ಬೆಂಗಳೂರು, ಸೆ.06: ಪೂರ್ಣಿಮಾ ‘ಕೈ’ ಸೇರ್ಪಡೆ ವದಂತಿ ಬೆನ್ನಲ್ಲೇ ಇಂದು (ಸೆ.06) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬೆಂಗಳೂರು ನಗರದ ಕೆ.ಆರ್.ಪುರಂನ ದೇವಸಂದ್ರದಲ್ಲಿರುವ ಹಿರಿಯೂರು ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ‘ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನನಗೆ ಆಹ್ವಾನ ಕೊಟ್ಟಿದ್ದರಿಂದ ಭೇಟಿ ಆಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಬಗ್ಗೆ ಚರ್ಚೆ ಮಾಡೋಣ ಎಂದರು.
ಇನ್ನು ಇದೇ ವೇಳೆ ಆಪರೇಷನ್ ಹಸ್ತದ ಬಗ್ಗೆ ಮಾತನಾಡಿದ ಅವರು ‘ನಾವು ಆಪರೇಷನ್ ಹಸ್ತ ಮಾಡಲ್ಲ, ಕೋ ಆಪರೇಷನ್ ಮಾಡ್ತೀವಿ. ಮಾಜಿ ಶಾಸಕಿ ಪೂರ್ಣಿಮಾ ತಂದೆ ದಿವಂಗತ ಕೃಷ್ಣಪ್ಪ ಅವರು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ತಂದೆ ನಮ್ಮ ಲೀಡರ್, ಹಾಗಾಗಿ ಅವರ ನಡುವೆ ಅನ್ಯೂನತೆ ಇದೆ. ಇನ್ನು ಪೂರ್ಣಿಮಾ ಅವರ ಜೊತೆ ನಾನು ರಾಜಕೀಯ ಬಗ್ಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ; ಡಿಕೆ ಶಿವಕುಮಾರ್ ವಿವಾದಿತ ಹೇಳಿಕೆ
ಇನ್ನು ಡಿಕೆ ಶಿವಕುಮಾರ್ ಭೇಟಿ ಕುರಿತು ‘ ಇವತ್ತು ಅವರು ನಮ್ಮ ಮನಗೆ ಬಂದಿದ್ದರು. ಹಬ್ಬದ ಕಾರಣಕ್ಕೆ ಬಂದು ಊಟ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ಸಿನಿಂದ ನನಗೆ ಆಹ್ವಾನ ಇದೆ. ಆದ್ರೆ, ನಾನು ಬಿಜೆಪಿಯಲ್ಲಿ ಇದ್ದೇನೆ, ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ. ಚುನಾವಣೆಗೂ ಮುಂಚಿತವಾಗಿ ಈ ಚರ್ಚೆ ಇತ್ತು. ಆದ್ರೆ, ನಾನು ಎಲ್ಲಿಯೂ ಹೇಳಲಿಲ್ಲ ಬಿಜೆಪಿ ಬಿಡುತ್ತೇನೆಂದು ಎಂದರು.
ಅಷ್ಟೇ ಅಲ್ಲ ಈಗಲೂ ಕೂಡ ಪಕ್ಷ ಬಿಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಹೋಗುವುದಾದರೆ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಯಾವುದೇ ಕಾರಣಕ್ಕೂ ಕದ್ದು ಮುಚ್ಚಿ ನಾನು ಕಾಂಗ್ರೆಸ್ ಸೇರಲ್ಲ. ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಕೆಲ ಶಾಸಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ನನಗೆ ಯಾವುದೇ ಅಸಮಧಾನ ಇಲ್ಲ ಎಂದರು. ಇದೇ ವೇಳೆ ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಧ್ಯಕ್ಷರ ಆಯ್ಕೆ ಮಾಡುತ್ತಾರೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ