾವಿಯಲ್ಲಿರುವ ಖಾಸಗಿ ಹೋಟೆಲ್ ಫೆರ್ಫೇಲ್ಡ್ ಮ್ಯಾಲಿಯಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ವಿಪಕ್ಷಗಳ ಬಾಯಿ ಮುಚ್ಚಿಸಲು ಹಲವು ತಂತ್ರಗಾರಿಗೆ ರೂಪಿಸಲಾಗಿದೆ. ವಿಪಕ್ಷಗಳ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಸಿಎಂ ಸಿದ್ದರಾಮಯ್ಯ ಕೈ ಶಾಸಕರಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಪ್ರತಿಪಕ್ಷಗಳ ಟೀಕೆಗೆ ಕಾನೂನುಬದ್ದವಾಗಿ ಉತ್ತರ ನೀಡಬೇಕು. ಅಂಕಿ ಅಂಶಗಳ ಸಮೇತ ಉತ್ತರಿಸಬೇಕು. ಅಲ್ಲದೇ ತಕ್ಕ ಪ್ರತ್ಯುತ್ತರ ನೀಡಲು 8 ಸಚಿವರ ತಂಡ ರೆಡಿಮಾಡಿದ್ದು, ಈ ಸಚಿವರರ ತಂಡದ ಮೂಲಕ ಉತ್ತರಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಇನ್ನು ಬರ ಪರಿಹಾರ ವಿಚಾರದಲ್ಲಿ ತಕ್ಕ ಸಮರ್ಥನೆ ನೀಡಬೇಕು. ಮಸೂದೆಗಳ ಮಂಡನೆ ವೇಳೆ ಕಡ್ಡಾಯವಾಗಿ ಶಾಸಕರು ಹಾಜರರಿಬೇಕು ಎಂಬ ಸಲಹೆ ಸೇರಿದಂತೆ ಹಲವು ಸೂಚನೆಗಳನ್ನು ತಮ್ಮ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ

ಇದನ್ನೂ ಓದಿ: ಪಿಎಂ ಜನಾರೋಗ್ಯ, ಸಿಎಂ ಆರೋಗ್ಯ ಕರ್ನಾಟಕ ಯೋಜನೆಯ ನೂತನ ಕಾರ್ಡ್ ಬಿಡುಗಡೆ ಮಾಡಿದ ಸಿಎಂ

ಸಿಎಲ್‌ಪಿ ಸಭೆಯಲ್ಲಿ ಪ್ರತಿಧ್ವನಿಸಿದ ಅನುದಾನ ಕೊರತೆ ವಿಚಾರ

ಇನ್ನು ಸಿಎಲ್‌ಪಿ ಸಭೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗದೆ ತೊಂದರೆ ಆಗುತ್ತಿದೆ ಎಂದು ಶಾಸಕರು ಸಿಎಂ ಮುಂದೆ ಅಲವತ್ತುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಡಿಸೆಂಬರ್ ಅಂತ್ಯದ ವೇಳೆಗೆ ಪ್ರತಿ ಕ್ಷೇತ್ರಕ್ಕೆ 25 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಗ್ಯಾರಂಟಿ ಸಮರ್ಪವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ನಡೆದ ಸಿಎಲ್‌ಪಿ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಹೊರತುಪಡಿಸಿದರೆ, ಬಹುತೇಕ ಸಚಿವರು, ಶಾಸಕರು ಭಾಗಿಯಾಗಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ