ರಾಮನಗರ ಛಿದ್ರ ಮಾಡಿದವರು ನಾವಲ್ಲ, ಹೆಚ್​​ಡಿ ಕುಮಾರಸ್ವಾಮಿ: ಡಿಕೆ ಶಿವಕುಮಾರ್​​​ ಆರೋಪ

ರಾಮನಗರದಲ್ಲಿ ಹೆಚ್​ಡಿ ಕುಮಾರಸ್ವಾಮಿ ಆಸ್ತಿ ಮಾಡಿಲ್ವೇ? ಜಮೀನು ರೇಟ್ ಎಷ್ಟಿದೆ ಕೇಳಿ. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ವಿಧಾನಸೌಧಕ್ಕೆ ಬನ್ನಿ ಚರ್ಚೆ ಮಾಡೋಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

ರಾಮನಗರ ಛಿದ್ರ ಮಾಡಿದವರು ನಾವಲ್ಲ, ಹೆಚ್​​ಡಿ ಕುಮಾರಸ್ವಾಮಿ: ಡಿಕೆ ಶಿವಕುಮಾರ್​​​ ಆರೋಪ
ಡಿಕೆ ಶಿವಕುಮಾರ್​, ಹೆಚ್​​.ಡಿ ಕುಮಾರಸ್ವಾಮಿ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Oct 25, 2023 | 3:05 PM

ಬೆಂಗಳೂರು ಅ.24: ಕನಕಪುರವನ್ನು (Kanakapura) ಬೆಂಗಳೂರಿಗೆ (Bengaluru) ಸೇರಿಸುವ ಬಗ್ಗೆ ಜನರನ್ನು ಕೇಳುತ್ತಿದ್ದೇನೆ. ಬುದ್ದಿವಂತಿಕೆ ಇಲ್ಲದಿದ್ದರೂ ನಡೆಯುತ್ತದೆ ಪ್ರಜ್ಞಾವಂತಿಕೆ ಇರಬೇಕು. ನಾವು ಬೆಂಗಳೂರಿನವರು, ಬೆಂಗಳೂರಲ್ಲೇ ಇರಬೇಕು. ರಾಮನಗರ (Ramnagar) ಛಿದ್ರ ಮಾಡಿದವರು ನಾವಲ್ಲ, ಹೆಚ್​. ಡಿ.ಕುಮಾರಸ್ವಾಮಿ (HD Kumaraswamy) ಎಂದು ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ (DK Shivakumar)​ ಆರೋಪ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಮನಗರದಲ್ಲಿ ಹೆಚ್​ಡಿ ಕುಮಾರಸ್ವಾಮಿ ಆಸ್ತಿ ಮಾಡಿಲ್ವೇ? ಜಮೀನು ರೇಟ್ ಎಷ್ಟಿದೆ ಕೇಳಿ. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ವಿಧಾನಸೌಧಕ್ಕೆ ಬನ್ನಿ ಚರ್ಚೆ ಮಾಡೋಣ. ಏಕಾಂಗಿಯಾಗಿ ಚರ್ಚೆಗೆ ಬನ್ನಿ ಅಂತ ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

ಸಮಿಶ್ರ ಸರ್ಕಾರ ಪತನ ವಿಚಾರವಾಗಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಬಹಳ ನಮ್ರತೆಯಿಂದ ಹೇಳುತ್ತೇನೆ. ನಿಮ್ಮ ನುಡಿಮುತ್ತುಗಳನ್ನು ಅಸೆಂಬ್ಲಿಯಲ್ಲಿ ಉದುರಿಸಿದ್ದೀರಾ. ನಿಮ್ಮ ಸರ್ಕಾರ, ನಮ್ಮ ಸರ್ಕಾರವನ್ನು ಯಾರು ಬೀಳಿಸಿದರು ಅಂತ ಹೇಳಿದ್ರಿ. ಕೆಲ ಬಾರಿ ನನ್ನ ಹೆಸರು, ಕೆಲ ಬಾರಿ ಸಿದ್ದರಾಮಯ್ಯ ಹೆಸರು ಹೇಳಿದ್ರಿ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಣ ನೀಡಿ ಸರ್ಕಾರ ಬೀಳಿಸಿದರು ಅಂತ ನೀವೇ ಹೇಳಿದ್ದೀರಿ. ವಿಧಾನಸಭೆಯಲ್ಲೇ ಹೆಚ್ ​ಡಿ ಕುಮಾರಸ್ವಾಮಿಯವರು ಮಾತನಾಡಿದ ಸಾಕ್ಷಿಗಳು ಸಾಕಷ್ಟಿವೆ ಎಂದರು.

ಇದನ್ನೂ ಓದಿ: ಕನಕಪುರ ಗಲಾಟೆ: ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಜಾಡಿಸಿದ ಡಿಕೆ ಶಿವಕುಮಾರ್

ನಾವು ಕೊಟ್ಟ ಬೆಂಬಲವನ್ನು ನಿಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಒಬ್ಬರು ಬೆಳಗಾವಿಯವರು, ಒಬ್ಬ ಚನ್ನಪಟ್ಟಣದವರು ಮತ್ತೊಬ್ಬರು ಬೆಂಗಳೂರಿನವರು ನಿಮ್ಮ ಸರ್ಕಾರ ತೆಗೆಯಲು ಶ್ರಮ ಹಾಕಿ ಯಶಸ್ವಿ ಆದರಲ್ಲ, ಅವರನ್ನೇ ಈಗ ತಬ್ಬಿಕೊಂಡಿದ್ದೀರಾ? ಆಗ ಹಗಲೂ, ರಾತ್ರಿ ನಿಮ್ಮ ಜೊತೆಗೆ ನಿಂತವರು ಯಾರು? ಅನೇಕ ಕಹಿ ಘಟನೆ ಸಹಿಸಿಕೊಂಡು ಅವರ ಜೊತೆಗೆ ಕೈಜೋಡಿಸಿದ್ದೇನೆ. ಅಂದು ಸಿದ್ದರಾಮಯ್ಯ ಅವರು ಹೈಕಮಾಂಡ್​​ ಹೇಳಿದರೂ ಅಂತ ಬೇಷರತ್ ಆಶೀರ್ವಾದ ಮಾಡಿದರು. ಮಾನವೀಯತೆ ಬೇಡವೇ? ಉಪಕಾರ ಸ್ಮರಣೆ ಬೇಡವೇ? ಸರ್ಕಾರ ನೀವು ಉಳಿಸಿಕೊಳ್ಳಬೇಕಿತ್ತು. ಅಂದು ಸರ್ಕಾರ ಬೀಳಿಸಿದವರ ಜೊತೆಗೆ ಈಗ ಕೈ ಜೋಡಿಸಿದ್ದೀರಿ. ಸಿದ್ದರಾಮಯ್ಯ ಅವರಿಗೆ ಯಾಕೆ ಮೀರ್ ಸಾದಿಕ್ ಅಂತೀರಿ? ಬೆಳಗಾವಿ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡಿ ಎಂದು ಸವಾಲು ಹಾಕಿದರು.

ನಾವು ಬೆಂಗಳೂರಿನವರು. ಹೊಸಕೋಟೆ, ನೆಲಮಂಗಲ, ಮಾಗಡಿ, ಚನ್ನಪಟ್ಟಣ, ರಾಮನಗರ ಮತ್ತು ಕನಕಪುರದವರೆಲ್ಲಾ ಬೆಂಗಳೂರಿನವರೇ. ನಾನು ನನ್ನ ಜನರಿಗೆ ತಿಳಿವಳಿಕೆ ಹೇಳುತ್ತೇನಪ್ಪ. ನೀವೂ ಆಸ್ತಿ ಮಾಡಿಲ್ಲವೇ, ನಾವೇನಾದರೂ ತಕರಾರು ಮಾಡ್ತಿದ್ದೀವಾ? ವಿದ್ಯೆಗೋಸ್ಕರ ಎಷ್ಟು ಜಮೀನು ದಾನ ಮಾಡಿದ್ದೇನೆ ಎಂಬ ಅರಿವಿದೆಯಾ? ರಾಮನಗರ ಜಿಲ್ಲೆಯಲ್ಲಿ ಮೂರು ಬಿಲ್ಡಿಂಗ್ ಕಟ್ಟಿದ್ದೀರಿ ಶುಭ ಹಾರೈಸುತ್ತೇನೆ. ಕ್ಷೇತ್ರದ ಶ್ರೇಯಸ್ಸು ಬೆಳೆಸಬೇಕಾದ್ದು ನಮ್ಮ ಕರ್ತವ್ಯ ಎಂದು ವಾಗ್ದಾಳಿ ಮಾಡಿದರು.

ಕುಮಾರಸ್ವಾಮಿ-ಡಿಕೆ ಶಿವಕುಮಾರ್​ ಮಧ್ಯೆ ಕಿತ್ತಾಟ ಏಕೆ?

ಕನಕಪುರ ಜಿಲ್ಲೆಯನ್ನು ಬೆಂಗಳೂರು ನಗರ ಜಿಲ್ಲೆಗೆ ಸೇರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು. ಡಿಕೆ ಶಿವಕುಮಾರ್​ ಅವರ ಈ ಹೇಳಿಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಡಿಕೆ ಶಿವಕುಮಾರ್ ಆ ಹೇಳಿಕೆ ನೀಡಿದ್ದಾರೆ ಆಕ್ರೋಶ ವ್ಯಕ್ತಪಿಡಸಿದ್ದರು.

ಇನ್ನು ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮಿಶ್ರ ಸರ್ಕಾರ ಬೀಳಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಕಾರಣ ಎಂದು ಹೆಚ್​ಡಿ ಕುಮಾರಸ್ವಾಮಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ಯುದ್ಧ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:01 pm, Wed, 25 October 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್