ಕಾಂಗ್ರೆಸ್​ನಲ್ಲಿ ವಿಧಾನ ಪರಿಷತ್ ನಾಮ ನಿರ್ದೇಶನ ಫೈಟ್, ಮೂವರ ಹೆಸರು ಫೈನಲ್, ಯಾರ‍್ಯಾರು? ಇಲ್ಲಿದೆ ವಿವರ

ಶಾಸಕರ ಹಾಗೂ ಸಚಿವರ ನಡುವಿನ ವೈಮನಸ್ಸು ಮಧ್ಯೆ ಕಾಂಗ್ರೆಸ್​ನಲ್ಲಿ ಇದೀಗ ವಿಧಾನ ಪರಿಷತ್ ನಾಮನಿರ್ದೇಶ ಫೈಟ್​ ಜೋರಾಗಿದೆ.

ಕಾಂಗ್ರೆಸ್​ನಲ್ಲಿ ವಿಧಾನ ಪರಿಷತ್ ನಾಮ ನಿರ್ದೇಶನ ಫೈಟ್, ಮೂವರ ಹೆಸರು ಫೈನಲ್, ಯಾರ‍್ಯಾರು? ಇಲ್ಲಿದೆ ವಿವರ
ಡಿಕೆ ಶಿವಕುಮಾರ್​​, ಮಲ್ಲಿಕಾರ್ಜುನ್​ ಖರ್ಗೆ, ಸಿದ್ದರಾಮಯ್ಯ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Aug 06, 2023 | 5:43 PM

ಬೆಂಗಳೂರು, (ಆಗಸ್ಟ್, 06): ಕಾಂಗ್ರೆಸ್​ನಲ್ಲಿ (Congress) ಸದ್ಯ ಶಾಸಕ-ಸಚಿವ ನಡುವೆ ಅಸಮಾಧಾನ ಸ್ಫೋಟಗೊಂಡಿದೆ. ಇದರ ಮಧ್ಯೆ ಹೈಕಮಾಂಡ್ ಲೋಕಸಭಾ ಚುನಾವಣೆಗೆ ತಯಾರುವಂತೆ ಕರೆ ನೀಡಿದೆ. ಇದೆಲ್ಲರ ಮಧ್ಯೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸಚಿವ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧನ ಹೊರಹಾಕಿದ್ದಾರೆ. ಇದರ ನಡುವೆ ಇದೀಗ ಕಾಂಗ್ರೆಸ್​ನಲ್ಲಿ ವಿಧಾನಪರಿಷತ್ ನಾಮನಿರ್ದೇಶನ (MLC nomination )ಫೈಟ್​ ಜೋರಾಗಿದೆ. ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಮೂವರ ಹೆಸರು ಅಂತಿಮಗೊಳಿಸಿದ್ದಾರೆ. ಆದ್ರೆ, ಇದಕ್ಕೆ ಕಾಂಗ್ರೆಸ್​ ನಾಯಕರಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ.

ಇದನ್ನೂ ಓದಿ:ಅಸಮಾಧಾನ ಶಮನಕ್ಕೆ ಮುಂದಾದ ಸಿಎಂ, ಡಿಸಿಎಂ: ಸೋಮವಾರ ಆರು ಜಿಲ್ಲೆಗಳ ಸಚಿವರು, ಶಾಸಕರ ಜೊತೆ ಸಭೆ

ಒಕ್ಕಲಿಗರು ಸೇರಿದಂತೆ ಇತರರಿಗೆ ಪರಿಷತ್ ಸ್ಥಾನ ನೀಡಲು ಲಾಬಿ ಶುರುವಾಗಿದೆ. ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣಕ್ಕೆ ಮುಖ್ಯಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾಗುತ್ತಿದೆ. ಆದ್ರೆ, ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಉಮಾಶ್ರೀ, ಎಂ ಆರ್ ಸೀತಾರಾಂ ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ ಹೆಸರುಗಳನ್ನು ಸಿದ್ದರಾಮಯ್ಯ ಅವರು ಅಂತಿಮಗೊಳಿಸಿದ್ದಾರೆ. ಸುಧಾಮ್ ದಾಸ ಪರ ಡಿಕೆ ಬ್ರದರ್ಸ್ ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಸೀತಾರಾಂ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬಹುತೇಕ ಈ ಮೂರು ಹೆಸರುಗಳೇ ಫೈನಲ್ ಎನ್ನಲಾಗಿದ್ದು. ಸೋಮವಾರ (ಆಗಸ್ಟ್ 07) ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಭೇಟಿಯಾಗಿ ಪತ್ರ ನೀಡುವ ನಿರೀಕ್ಷೆ ಇದೆ. ಆದ್ರೆ, ಸುಧಾಮ್ ದಾಸ್ ಹೆಸರಿಗೆ ಕಾಂಗ್ರೆಸ್​ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಇನ್ನು ಉಮಾಶ್ರೀಗೂ ಸ್ಥಾನ ನೀಡುತ್ತಿರುವುದಕ್ಕೆ ಹಿರಿಯರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಪಟ್ಟ ಹಿಡಿದು ಉಮಾಶ್ರೀ ಹಾಗೂ ಸೀತಾರಾಂ ಹೆಸರು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ನಾಮನಿರ್ದೇಶಿತ ಪರಿಷತ್ ಸದಸ್ಯರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್, ರಾಜ್ಯಪಾಲರಿಗೆ ಹೆಸರೇ ಕಳುಹಿಸಿಲ್ಲ. ಇದೆಲ್ಲ ಕೇವಲ ಪತ್ರಿಕೆಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ. ಮನ್ಸೂರ್ ಅಲಿ ಖಾನ್ ಆಗಲಿ ಬೇರೆಯವರ ಹೆಸರಾಗಲಿ ಇನ್ನೂ ಶಿಫಾರಸೇ ಆಗಿಲ್ಲ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಆಗುವುದಿಲ್ಲ. ಇವರಿಗೆ ಎಂಎಲ್​ಸಿ ಸ್ಥಾನ ಕೊಡಿ ಅಂತ ನಾವು ಯಾರ ಹೆಸರನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:30 pm, Sun, 6 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ