AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಂಗ್ ಮೇಕರ್’ ಕನಸನ್ನು ನುಚ್ಚುನೂರುಗೊಂಡ ಬಳಿಕ ಕುಮಾರಸ್ವಾಮಿ ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ’

ಜನ ಕುಮಾರಸ್ವಾಮಿಯ‘ಕಿಂಗ್ ಮೇಕರ್’ ಕನಸು ನುಚ್ಚುನೂರು ಮಾಡಿದ್ದಾರೆ. ಇದರಿಂದ ಕನಸು ಭಗ್ನಗೊಂಡ ಹೆಚ್​ಡಿಕೆ ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

'ಕಿಂಗ್ ಮೇಕರ್' ಕನಸನ್ನು ನುಚ್ಚುನೂರುಗೊಂಡ ಬಳಿಕ ಕುಮಾರಸ್ವಾಮಿ ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ'
ದಿನೇಶ್ ಗುಂಡೂರಾವ್-ಹೆಚ್​ಡಿ ಕುಮಾರಸ್ವಾಮಿ
ಪ್ರಸನ್ನ ಗಾಂವ್ಕರ್​
| Edited By: |

Updated on:Aug 06, 2023 | 4:33 PM

Share

ಬೆಂಗಳೂರು, (ಆಗಸ್ಟ್ 06): ವಿದೇಶದಿಂದ ಬರುತ್ತಿದ್ದಂತೆಯೇ ಮಾಜಿ ಮುಖ್ಯಂಂತ್ರಿ ಹೆಚ್​ಡಿ ಕುಮಾರಸ್ವಾಮಿ(HD Kumaraswamy), ಕಾಂಗ್ರೆಸ್​ (Congress) ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಇದಕ್ಕೆ ಸಿಎಂ ಸಿದ್ದರಾಮಯ್ಯ,(Soddaramaiah) ಡಿಸಿಎಂ ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟುದ್ದಾರೆ. ಇದೀಗ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್​ ಮೂಲಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು,,ನಮ್ಮ ಸರ್ಕಾರ ಬಂದ ಮೇಲೆ ಕುಮಾರಸ್ವಾಮಿ ನಿದ್ದೆ, ನೆಮ್ಮದಿ ಹಾರಿ ಹೋಗಿದೆ‌. ಹತಾಶೆಯ ಕೂಪದಲ್ಲಿ ಬಿದ್ದು ಹೆಚ್​​ಡಿಕೆ ವಿಲ ವಿಲ ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕುಮಾರಸ್ವಾಮಿಗೆ ನಾವು ಉತ್ತರ ಕೊಡುವುದನ್ನು ಬಿಡಬೇಕು -ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಲೇವಡಿ

H.D.ಕುಮಾರಸ್ವಾಮಿ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಚುನಾವಣೆಗೂ ಮುನ್ನ ‘ಕಿಂಗ್ ಮೇಕರ್‘ ಕನಸು ಕಂಡಿದ್ದರು. ಆದ್ರೆ. ಜನ ಕುಮಾರಸ್ವಾಮಿಯ‘ಕಿಂಗ್ ಮೇಕರ್’ ಕನಸು ನುಚ್ಚುನೂರು ಮಾಡಿದ್ರು. ಕನಸು ಭಗ್ನಗೊಂಡ ಹೆಚ್​ಡಿಕೆ ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸರ್ಕಾರದ ವಿರುದ್ಧ ಹೆಚ್​​ಡಿ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಸುಮ್ಮನೇ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ, ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:31 pm, Sun, 6 August 23