ದಾವಣಗೆರೆ: ಸಂಸದ ಸಿದ್ದೇಶ್ವರ್ ವಿರುದ್ಧ ಕಾರ್ಯಕರ್ತರ ಆಕ್ರೋಶ, ಅರ್ಧಕ್ಕೆ ನಿಂತ ವಿಜಯಸಂಕಲ್ಪ ಯಾತ್ರೆ

|

Updated on: Mar 19, 2023 | 4:20 PM

ವಿಜಯ ಸಂಕಲ್ಪ ಯಾತ್ರೆಯ ವಾಹನದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಚಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರಿಗೆ ಅವಕಾಶ ನೀಡಲಾಗಿದೆ. ಇದು ಕ್ಷೇತ್ರದ ಇನ್ನೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಿವಕುಮಾರ ಬೆಂಬಲಿಗರ ಕಣ್ಣುಗಳನ್ನು ಕೆಂಪಗಾಗಿಸಿದ್ದು, ಎರಡು ಗುಂಪುಗಳ ನಡುವಿನ ಮಾತಾತಿನ ಚಕಮಕಿ ನಡೆಯಿತು.

ದಾವಣಗೆರೆ: ಸಂಸದ ಸಿದ್ದೇಶ್ವರ್ ವಿರುದ್ಧ ಕಾರ್ಯಕರ್ತರ ಆಕ್ರೋಶ, ಅರ್ಧಕ್ಕೆ ನಿಂತ ವಿಜಯಸಂಕಲ್ಪ ಯಾತ್ರೆ
ಸಂಸದ ಸಿದ್ದೇಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
Follow us on

ದಾವಣಗೆರೆ: ಚನ್ನಗಿರಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (BJP Vijaya Sankalpa Yatra) ಮಾಡಾಳ್ ಬಣ ಮೇಲುಗೈ ಸಾಧಿಸಿದ್ದು, ವಿಜಯ ಸಂಕಲ್ಪ ಯಾತ್ರೆಯ ವಾಹನದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಚಪ್ಪ (Madal Virupakshappa) ಪುತ್ರ ಮಾಡಾಳ್ ಮಲ್ಲಿಕಾರ್ಜುನ (Madal Mallikarjuna) ಅವರಿಗೆ ಅವಕಾಶ ನೀಡಲಾಗಿದೆ. ಇದು ಕ್ಷೇತ್ರದ ಇನ್ನೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಿವಕುಮಾರ (Shivakumara) ಬೆಂಬಲಿಗರ ಕಣ್ಣುಗಳನ್ನು ಕೆಂಪಗಾಗಿಸಿದ್ದು, ಎರಡು ಗುಂಪುಗಳ ನಡುವಿನ ಮಾತಾತಿನ ಚಕಮಕಿ ನಡೆಯಿತು. ಅಲ್ಲದೆ, ಯಾತ್ರೆಗೆ ಆಗಮಿಸುತ್ತಿದ್ದ ಸಂಸದ ಜಿಎಂ ಸಿದ್ದೇಶ್ವರ ಅವರ ಕಾರನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ. ಪರಿಣಾಮ ಚನ್ನಗಿರಿ ಕ್ಷೇತ್ರದಲ್ಲಿ (Channagiri Constituency) ಹೊರಟ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ಸ್ಥಗಿತಗೊಂಡಿದೆ.

ಟಿಕೆಟ್ ಆಕಾಂಕ್ಷಿಳ ನಡುವೆ ಮಾತಿನ ಚಕಾಮಕಿ ನಡೆದಿದ್ದಲ್ಲದೆ ಎರಡು ಗುಂಪಿನ ಕಾರ್ಯಕರ್ತರು ತಮ್ಮ ನಾಯಕರಿಗೆ ಜಯಘೋಷಗಳನ್ನು ಕೂಗಿದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೂ ಬೆಂಬಲಿಗರು ಜೈಕಾರ ಕೂಗಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. ಕೊನೆಗೆ ಸಂಸದ ಜಿಎಂ ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ರವಿಕುಮಾರ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯಾತ್ರೆ ವಾಹನದಿಂದ ಕೆಳಗಿಳಿದು ಹೋದರು. ಇದರಿಂದಾಗಿ ವಿಜಯ ಸಂಕಲ್ಪ ಯಾತ್ರೆ ಅರ್ಧಕ್ಕೆ ಸ್ಥಗಿತಗೊಂಡಿತು.

ಇದನ್ನೂ ಓದಿ: ಮೂಡಿಗೆರೆ ವಿಜಯಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರ ಗಲಾಟೆ: ನಾನು ಗೆಲ್ಲಬಾರದು ಅಂತ ಹೀಗೆ ಮಾಡಿದ್ದಾರೆ- ಎಂ.ಪಿ. ಕುಮಾರಸ್ವಾಮಿ

ಪಕ್ಷದಲ್ಲಿ ಸಕ್ರಿಯವಾಗಿ ಇರಬೇಕು ಎಂದು ಪಕ್ಷ ಈಗಾಗಲೇ ಸೂಚನೆ ನೀಡಿದೆ. ಹೀಗಾಗಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಯಾರೋ ಒಬ್ಬರು ಬಂದು ನಾನು ಟಿಕೇಟ್ ಆಕಾಂಕ್ಷಿ ಅಂದರೆ ಅದನ್ನ ಜನ ತಿರ್ಮಾಣ ಮಾಡುತ್ತಾರೆ. ಕಾರ್ಯಕ್ರಮದಿಂದ ದೂರ ಇರುವಂತೆ ನಮ್ಮ ತಂದೆಗೆ ಪಕ್ಷಸೂಚನೆ ನೀಡಿಲ್ಲ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.

ಚುನಾವಣೆ ಸಮಯದಲ್ಲಿ ವಿರೂಪಾಕ್ಷಪ್ಪ ಮನೆ ಮೇಲೆ ದಾಳಿ ನಡೆದಿರುವುದು ಬಿಜೆಪಿ ಪಕ್ಷಕ್ಕೆ ತೀವ್ರ ಹಿನ್ನಡೆ, ಮುಜುಗರ ಉಂಟುಮಾಡಿದೆ. ಹೀಗಾಗಿ ಚನ್ನಗಿರಿ ಕ್ಷೇತ್ರಕ್ಕೆ ಓರ್ವ ಸೂಕ್ತ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಆರ್​ಎಸ್​ಎಸ್​ನಿಂದಲೂ ಕ್ಲೀನ್ ಇಮೇಜ್ ವ್ಯಕ್ತಿಗೆ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಚನ್ನಗಿರಿ ಕ್ಷೇತ್ರದ ಟಿಕೆಟ್​ಗಾಗಿ ಆಕಾಂಕ್ಷಿಗಳ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ.

ಅದಾಗ್ಯೂ, ಶಿವಮೊಗ್ಗದ ವೈದ್ಯ ಡಾ. ಧನಂಜಯ ಸರ್ಜಿ ಅವರನ್ನು ಕಣಕ್ಕಿಳಿಸಲು ಒತ್ತಾಯಿಸಲಾಗುತ್ತಿದೆ. ಶಿವಮೊಗ್ಗ ಬಿಜೆಪಿ ಮುಖಂಡರಾಗಿರುವ ಇವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ಗಾಗಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆದರೆ ಮೂಲತಃ ಚನ್ನಗಿರಿಯವರಾಗಿರುವ ಧನಂಜಯ ಅವರಿಗೆ ಚನ್ನಗಿರಿ ಬಿಜೆಪಿ ಮುಖಂಡರು ಮತ್ತು ಸ್ಥಳೀಯರು ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿತ್ತು. ಈ ನಡುವೆ ಶಾಸಕ ವಿರುಪಾಕ್ಷಪ್ಪ ಅವವರ ಪುತ್ರನಿಗೆ ಯಾತ್ರೆ ವಾಹನದಲ್ಲಿ ಅವಕಾಶ ನೀಡಿರುವುದು ಟಿಕೆಟ್ ಆಕಾಂಕ್ಷಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Sun, 19 March 23