ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ (National Herald money laundering case) ರಾಹುಲ್ ಗಾಂಧಿ (Rahul Gandhi) ಸತತ ಮೂರನೇ ದಿನದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate) ಮುಂದೆ ಹಾಜರಾಗುತ್ತಿದ್ದಂತೆ, ದೆಹಲಿ ಪೊಲೀಸರು ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಬಲವಂತವಾಗಿ ನುಗ್ಗಿ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ವಿಡಿಯೊವೊಂದನ್ನು ಶೇರ್ ಮಾಡಿದ್ದು ಬುಧವಾರ ಮಧ್ಯಾಹ್ನ ಎಐಸಿಸಿ ಪ್ರಧಾನ ಕಚೇರಿಗೆ ಪ್ರವೇಶಿಸಲು ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ಹಿಂದೆ ತಳ್ಳುತ್ತಿರುವುದವನ್ನು ವಿಡಿಯೊದಲ್ಲಿ ಕಾಣಬಹುದು. ಓ ಸರ್ವಾಧಿಕಾರಿಯೇ. ನೀವು ಆಸ್ತಿಯನ್ನು ಧ್ವಂಸ ಮಾಡಬೇಕಾದರೆ, ಪ್ರಜಾಪ್ರಭುತ್ವದ ಕುರ್ಚಿಯಿಂದ ಕೆಳಗಿಳಿದು ಜನರ ಮುಂದೆ ನಿಂತುಕೊಳ್ಳಿ. ನೀವು ನಿಮ್ಮ ಪೋಲೀಸ್ ಗೂಂಡಾಗಳನ್ನು ಕಳುಹಿಸಿದ ಕಾಂಗ್ರೆಸ್ ಕಚೇರಿ ಪ್ರಪಂಚದ ಅತಿದೊಡ್ಡ ಸಾಮ್ರಾಜ್ಯವನ್ನು ಅಳಿಸಿಹಾಕಿದೆ…ನಿಮ್ಮ ದುರಹಂಕಾರಕ್ಕೆ ಕಾರಣವಾದರೂ ಏನು? ನಾವು ನಿಮ್ಮ ಅಹಂಕಾರವನ್ನು ಮುರಿಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಬಿಜೆಪಿ ಭಾರತದ ಪ್ರಜಾಪ್ರಭುತ್ವವನ್ನು ಕೊಂದು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಎಐಸಿಸಿ ಪ್ರಧಾನ ಕಚೇರಿ ಬಾಗಿಲು ಒಡೆದ ಅವರು ನಮ್ಮ ಪೂರ್ವಜರು ಹೋರಾಡಿ ತಮ್ಮ ಪ್ರಾಣವನ್ನು ಕೊಟ್ಟ ಪ್ರಜಾಪ್ರಭುತ್ವವನ್ನು ತುಳಿದು ಹಾಕಿದರು ಎಂದು ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಪ್ರಧಾನ ಕಚೇರಿಗೆ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಒತ್ತಾಯಿಸಿದರು. ಇಂದು ಎಲ್ಲಾ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಾಳೆ ಕಾಂಗ್ರೆಸ್ ಭಾರತದಾದ್ಯಂತ ಎಲ್ಲಾ ರಾಜಭವನಗಳಿಗೆ ಘೇರಾವ್ ಮಾಡಲಿದೆ. ನಾಳೆಯ ದಿನವೂ ಎಲ್ಲಾ ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ओ तानाशाह…जब गुण्डई ही करनी है, तो उतरो लोकतंत्र की कुर्सी से और आओ जनता के सामने।
कांग्रेस के जिस दफ्तर में तुमने अपने पुलिसिया गुंडे भेजे हैं, उस दफ्तर ने दुनिया के सबसे बड़े साम्राज्य को धूल चटाई है…तुम्हारे अहंकार की तो हैसियत ही क्या है?
हम अहंकार तुम्हारा तोड़ेंगे। pic.twitter.com/rQexyK3srA
— Congress (@INCIndia) June 15, 2022
ಹಲವಾರು ಕಾಂಗ್ರೆಸ್ ಸಂಸದರು ಮತ್ತು ಮುಖಂಡರು ಬುಧವಾರವೂ ರಾಹುಲ್ ಗಾಂಧಿಯನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆಗಳನ್ನು ಮುಂದುವರೆಸಿದ್ದಾರೆ. “ನಾವು ಭಯೋತ್ಪಾದಕರೇ? ನಮಗೇಕೆ ಭಯ? ಅವರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸ್ ಶಕ್ತಿ ಬಳಸುತ್ತಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಅಧೀರ್ ರಂಜನ್ ಚೌಧರಿ ಎಎನ್‌ಐಗೆ ತಿಳಿಸಿದ್ದಾರೆ.
ಈವರೆಗೆ 150 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇಂದು 3 ನೇ ದಿನದ ಪ್ರತಿಭಟನೆ ಆಗಿದ್ದು ಪೊಲೀಸರು ಸರಿಯಾದ ವ್ಯವಸ್ಥೆ ಮಾಡಿದ್ದಾರೆ. ನಾವು ಸುಮಾರು 150 ಜನರನ್ನು ಬಂಧಿಸಿದ್ದೇವೆ. ಕಾಂಗ್ರೆಸ್ ಇಂದು ಸಭೆಗೆ ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ; ಯಾವ ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿದೆ ಎಂದು ಅವರ ಪದಾಧಿಕಾರಿಗಳಿಗೆ ತಿಳಿದಿದೆ ಎಂದು ವಿಶೇಷ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಹೂಡಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಭೆಗೆ ಅನುಮತಿ ಇಲ್ಲ ಎಂದು ಪಕ್ಷಕ್ಕೆ ತಿಳಿಸಿದ್ದರೂ, ಕೆಲವು ಮುಖಂಡರು ಪ್ರತಿಭಟನೆಗೆ ಮುಂದಾದರು ಎಂದು ಹೂಡಾ ಹೇಳಿದ್ದಾರೆ “ಕೆಲವು ಕಾರ್ಯಕರ್ತರು ಇಂದು ನಮ್ಮ ಮನವಿಯನ್ನು ಒಪ್ಪದಿದ್ದಾಗ, ನಾವು ಅವರನ್ನು ಬಂಧಿಸಿದ್ದೇವೆ. ಎರಡೂವರೆ ದಿನಗಳಲ್ಲಿ ಸುಮಾರು 800 ಜನರನ್ನು ಬಂಧಿಸಲಾಗಿದೆ ಎಂದಿದ್ದಾರೆ ಹೂಡಾ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:30 pm, Wed, 15 June 22