ಡಿಕೆ ಶಿವಕುಮಾರ್ ಕರ್ನಾಟಕದ ಹಣ ಹಿಡಿದುಕೊಂಡು ಹೋಗಿ ತೆಲಂಗಾಣದಲ್ಲಿ ಕೂತಿದ್ದಾರೆ: ನಳಿನ್ ಕುಮಾರ್ ಕಟೀಲ್

| Updated By: Rakesh Nayak Manchi

Updated on: Dec 03, 2023 | 5:14 PM

ಪಂಚ ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಆಪರೇಷನ್ ಭೀತಿ ಹಿನ್ನೆಲೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಅಲ್ಲೇ ಠಿಕಾಣಿ ಹೂಡಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕದ ಹಣ ಹಿಡಿದುಕೊಂಡು ಹೋಗಿ ಡಿಕೆ ಶಿವಕುಮಾರ್ ತೆಲಂಗಾಣದಲ್ಲಿ ಕೂತಿದ್ದಾರೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಕರ್ನಾಟಕದ ಹಣ ಹಿಡಿದುಕೊಂಡು ಹೋಗಿ ತೆಲಂಗಾಣದಲ್ಲಿ ಕೂತಿದ್ದಾರೆ: ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್ ಮತ್ತು ಡಿಕೆ ಶಿವಕುಮಾರ್
Follow us on

ಮಂಗಳೂರು, ಡಿ.3: ತೆಲಂಗಾಣ ಚುನಾವಣೆಗೆ ಕರ್ನಾಟಕ ಸರ್ಕಾರದ ಹಣ ಬಳಕೆಯಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾಡಿರುವ ಭ್ರಷ್ಟಾಚಾರದ ಹಣವನ್ನು ಅಲ್ಲಿ ಸುರಿದಿದ್ದಾರೆ ಎಂದರು.

ಆಪರೇಷನ್ ಹಸ್ತ ಮಾಡುವುದರಲ್ಲಿ ಕಾಂಗ್ರೆಸ್ ಬಹಳ ಯಶಸ್ಸಿನ ಪಾರ್ಟಿ. ಹೀಗಾಗಿ ಕಾಂಗ್ರೆಸ್​​ ಬೇರೆ ಪಾರ್ಟಿಯವರನ್ನು ನಂಬುತ್ತಿಲ್ಲ. ಕರ್ನಾಟಕದ ಹಣ ಹಿಡಿದುಕೊಂಡು ಹೋಗಿ ಡಿಕೆ ಶಿವಕುಮಾರ್ ತೆಲಂಗಾಣದಲ್ಲಿ ಕೂತಿದ್ದಾರೆ ಎಂದರು.

ಕಾಂಗ್ರೆಸ್ ಶಾಸಕರನ್ನು ಗಟ್ಟಿ ಮಾಡುವ ಪ್ರಯತ್ನದಲ್ಲಿ ಇದ್ದಾರೆ. ಜನ ಬಹುಮತ ಕೊಟ್ಟಿದ್ದಾರೆ ಮತ್ತೆ ಯಾಕೆ ಭಯ ಸಂಶಯ? ಇನ್ನು ಸರ್ಕಾರ ನಡೆಸುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಕರ್ನಾಟಕದ ಹಣ ಸುರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಪಡೆದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ​ದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲೂ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ದೇಶದಲ್ಲಿ ಮೋದಿ ಅಲೆ ಇದೆ, ಮೋದಿಯವರ ಗ್ಯಾರಂಟಿ ಸಫಲವಾಗಿದೆ ಎಂದರು.

ಇದನ್ನೂ ಓದಿ: ಭಾವುಕ ಮಾತುಗಳಲ್ಲೇ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ಪಕ್ಷ ಬೇರೆ ರಾಜ್ಯಗಳಲ್ಲೂ ಗ್ಯಾರಂಟಿಗಳನ್ನು ಘೋಷಿಸಿದ್ದರು. ಕರ್ನಾಟಕದ ಫಲಿತಾಂಶ ನೋಡಿ ಬೇರೆಡೆಯೂ ಗ್ಯಾರಂಟಿ ಘೋಷಿಸಿದ್ದರು. ಗ್ಯಾರಂಟಿ ಹೆಸರಿನಲ್ಲಿ ಮೋಸಮಾಡಿ ಗೆದ್ದ ಬಳಿಕ ಗ್ಯಾರಂಟಿಯನ್ನೇ ಮರೆತಿದೆ. ಇದರಿಂದ ಜನರಿಗೆ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಅಂತಾ ಅರ್ಥವಾಗಿದೆ. ಸಿದ್ದರಾಮಯ್ಯ ಈ ಚುನಾವಣೆ ಸೆಮಿಫೈನಲ್ ಅಂತಾ ಪದೇಪದೆ ಅಂತ ಹೇಳುತ್ತಿದ್ದರು. ಸೆಮಿಫೈನಲ್​ನಲ್ಲಿ ಕಾಂಗ್ರೆಸ್​ನ್ನು ಜನರು ಹೊರಗಿಟ್ಟಿದ್ದಾರೆ ಎಂದರು.

ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗುವುದು ಸ್ಪಷ್ಟವಾಗಿದೆ. ಮೋದಿ ಚಿಂತನೆ ಅಭಿವೃದ್ಧಿ ಹಾಗೂ ಬಡವರ ಪರ ಇದೆ. ಇದೇ ಕಾರಣಕ್ಕಾಗಿ ಮೋದಿ ಗ್ಯಾರಂಟಿ ಸಫಲವಾಗಿದೆ. ನಾಲ್ಕು ರಾಜ್ಯಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಅವಿರತ ಪ್ರಯತ್ನಿಸಿದ್ದಾರೆ. ಬಿಜೆಪಿ ದೇಶದಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದೆ ಎಂದರು.

ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಘೋಷಣೆಗಳನ್ನು ಮಾಡಿತ್ತು. ಚುನಾವಣೆಯ ಕೊನೆ ಹಂತದಲ್ಲಿ ಗ್ಯಾರಂಟಿಗಳನ್ನು ನೀಡಲು ಆರಂಭಿಸಿದರು. ಆದರೆ ಜನ ಗ್ಯಾರಂಟಿ ನಂಬುತ್ತಿಲ್ಲ, ಮೋಸ ವಂಚನೆ ಅನ್ನೋದು ಸ್ಪಷ್ಟವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಮೋದಿ ಬೇಕು ಅನ್ನೋದು ಸ್ಪಷ್ಟವಾಗಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ