ಬಿಎಸ್ ಯಡಿಯೂರಪ್ಪ ಕಟ್ಟಿದ ಮನೆಯಲ್ಲಿ ಬೇರೆಯವರು ಇರುವುದಲ್ಲ: ಸಿಎಂ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಟಾಂಗ್

ಮಠಾಧೀಶರ ಸಮಾವೇಶ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೋಸ್ಥರ್ಯ ಹೆಚ್ಚಿಸಲು ಸಮಾವೇಶವನ್ನು ನಡೆಸಲಾಗಿದೆ ಎಂದಿರುವ ದಿಂಗಾಲೇಶ್ವರ ಶ್ರೀಗಳು ಬಿಎಸ್​ವೈ ಪರ ನಿಂತಿದ್ದಾರೆ. ಸಿಎಂ ವಿರೋಧಿ ಪಾಳಯವನ್ನು ತೀಕ್ಷ್ಣ ಮಾತುಗಳಿಂದ ಕುಟುಕಿರುವ ಅವರು ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸಿಸುವುದಲ್ಲ ಎಂದಿದ್ದಾರೆ.

ಬಿಎಸ್ ಯಡಿಯೂರಪ್ಪ ಕಟ್ಟಿದ ಮನೆಯಲ್ಲಿ ಬೇರೆಯವರು ಇರುವುದಲ್ಲ: ಸಿಎಂ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಟಾಂಗ್
ದಿಂಗಾಲೇಶ್ವರಶ್ರೀ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Jul 25, 2021 | 4:49 PM

ಬೆಂಗಳೂರು: ಯಾರೋ ಕಟ್ಟಿದ ಮನೆಯಲ್ಲಿ ಇನ್ಯಾರೋ ಇರುವುದಲ್ಲ. ಬಿಎಸ್‌ವೈ ಕಟ್ಟಿದ ಮನೆಯಲ್ಲಿ ಬೇರೆಯವರು ಇರುವುದಲ್ಲ ಎಂದು ಮುಖ್ಯಮಂತ್ರಿ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಅವರು ಬಿಜೆಪಿಯಲ್ಲಿದ್ದುಕೊಂಡೇ ಯಡಿಯೂರಪ್ಪನವರ ವಿರುದ್ಧ ಮಾತನಾಡುವವರನ್ನು ಕುಟುಕಿದರು. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡುವುದಲ್ಲ ಎಂದು ರೂಪಕದೊಂದಿಗೆ ವಿವರಿಸಿದ ಅವರು ಪಕ್ಷ ವಿರೋಧಿಗಳು ತಪ್ಪು ಸರಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿವಿಮಾತು ಹೇಳಿದರು. 

“ಕಳೆದ ವರ್ಷ ನೆರೆ ಬಂದಾಗ 45 ದಿನ ಬಿಎಸ್‌ವೈ ಒಬ್ಬರೇ ಕೆಲಸ ಮಾಡಿದ್ದರು. ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್‌ರಂತಹ ನಾಯಕರು ಕೂಡ ಇದ್ದಾರೆ. ಆದರೆ ಅವರು ಬೇರೆಯವರನ್ನು ತೇಜೋವಧೆ ಮಾಡಬಾರದು. ಯಾವುದು ಸರಿ ಎಂದು ಸೂಕ್ಷ್ಮವಾಗಿ ಗಮನಿಸಬೇಕು. ಸನ್ಯಾಸಿಗಳ ಮಾತು ಉಲ್ಲಂಘಿಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದರು.

ಬಿ.ಎಸ್.ಯಡಿಯೂರಪ್ಪ ಜಾತ್ಯಾತೀತ ನಾಯಕ: ಸಮಾವೇಶದಲ್ಲಿ ದಿಂಗಾಲೇಶ್ವರ ಶ್ರೀಗಳ ಹೇಳಿಕೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ಯತೀತ ನಾಯಕರಾದ ಕಾರಣದಿಂದಲೇ ಮಠಾಧೀಶರು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಠಾಧೀಶರ ಸಮಾವೇಶದಲ್ಲಿ ಅವರು ಮಾತನಾಡಿದರು.  ಇತ್ತೀಚೆಗೆ ಮಠಾಧೀಶರ ನಡೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಮಠಾಧೀಶರಿಗೇಕೆ ರಾಜಕೀಯ ಅಂತೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಯಾರೋ ಏನೋ ಹೇಳಿದರೆಂದು ನಾವು ಸುಮ್ಮನಾಗಬಾರದು. ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಆದ್ದರಿಂದಲೇ ಯಡಿಯೂರಪ್ಪನವರ ಪರವಾಗಿ ನಾವೆಲ್ಲಾ ಸೇರಿದ್ದೇವೆ ಎಂದು ಶ್ರೀಗಳು ನುಡಿದರು.

ನೂರಾರು ವರ್ಷಗಳ ಹಿಂದಿನಿಂದಲೂ ಮಠಗಳು ಇವೆ. ರಾಜಕೀಯ ಪಕ್ಷಗಳಿಗೂ ಮುನ್ನವೇ ಮಠಗಳು ಹುಟ್ಟಿವೆ. ರಾಜಕಾರಣಿಗಳಿಗೆ ಸಂಸ್ಕಾರ ಇದ್ದರೆ ಗೌರವ ನೀಡುತ್ತಾರೆ. ಸಂಸ್ಕಾರವಿರುವ ನಾಯಕರು ಎಲ್ಲ ಪಕ್ಷದಲ್ಲೂ ಇದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ. ಮಠಾಧೀಶರು ಶಕ್ತಿ ಪ್ರದರ್ಶನ ಮಾಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಾವೇಶವನ್ನು ಬಿಎಸ್‌ವೈ, ಅವರ ಮಕ್ಕಳು ಆಯೋಜಿಸಿದ್ದಾರೆಂದು ಆರೋಪವನ್ನು ತಳ್ಳಿ ಹಾಕಿದರು. ಸಮಾವೇಶವನ್ನು ಮಠಾಧೀಶರೇ ತೀರ್ಮಾನಿಸಿ ನಡೆಸಲಾಗಿದೆ. ಯಡಿಯೂರಪ್ಪನವರಿಗೆ ಮನೋಸ್ಥೈರ್ಯ ತುಂಬಲು ಸಮಾವೇಶವನ್ನು ಆಯೋಜಿಸಲಾಗಿತ್ತು. ಬಿಜೆಪಿ ಹೈಕಮಾಂಡ್​ ಅನ್ನು ಮಠಾಧೀಶರು ಯಾರೂ ಸಹ ವಿರೋಧಿಸುತ್ತಿಲ್ಲ. ವೈಯಕ್ತಿಕವಾಗಿ ತಾವು ಯಾರ ಪರವೂ ಅಲ್ಲ ಎಂದು ಶ್ರೀಗಳು ಈ ವೇಳೆ ಸ್ಪಷ್ಟಪಡಿಸಿದರು.

ಅನುದಾನವನ್ನು ಎಲ್ಲರೂ ನೀಡಿದ್ದಾರೆ:

ಮಠಾಧೀಶರು ಅನುದಾನಕ್ಕಾಗಿ ಕೈಚಾಚಿದವರಲ್ಲ. ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದೂ ಇಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು. ಇದಕ್ಕೆ ಉದಾಹರಣೆಯನ್ನು ನೀಡಿದ ಶ್ರೀಗಳು, ಯಡಿಯೂರಪ್ಪ ಮಠಮಾನ್ಯಗಳಿಗೆ ಅನುದಾನವನ್ನು ಕೊಟ್ಟರು. ಹಾಗೆಯೇ ಕುಮಾರಸ್ವಾಮಿಯವರು ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರೂ ಅನುದಾನವನ್ನು ಕೊಟ್ಟಿದ್ಧಾರೆ. ಆದರೆ ಎಂದೂ ಸಹ ಮಠಗಳು, ಮಠಾಧೀಶರು ತಾವಾಗಿಯೇ ಅನುದಾನಕ್ಕಾಗಿ ಕೈಚಾಚಿಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್​​ನಲ್ಲಿ ವಿವಿಧ ಸಮುದಾಯದ ಮಠಾಧೀಶರು ‘ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ’ವಿಷಯದ ಮೇಲೆ ಚರ್ಚೆ ನಡೆಸಿದರು. ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮೀಜಿ, ಗದಗ ಜಿಲ್ಲೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕತೊಟ್ಟಿಲಕೆರೆ ಅಟವಿ ಶಿವಲಿಂಗ ಸ್ವಾಮೀಜಿ, ಮುರುಘಾ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.

Lingyat Community seers PTI

ಮಠಾಧೀಶರ ಸಮಾವೇಶದಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳು (ಪಿಟಿಐ ಚಿತ್ರ)

ಸಿಎಂ ಬದಲಾಯಿಸಿದರೆ ಮುಂದಿನ ನಡೆ ಅನಂತರ ಹೇಳುತ್ತೇವೆ:

ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸದಂತೆ ಹೇಳಿದ್ದೇವೆ. ಯಡಿಯೂರಪ್ಪ ಅಧಿಕಾರ ಸಾಕು ಎಂದಾಗ ಬೇಕಾದರೆ ಕೆಳಗಿಳಿಸಲಿ. ಆದರೆ ಸುಖಾಸುಮ್ಮನೆ ಬದಲಾವಣೆ ಮಾಡಬೇಡಿ ಎಂದು ದಿಂಗಾಲೇಶ್ವರ ಶ್ರೀಗಳು ಸಲಹೆ ನೀಡಿದ್ದಾರೆ. ಸಮಾವೇಶ ಮುಗಿದ ನಂತರ  ಮಾತನಾಡಿದ ಅವರು, ಒಂದು ವೇಳೆ ಬದಲಾವಣೆ ಮಾಡಿದರೆ ಮುಂದೆ ತಮ್ಮ ನಡೆಯನ್ನು ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ..ಅವರ ಸ್ಥಾನ ಬದಲಾವಣೆ ಮಾಡಬೇಕು ಎಂದು ನನಗೆ ಅನ್ನಿಸಿಲ್ಲ: ಜೆ.ಪಿ.ನಡ್ಡಾ

ಇದನ್ನೂ ಓದಿ: ‘ಮಾಸ್ಕ್ ಎಲ್ಲಿ ಸ್ವಾಮಿ?’ ಮುಖಗವಸು ಇಲ್ಲದೆ ಸೈಕಲ್​ನಲ್ಲಿ ಬೆಂಗಳೂರು ಸುತ್ತಿದ ತೇಜಸ್ವಿ ಸೂರ್ಯಗೆ ಜನರ ಪ್ರಶ್ನೆ

(Dingaleshwara Sri supports Karnataka CM BS Yediyurappa and criticizes some BJP leaders)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್