ಸಿದ್ದರಾಮಯ್ಯ ನಿವಾಸಕ್ಕೆ ವೈದ್ಯರು ಆಗಮನ: ಮನೆಯಲ್ಲೇ ಮಾಜಿ ಸಿಎಂಗೆ ಚಿಕಿತ್ಸೆ
ಎಡಗೈ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ವೈದ್ಯರು ಆಗಮಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(siddaramaiah )ಅವರಿಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು(ಮೇ 12) ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಂಯ್ಯನವರ ಸರ್ಕಾರಿ ನಿವಾಸಕ್ಕೆ ವೈದ್ಯರು ಆಗಮಿಸಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. Viral Herpes ಇನ್ಫೆಕ್ಷನ್ನಿಂ ದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡಗೈಯಲ್ಲಿ ಊತ ಕಾಣಿಸಿಕೊಂಡಿದೆ. ಇದರಿಂದ ಅವರ ಆಪ್ತ ವೈದ್ಯ ರವಿಕುಮಾರ್ ಅವರು ಮನಲ್ಲೇ ಚಿಕಿತ್ಸೆ ನೀಡಿದಾರೆ.
ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯ ರವಿ ಕುಮಾರ್, ಸಿದ್ದರಾಮಯ್ಯನವರ ಕೈ ಊತ ಈಗ ಕೊಂಚ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು ಕೆಲವು ದಿನಗಳು ಬೇಕಾಗುತ್ತದೆ. ಹಾಗಾಗಿ ಎರಡು ವಾರ ವಿಶ್ರಾಂತಿ ಪಡೆಯಬೇಕು. ಇದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ. ಎಂದು ಮಾಹಿತಿ ನೀಡಿದರು.
ಇನ್ನು ಸಿದ್ದರಾಮಯ್ಯ ಕೊಪ್ಪಳ ಚುನಾವಣಾ ಪ್ರಚಾರದಲ್ಲಿದ್ದಾಗ ನೂಕು-ನುಗ್ಗುಲು ಉಂಟಾಗಿತ್ತು. ಆ ವೇಳೆ ಸಿದ್ದರಾಮಯ್ಯನವರ ಕೈಗೆ ಗಾಯವಾಗಿತ್ತು. ಕೈ ಗಾಯ ನಡುವೆಯೂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದರು. ಆದ್ರೆ, ಇದೀಗ ಅದು ಇನ್ಫೆಕ್ಷನ್ ಆಗಿದೆ.