ಭಾರತ್ ಜೋಡೋ ಯಾತ್ರೆ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸೇವಾದಳ ನಾಯಕ ಕೃಷ್ಣ ಕುಮಾರ್ ಪಾಂಡೆ ನಿಧನ

| Updated By: ರಶ್ಮಿ ಕಲ್ಲಕಟ್ಟ

Updated on: Nov 08, 2022 | 1:43 PM

ಸಂತಾಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕನ ಸಮರ್ಪಣೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸೇವಾದಳ ನಾಯಕ ಕೃಷ್ಣ ಕುಮಾರ್ ಪಾಂಡೆ ನಿಧನ
ಕೃಷ್ಣ ಕುಮಾರ್ ಪಾಂಡೆ
Follow us on

ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ಕೃಷ್ಣ ಕುಮಾರ್ ಪಾಂಡೆ (Krishna Kumar Pandey) ಅವರು ಮಂಗಳವಾರ ನಿಧನರಾದರು. ಇವರು  ಮಹಾರಾಷ್ಟ್ರದ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪಾಂಡೆ ಅವರು ಮೆರವಣಿಗೆಯ ಸಮಯದಲ್ಲಿ ಕುಸಿದುಬಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಭಾರತ್ ಜೋಡೋ ಯಾತ್ರೆಯ ಈ 62 ನೇ ಬೆಳಿಗ್ಗೆ, ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಪಾಂಡೆ ಅವರು ರಾಷ್ಟ್ರಧ್ವಜವನ್ನು ಹಿಡಿದು ದಿಗ್ವಿಜಯ ಸಿಂಗ್ ಮತ್ತು ನನ್ನೊಂದಿಗೆ ನಡೆಯುತ್ತಿದ್ದರು. ಕೆಲವು ನಿಮಿಷಗಳ ನಂತರ ಅವರು ಸಹೋದ್ಯೋಗಿಗೆ ಧ್ವಜವನ್ನು ಕೊಟ್ಟು ಹಿಂದೆ ಸರಿದರು. ನಂತರ ಅವರು ಕುಸಿದುಬಿದ್ದರು. ಅಲ್ಲಿಂದ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರು. ನಾಗಪುರದಲ್ಲಿ ಆರ್‌ಎಸ್‌ಎಸ್ ವಿರುದ್ಧ ದನಿಯೆತ್ತಿದ್ದರು. ಎಲ್ಲಾ ಯಾತ್ರಿಗಳಿಗೆ ಇದು ಅತ್ಯಂತ ದುಃಖದ ಕ್ಷಣವಾಗಿದೆ, ”ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕನ ಸಮರ್ಪಣೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸೋಮವಾರ ರಾತ್ರಿ ಮಹಾರಾಷ್ಟ್ರ ಪ್ರವೇಶಿಸಿದೆ. ರಾಹುಲ್ ಗಾಂಧಿ ಅವರು 15 ದಿನಗಳಲ್ಲಿ ಮಹಾರಾಷ್ಟ್ರದ ಐದು ಜಿಲ್ಲೆಗಳ 15 ವಿಧಾನಸಭೆ ಮತ್ತು 6 ಸಂಸದೀಯ ಕ್ಷೇತ್ರಗಳಲ್ಲಿ ಸಂಚರಿಸಲಿದ್ದು, 382 ಕಿ.ಮೀ. ಕ್ರಮಿಸಲಿದ್ದಾರೆ. ವಯನಾಡ್ ಸಂಸದರು ನವೆಂಬರ್ 10 ರಂದು ನಾಂದೇಡ್‌ನಲ್ಲಿ ಮತ್ತು ನವೆಂಬರ್ 18 ರಂದು ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ವೇಳಾಪಟ್ಟಿಯ ಪ್ರಕಾರ ನವೆಂಬರ್ 20 ರಂದು ಯಾತ್ರೆ ಮಧ್ಯಪ್ರದೇಶ ಪ್ರವೇಶಿಸಲಿದೆ.